ರಾಜ್ಯ

ಇನ್ಫೋಸಿಸ್ ಸಂಸ್ಥೆಯ ವಿರುದ್ಧ ಶಾಸಕ ಅರವಿಂದ ಬೆಲ್ಲದ ಅಸಮಾಧಾನ

ಧಾರವಾಡ ಪ್ರಜಾಕಿರಣ.ಕಾಮ್ :  ಸರಕಾರದಿಂದ ಕಡಿಮೆ ದರದಲ್ಲಿ ಭೂಮಿ ಪಡೆದು ಉದ್ಯೋಗಾವಕಾಶ ಸೃಷ್ಟಿಸದ ಇನ್ಫೋಸಿಸ್ ಸಂಸ್ಥೆಯ ವಿರುದ್ಧ ವಿಧಾನಸಭೆಯಲ್ಲಿ ಮಂಗಳವಾರ ಪ್ರತಿಪಕ್ಷ ಉಪ ನಾಯಕ ಅರವಿಂದ ಬೆಲ್ಲದ ಹರಿಹಾಯ್ದ ಪ್ರಸಂಗ ನಡೆಯಿತು.

ಅಧಿವೇಶನದಲ್ಲಿ
ಗಮನ ಸೂಚನೆಯಡಿ ವಿಷಯ ಪ್ರಸ್ತಾಪಿಸಿದ ಅವರು,
ತಮ್ಮ ಕ್ಷೇತ್ರದಲ್ಲಿನ ಗೋಕುಲ ಗ್ರಾಮದ ಬಳಿಯ ಕೈಗಾರಿಕಾ ಪ್ರದೇಶದಲ್ಲಿ ಇನ್ಫೋಸಿಸ್ ‌ಸಂಸ್ಥೆಯು 58 ಎಕರೆ ಜಮೀನನ್ನು ಪಡೆದಿದೆ.

ಅಂದು ಮಾರುಕಟ್ಟೆಯಲ್ಲಿ 1 ಕೋಟಿಗೂ ಅಧಿಕ‌ ಬೆಲೆ ಇದ್ದ ಸಮಯದಲ್ಲಿ ಬರೀ 35 ಲಕ್ಷ ರೂಪಾಯಿಗೆ ಒಂದು‌ ಎಕರೆ ಜಮೀನು ಪಡೆದಿದೆ.

ತಮ್ಮ‌ ಜಮೀನಿಗೆ 1 ಕೋಟಿ ರೂಪಾಯಿಗೂ ಅಧಿಕ ಮೌಲ್ಯವಿದೆ. ಹೀಗಾಗಿ ಕಡಿಮೆ ಬೆಲೆಗೆ ಭೂಮಿ ನೀಡುವುದಿಲ್ಲ.

ಒಂದು ವೇಳೆ ಒತ್ತಡ ಹಾಕಿದರೆ ನ್ಯಾಯಾಲಯದ ಮೆಟ್ಟಿಲೇರುವುದಾಗಿ ಹೇಳಿದರು.

ಆಗ ನಾನೇ ಮಧ್ಯೆ ಪ್ರವೇಶಿಸಿ,ಈ ಭಾಗದಲ್ಲಿ ಬೃಹತ್ ಸಂಸ್ಥೆಗಳು ಬರಲಿ. ಅಭಿವೃದ್ಧಿ ಜೊತೆಗೆ ಸ್ಥಳೀಯ ಯುವಕರಿಗೆ ಉದ್ಯೋಗ ಸಿಗಲಿದೆ ಎಂದು ಸಮಾಧಾನ ಪಡಿಸಿದ್ದೆನು.

ಆದರೆ ಕಂಪನಿ ಈಗ ಅಲ್ಲಿ‌ ಮರ ನೆಟ್ಟು ಸುಮ್ಮನಾಗಿದೆ.
ಯಾವುದೇ ಉತ್ಪಾದನೆ ಇಲ್ಲ. ಮತ್ತು ಯಾವುದೇ ಉದ್ಯೋಗಗಳು ಸ್ಥಳೀಯ ಯುವಕರಿಗೆ ಲಭಿಸಿಲ್ಲ.

ಸಂಸ್ಥೆಯ ಇಂತಹ ಧೋರಣೆಯಿಂದ ರೈತರ ಕಣ್ಣಲ್ಲಿ ಕಣ್ಣಿಟ್ಟು ನೋಡಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಸಂಸ್ಥೆಗೆ ಮಂಜೂರು ಮಾಡಿರುವ ಭೂಮಿಯನ್ನು ‌ಕೂಡಲೇ ವಾಪಸ್ಸು ಪಡೆಯಬೇಕು ಎಂದು ಸರಕಾರವನ್ನು ಒತ್ತಾಯಿಸಿದರು.

ಒಂದು ಹಂತದಲ್ಲಿ ಕೋಪಗೊಂಡ ಬೆಲ್ಲದ ಅವರು,‌ ಇನ್ಫೋಸಿಸ್ ಸಂಸ್ಥೆಯವರು ಹೇಳುವುದು ಆಚಾರ ಮಾತ್ರ. ಮಾಡುವುದು ಇಂತಹ ಕೆಲಸ ಎಂದು ವ್ಯಂಗ್ಯವಾಡಿದರು.

*ಟ್ಯಾಂಕರ್ ಲಾಬಿ ನಿಯಂತ್ರಿಸಿ:*
ರಾಜ್ಯದ ಕೆಲವು ಕಡೆ ನದಿಮೂಲಗಳ ನೀರು ಜನರಿಗೆ ಸಮರ್ಪಕವಾಗಿ ಲಭ್ಯವಾಗುತ್ತಿಲ್ಲ.

ಆದರೆ, ಹಣ ಪಡೆದು
ನೀರು ಪೂರೈಸುವ ಟ್ಯಾಂಕರ್ ಗಳಿಗೆ ನೀರು ಸಿಗುತ್ತದೆ. ಇದರ ಹಿಂದೆ ಬಹು ದೊಡ್ಡ ಲಾಬಿ ಇದೆ. ಅದನ್ನು ಮಟ್ಟ ಹಾಕಬೇಕು ಎಂದು ಬೆಲ್ಲದ ಆಗ್ರಹಿಸಿದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *