ರಾಜ್ಯ

ನನ್ನ ವಿರುದ್ದ ರಾಜಕೀಯ ದುರುದ್ದೇಶಕ್ಕಾಗಿ ಭ್ರಷ್ಟಾಚಾರ ಆರೋಪ : ಹೊರಟ್ಟಿ ತಿರುಗೇಟು

ನನ್ನ ಕಾರ್ಯ ವೈಖರಿ ಶ್ರೀರಕ್ಷೆ : ಎಂಟನೇ ಬಾರಿ ಗೆಲುವಿನ ವಿಶ್ವಾಸ

ಧಾರವಾಡ prajakiran.com : ಏಳು ಬಾರಿ ನನ್ನನ್ನು ತಮ್ಮ ಪ್ರತಿನಿಧಿಯನ್ನಾಗಿ ಆಯ್ಕೆ ಮಾಡಿರುವ ಶಿಕ್ಷಕರು ಎಂಟನೇ ಬಾರಿ ಗೆಲುವಿನ ನಗೆ ಬೀರುವಂತೆ ಮಾಡಲಿದ್ದಾರೆ ಎಂಬ  ವಿಶ್ವಾಸ ನನಗಿದೆ ಎಂದು ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಬಸವರಾಜ ಹೊರಟ್ಟಿ ತಿಳಿಸಿದರು.

ನನ್ನ ಮೇಲೆ ಇಲ್ಲಸಲ್ಲದ ಭ್ರಷ್ಟಚಾರ ಆರೋಪ ಮಾಡುತ್ತಿರುವವರೇ ಪ್ರತಿಸ್ಪರ್ಧಿಗಳಿದ್ದಾರೆ ಎಂದು ತಿರುಗೇಟು ನೀಡಿದರು. ಆದರೆ ಅವರ ಹೆಸರು ಬಹಿರಂಗವಾಗಿ ಹೇಳಲು ನಿರಾಕರಿಸಿದರು.

ಸರ್ವೋದಯ ಟ್ರಸ್ಟ ಕುರಿತು  ರಾಜಕೀಯ ದುರುದ್ದೇಶಕ್ಕಾಗಿ ಅಪಪ್ರಚಾರ ಮಾಡಲಾಗುತ್ತಿದೆ. ಈ ಪ್ರಕರಣ ನ್ಯಾಯಾಲಯದ ಮುಂದೆ ಇದೆ. ನ್ಯಾಯಾಲಯದ ತೀರ್ಪನ್ನು ಗೌರವಿಸುತ್ತೇನೆ ಎಂದು ಹೇಳಿದರು.

ಶಿಕ್ಷಕರು ನನ್ನ ಕಾರ್ಯ ವೈಖರಿ ಬಗ್ಗೆ ಸಂಪೂರ್ಣ ಮಾಹಿತಿ ಹೊಂದಿದ್ದಾರೆ. ಅವರೆಲ್ಲರೂ ಪ್ರಜ್ಞಾವಂತರಾಗಿದ್ದು ತಮ್ಮ ಜನಪ್ರತಿನಿಧಿಯನ್ನು ಚುನಾಯಿಸುವ ಪರಿಜ್ಞಾನ ಹೊಂದಿದ್ದಾರೆ

ಈ ಬಾರಿಯು ಗೆಲುವು ನನ್ನದೆ ಎಂದು ಪಶ್ಚಿಮ ವಿಧಾನಪರಿಷತ್ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಬಸವರಾಜ ಹೊರಟ್ಟಿ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಕ್ಷಣ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಹಾಗೂ ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕಾಗಿ ನಾನು ಮಾಡಿದ ಕೆಲಸ ಕಾರ್ಯಗಳು ಎಲ್ಲ ಶಿಕ್ಷಕರಿಗೂ ಮನದಟ್ಟಾಗಿದ್ದು ಆ ಕಾರಣಕ್ಕಾಗಿಯೇ ಕಳೆದ ಏಳು ಬಾರಿಯಿಂದ ನನ್ನನ್ನು ತಮ್ಮ ಪ್ರತಿನಿಧಿಯನ್ನಾಗಿ ಚುನಾಯಿಸಿದ್ದಾರೆ ಎಂದರು.

ಕಳೆದ 42 ವರ್ಷಗಳಿಂದ ಶಿಕ್ಷಕರ ಪ್ರತಿನಿಧಿಯಾಗಿ ಕೆಲಸ ಮಾಡುತ್ತಿದ್ದು ಶಿಕ್ಷಕರಿಂದ ಇಂದಿನವರೆಗೂ ಒಂದು ನಯಾ ಪೈಸೆಯನ್ನೂ ಪಡೆಯದೇ ಅತ್ಯಂತ ಪ್ರಾಮಾಣಿಕತೆಯಿಂದ ಹಾಗೂ ಶೃದ್ಧೆ ವಿಶ್ವಾಸಗಳಿಂದ ಕೆಲಸ ಮಾಡಿದ್ದೇನೆ.

ಶಿಕ್ಷಕರ ಪ್ರತಿನಿಧಿಯಾಗಿ ಹಾಗೂ ಶಿಕ್ಷಣ ಸಚಿವನಾಗಿ ಕೆಲಸ ಮಾಡಿದ ಸಂದರ್ಭದಲ್ಲಿ ಶಿಕ್ಷಕರ ಸಮಸ್ಯೆಗಳ ಸರಕಾರದಿಂದ ಶೈಕ್ಷಣಿಕ ಕ್ಷೇತ್ರದ ಸುಧಾರಣೆಗಾಗಿ ಹೊರಡಿಸಲಾಗಿರುವ ಎಲ್ಲ ಸರಕಾರಿ ಆದೇಶಗಳ ಪ್ರತಿಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸುವದರ ಮೂಲಕ ಆಯ್ಕೆಯಾಗುವ ದೇಶದ ಏಕೈಕ ಜನಪ್ರತಿನಿಧಿ ಎಂಬ ಹೆಗ್ಗಳಿಕೆ ನನ್ನದಾಗಿದೆ ಎಂದು ಹೆಮ್ಮೆಯಿಂದ ಹೇಳಬಯಸುತ್ತೇನೆ ಎಂದರು.

42 ವರ್ಷಗಳಿಂದ ಶೈಕ್ಷಣಿಕ ಕ್ಷೇತ್ರ ಸುಧಾರಣೆಗೆ ನಾನು ಮಾಡಿದ ಸೇವೆ ಹಾಗೂ ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ನಾನು ಮಾಡಿದ ಹೋರಾಟಗಳ ಕುರಿತು ನನ್ನ ಪ್ರತಿಸ್ಪರ್ಧಿಗಳು ಇಚ್ಛಿಸಿದರೆ ಒಂದೇ ವೇದಿಕೆಯಲ್ಲಿ ಬಹಿರಂಗ ಚರ್ಚೆಗೆ ನಾನು ಸಿದ್ಧನಿದ್ದೇನೆ.

ಇದಕ್ಕೆ ಅವರು ನಿಗದಿಪಡಿಸುವ ದಿನಾಂಕ ಹಾಗೂ ವೇದಿಕೆಗೆ ಖುದ್ದಾಗಿ ಬಂದು ಮಾಧ್ಯಮದವರ ಮುಂದೆ ದಾಖಲೆಗಳ ಸಮೇತ ವಿವರಣೆ ನೀಡಲು ಸದಾ ಸಿದ್ಧನಾಗಿದ್ದೇನೆ ಎಂದರು

ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟ ಸುಪ್ರೀಂ ಕೋರ್ಟ್ ಎದುರಿಗೆ ಇದೆ. ಈ ಬಗ್ಗೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಲ್ಲ ಎಂದು ಹೇಳಿದ ಅವರು ಸಿದ್ದರಾಮಯ್ಯ ಕೂಡ ಅಜ್ಜನಾಗಿದ್ದಾನೆ ಮನೆಯಲ್ಲಿ ಮೋಮ್ಮಕ್ಕಳನ್ನು ಆಡಿಸಿಕೊಂಡು ಇರಲಿ ಎಂದು ಕುಟುಕಿದರು.

ಅಲ್ಲದೆ, ಈ ಹಿಂದೆ ಸಿದ್ದರಾಮಯ್ಯ ಕಾಲ್ಪನಿಕ ವೇತನ, ಜ್ಯೋತಿ ಸಂಜೀವಿನಿ ಯೋಜನೆ ಅನುದಾನ ಕೊರತೆ ಹೇಳಿದರು. ಈಗ ಹೇಗೆ ಜಾರಿಗೆ ಬದ್ದ ಎನ್ನುತ್ತಾರೆ ಎಂದು ಪ್ರಶ್ನಿಸಿದರು

ಪತ್ರಿಕಾಗೋಷ್ಠಿಯಲ್ಲಿ ಹು-ಧಾ ಮಹಾನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜಯ ಕಪಟಕರ , ಮೇಯರ ಈರೇಶ ಅಂಚಟಗೇರಿ, ಪಾಲಿಕೆ ಸದಸ್ಯ ರಾಜಣ್ಣ ಕೊರವಿ, ಶ್ಯಾಮ ಮಲ್ಲನಗೌಡರ, ಜಿ.ವಿ.ಭಟ್ , ಮೋಹನ ರಾಮದುರ್ಗ ಮತ್ತಿತರರು ಉಪಸ್ಥಿತರಿದ್ದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *