ರಾಜ್ಯ

ಧಾರವಾಡ 71-ಕ್ಷೇತ್ರ ಜಿಪಿಎ ಹೋಲ್ಡರ್ ಕೈಯಲ್ಲಿದೆ ಎಂದು ವ್ಯಂಗ್ಯವಾಡಿದ ಮಾಜಿ ಶಾಸಕ

*ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಧಾರವಾಡದಲ್ಲಿ ಬಿಜೆಪಿಯಿಂದ ಬೃಹತ್ ಪ್ರತಿಭಟನೆ*

*ಧಾರವಾಡ 71- ಕ್ಷೇತ್ರ ಜಿಪಿಎ ಹೋಲ್ಡರ್ ಕೈಯಲ್ಲಿದೆ ಎಂದು ವ್ಯಂಗ್ಯ ವಾಡಿದ ಮಾಜಿ ಶಾಸಕ*

*ಹಾಲಿ ಶಾಸಕರ ಹೆಸರು ಪ್ರಸ್ತಾಪಿಸದೆ ಮಾಜಿ ಸಚಿವರ ವಿರುದ್ಧ ವಾಗ್ದಾಳಿ*

ಧಾರವಾಡ ಪ್ರಜಾಕಿರಣ.ಕಾಮ್ : ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಧಾರವಾಡದ
ಕಲಾಭವನದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಬಿಜೆಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಈ ವೇಳೆ ಮಾತನಾಡಿದ ಮಾಜಿ ಶಾಸಕ ಅಮೃತ ದೇಸಾಯಿ, ನಮ್ಮ ಕ್ಷೇತ್ರ
ಧಾರವಾಡ 71- ಅಂತು ಜಿಪಿಎ ಹೋಲ್ಡರ್ ಕೈಯಲ್ಲಿದೆ
ಎಂದು ವ್ಯಂಗ್ಯ ವಾಡಿದರು.

ಹಾಲಿ ಶಾಸಕರ ಹೆಸರು ಪ್ರಸ್ತಾಪಿಸದೆ ಮಾಜಿ ಸಚಿವರ ವಿರುದ್ಧ ವಾಗ್ದಾಳಿ ನಡೆಸಿದರು.

* ಕೆಲವು ಕಡೆ ಮುಂಗಾರು ಬಿತ್ತನೆ ಆಗಿದ್ದು ಈಗ ಮಳೆ ಇಲ್ಲದೆ ಬೆಳೆ ಒಣಗುವ ಸ್ಥಿತಿಗೆ ಬಂದಿರುತ್ತದೆ. ಹೀಗಾಗಿ ಧಾರವಾಡ ತಾಲೂಕು ಬರಪೀಡಿತ ಎಂದು ಘೋಷಿಸಿ ಪ್ರತಿ ಎಕರೆಗೆ ರೂ: 20, ಸಾವಿರ/- ಪರಿಹಾರ ಹಣ ಮಂಜೂರ ಮಾಡಬೇಕು.

* ಅಸಮರ್ಪಕ ವಿದ್ಯುತ್ ಪೂರೈಕೆ ಆಗುತ್ತಿದ್ದು ಅನಧಿಕೃತ ಲೋಡ್‌ಶೆಡ್ಡಿಂಗ್‌ನಿಂದ ಜಮೀನಿಗೆ ನೀರು ಹಾಯಿಸಲು ತೊಂದರೆಯಾಗುತ್ತಿದೆ.

ವಿದ್ಯುತ್ ಬಿಲ್ಲು ಏರಿಕೆಯಾಗಿದ್ದು ಇದರಿಂದ ಗ್ರಾಮಗಳ ಜನರು ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದು, ಏರಿಕೆಯಾದ ವಿದ್ಯುತ್ ದರವನ್ನು ಕಡಿಮೆ ಮಾಡಿ ಪುನಃ ಮೊದಲಿನಂತೆ ವಿದ್ಯುತ್ ಬಿಲ್ ಆಕರಣೆ ಮಾಡುವಂತಾಗಬೇಕು.

* ಕಿಸಾನ ಸಮ್ಮಾನ ಯೋಜನೆ ನಿಲ್ಲಿಸಿದ್ದು ಖೇದಕರ ಸಂಗತಿಯಾಗಿದೆ. ಅದನ್ನು ಪುನಃ ಪ್ರಾರಂಭಿಸಿ ರೈತರ ಖಾತೆಗಳಿಗೆ ವಾರ್ಷಿಕವಾಗಿ ರೂ: 4000 ಹಣ ಹಾಕಬೇಕು.

* ರೈತ ವಿದ್ಯಾ ನಿಧಿ ಈ ಹಿಂದಿನ ಸರ್ಕಾರ ಯೋಜನೆ ರೂಪಿಸಿ ರೈತರ ಶಾಲಾ ಮಕ್ಕಳಿಗೆ ಅನುಕೂಲವಾಗುವ ಸಲುವಾಗಿ ಸ್ಥಾಲರಶಿಫ್ ನೀಡುತ್ತಿದ್ದರು.

ಆದರೆ ಇಂದಿನ ಸರ್ಕಾರ ಅದನ್ನು ನಿಲ್ಲಿಸಿದ್ದು ರೈತರ ಮಕ್ಕಳ ವಿದ್ಯಾಭ್ಯಾಸಕ್ಕೆ ತುಂಬಾ ತೊಂದರೆಯಾಗುತ್ತಿದ್ದು, ಯೋಜನೆಯನ್ನು ಪುನಾರಾರಂಭಿಸಬೇಕು.

ರೈತರಿಗೆ ಈ ಹಿಂದಿನ ಸರ್ಕಾರ ಜಾರಿಗೆ ತಂದಿರುವ ಎ.ಪಿ.ಎಂ.ಸಿ ಕಾಯ್ದೆಯನ್ನು ತಿದ್ದುಪಡಿ ಮಾಡಿದ್ದರಿಂದ ನಿಗದಿತ ಬೆಲೆ ಸಿಗುತ್ತಿಲ್ಲ.

ಆದ್ದರಿಂದ ಮುಕ್ತ ಮಾರುಕಟ್ಟೆಯಿಂದ ರೈತ ಬೇರೆ ಎ.ಪಿ.ಎಂ.ಸಿ ಗಳಿಗೆ ಹೋಗಿ ಮಾರಾಟ ಮಾಡಬಹುದು ಆದ್ದರಿಂದ ರೈತಾಪಿ ವರ್ಗಕ್ಕೆ ಅನುಕೂಲವಾಗುವ ತಿದ್ದುಪಡಿಯಾದ ಎ.ಪಿ.ಎಂ.ಸಿ ಕಾಯ್ದೆಯನ್ನು ಮರಳಿ ತರಬೇಕು. *

* ಬೆಲೆ ಏರಿಕೆ, ಎಲ್ಲಾ ದಿನಸಿ ವಸ್ತುಗಳು ಮತ್ತು ಖಾದ್ಯತೈಲಗಳ ಬೆಲೆ ಗಗನಕ್ಕೆ ಹೋಗಿರುವುದರಿಂದ ಜನಸಾಮಾನ್ಯರು ತತ್ತರಿಸಿ ಹೋಗಿರುತ್ತಾರೆ. ತಕ್ಷಣದಿಂದ ಬೆಲೆ ಏರಿಕೆಯನ್ನು ನಿಯಂತ್ರಿಸಬೇಕು.

* ಇತ್ತೀಚಿನ ದಿನಗಳಲ್ಲಿ ಸುರಿದ ಅಕಾಲಿಕ ಮಳೆಯಿಂದ ಸಾಕಷ್ಟು ಪ್ರಮಾಣದಲ್ಲಿ ಮನೆಗಳು ಬಿದ್ದು ಅದರಲ್ಲಿರುವ ಜನಸಾಮಾನ್ಯರಿಗೆ ವಸತಿಗೆ ತೊಂದರೆಯಾಗಿರುತ್ತದೆ

ಪ್ರತಿ ಬಿದ್ದ ಮನೆಗೆ ಕೂಡಲೆ ಪೂರ್ಣ ಪ್ರಮಾಣದಲ್ಲಿ ಬಿದ್ದ ಮನೆಗೆ 5 ಲಕ್ಷ ರೂಪಾಯಿಗಳು ಮತ್ತು ಅಪೂರ್ಣ’ ಬಿದ್ದ ಮನೆಗೆ 3 ಲಕ್ಷ ರೂಪಾಯಿಗಳನ್ನು ಹಾಗೂ ಸ್ವಲ್ಪ ಪ್ರಮಾಣ ಹಾನಿಯದ 50 ಸಾವಿರ ರೂಪಾಯಿಗಳನ್ನು ತ್ವರಿತಗತಿಯಲ್ಲಿ ಹಣ ಮಂಜೂರ ಮನೆಗಳಿಗೆ ಮಾಡಬೇಕು.

* ಶಕ್ತಿ ಯೋಜನೆಯಿಂದ ಶಾಲಾ ಮಕ್ಕಳಿಗೆ ತೊಂದರೆಯಾಗುತ್ತಿದ್ದು ಬಸ್ಸುಗಳ ಸಂಖ್ಯೆಯನ್ನು ಹೆಚ್ಚು ಮಾಡಿ ಇಲ್ಲವೆಂದಾದರೆ ಶಾಲಾ ಮಕ್ಕಳಿಗೆ ಪ್ರತ್ಯೇಕ ಬಸ್ಸಿನ ವ್ಯವಸ್ಥೆಯನ್ನು ಕಲ್ಪಿಸಿಕೊಡಿ.

*ಈ ಸರ್ಕಾರ ಪ್ರಾರಂಭಿಸಲು ಪ್ರಯತ್ನಪಡುತ್ತಿರುವ 5ನೇ ಗ್ಯಾರಂಟಿ ಯೋಜನೆಯಾದ ಯುವನಿಧಿ ಯೋಜನೆ, ಐದಾರು ವರ್ಷಗಳ ಹಿಂದೆ ಕಲಿತು ನಿರುದ್ಯೋಗಿಯಾಗಿರುವ ಪದವಿ ಮುಗಿಸಿರುವಂತಹ, ಕೈಗಾರಿಕಾ ತರಬೇತಿ (ITI) ಹಾಗೂ ಡಿಪ್ಲೋಮಾ ವಿದ್ಯಾರ್ಥಿಗಳಿಗೂ ಸಹ ಅನ್ವಯಿಸುವಂತಾಗಬೇಕು.

ರೈತಾಪಿ ವರ್ಗದ ವಿಷಯದಲ್ಲಿ ಬಿಜೆಪಿ ರಾಜಕೀಯ ಮಾಡಿಲ್ಲ. ಈ ಹಿಂದೆ ಅತಿ ಹೆಚ್ಚು ಮಳೆಗಾಲವಾದಾಗ ರೈತರ ಖಾತೆಗಳಿಗೆ ಶೀಘ್ರದಲ್ಲಿಯೇ ಹಣ ಹಾಕಿದ್ದು ಮತ್ತು ಮನೆ ಕಳೆದುಕೊಂಡವರಿಗೂ ಪರಿಹಾರ ಒದಗಿಸಿದೆ.

ಆದ್ದರಿಂದ ಈಗಿನ ಸರ್ಕಾರ ಕೂಲಂಕುಷವಾಗಿ ಪರಿಶೀಲಿಸಿ ನಮ್ಮ ಬೇಡಿಕೆಗಳನ್ನು ಈಡೇರಿಸದೆ ಹೋದಲ್ಲಿ ನಾವು ಹಂತ ಹಂತವಾಗಿ ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ ಅಂತಾ ಈ ಮೂಲಕ ಸರ್ಕಾರವನ್ನು ಒತ್ತಾಯಿಸುತ್ತೇವೆ ಎಂದರು

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *