ಗದಗ prajakiran.com : 4 ಲಕ್ಷ ಮೌಲ್ಯದ
ಅಕ್ರಮ ಅಮೋನಿಯಂ ನೈಟ್ರೇಟ್
ಪತ್ತೆಯಾದ ಘಟನೆ ಗದಗ ಜಿಲ್ಲೆಯಲ್ಲಿ ಮಂಗಳವಾರ ನಡೆದಿದೆ.
ಮುಂಡರಗಿ ಪೊಲೀಸ್ ಠಾಣಾ ವ್ಯಾಪ್ತಿಯ ಹಿರೇವಡ್ಡಟ್ಟಿ ಗ್ರಾಮದ ಹತ್ತಿರ ಅಕ್ರಮವಾಗಿ ಸಾಗಿಸುತ್ತಿದ್ದ 135 ಪ್ಯಾಕೇಟ್ ಅಮೋನಿಯಂ ನೈಟ್ರೇಟ್ ಅನ್ನು ಪೊಲೀಸರು
ವಶಪಡಿಸಿಕೊಂಡಿದ್ದಾರೆ.
ಇದರ ಅಂದಾಜು ಕಿಮತ್ತು ರೂಪಾಯಿ 4 ಲಕ್ಷ ಮೌಲ್ಯದಾಗಿದ್ದು,
ಹಾಗೂ ಕೃತ್ಯಕ್ಕೆ ಬಳಸಿದ ಲಾರಿ ವಶಪಡಿಸಿಕೊಳ್ಳಲಾಗಿದೆ.
ಈ ಸಂಬಂಧ 2 ಜನ ಆರೋಪಿಗಳನ್ನು ದಸ್ತಗಿರಿ ಮಾಡಿದ್ದು ತನಿಖೆ ಮುಂದುವರೆದಿದೆ ಎಂದು ಮುಂಡರಗಿ ಪೊಲೀಸರು ತಿಳಿಸಿದ್ದಾರೆ.