ಜಿಲ್ಲೆ

ಧಾರವಾಡದ ಕನಕೂರನಿಂದ ಪಂಢರಪೂರಕ್ಕೆ ಹೊರಟ 30 ನೇ ವರ್ಷದ ದಿಂಡಿ ಪಾದಯಾತ್ರೆ

ಧಾರವಾಡ ಪ್ರಜಾಕಿರಣ.ಕಾಮ್ : ಧಾರವಾಡದ ಕನಕೂರನಿಂದ ಪಂಢರಪೂರಕ್ಕೆ ಬುಧವಾರ ಬೆಳಗ್ಗೆ 30 ನೇ ವರ್ಷದ ದಿಂಡಿ ಪಾದಯಾತ್ರೆ ಹೊರಟಿತು.

ಕನಕೂರಿನ ವಿಶ್ವಶಾಂತಿ ಸಾಧಕ ಆಶ್ರಮದಲ್ಲಿ ಈ ಯಾತ್ರೆಗೆ ಬಯಲು ಸೀಮೆ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ತವನಪ್ಪ ಅಷ್ಟಗಿ, ಅಂಜುಮನ್ ಇಸ್ಲಾಂ ಸಂಸ್ಥೆಯ ಮಾಜಿ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ ಹಾಗೂ ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ ಚಾಲನೆ ನೀಡಿದರು.

ಈ ವೇಳೆ ಅಧ್ಯಕ್ಷತೆ ವಹಿಸಿ
ಮಾತನಾಡಿದ ಅರ್ಜುನ ದಾದಾ ಪವಾರ, ಯಾರು ಪ್ರತಿಯೊಬ್ಬರಲ್ಲಿ ಪರಮಾತ್ಮ ಅಡಗಿದ್ದಾನೆ ಎಂದು ತಿಳಿದುಕೊಂಡಾರ ಅವರೇ ಒಳ್ಳೆಯ ಸಾಧು, ಸಂತ.

ಜ್ಞಾನೇಶ್ವರ ಮಹಾರಾಜರು ತುಕರಾಂ ಮಹಾರಾಜರು ಬಹಳ ಕಷ್ಟಪಟ್ಟರೂ ಬೇರೆಯವರಿಗೆ ಒಳ್ಳೆಯದು ಆಗಲಿ ಎಂದು ಭಾವಿಸಿದ್ದರು. ಅಲ್ಲದೆ, ಯಾರ ಭಾವನೆ ಪಾವನ ಇದೆ. ಎಲ್ಲರಿಗೂ ಒಳ್ಳೆಯದು ಬಯಸ್ತಾರೆ ಅದು ಅಪ್ಪಟ ಬಂಗಾರ ಎಂದರು.

ಜನಜಾಗೃತಿ ಸಂಘದ ಅಧ್ಯಕ್ಷ
ಬಸವರಾಜ ಕೊರವರ ಮಾತನಾಡಿ, ಕೇವಲ ವಿಠ್ಠಲನ ನಾಮಸ್ಮರಣೆಯಿಂದ ಹೃದಯ ಸಂಬಂಧಿ ಕಾಯಿಲೆ ಪರಿಹಾರ ಆಗುತ್ತದೆ ಎಂದು ವೈಜ್ಞಾನಿಕವಾಗಿ ಸಾಬೀತಾಗಿದೆ.

ಅಂತಹ ವಿಠ್ಠಲನ ದರ್ಶನಕ್ಕೆ ತೆರಳುವ ಪ್ರತಿಯೊಬ್ಬರು ಸಂತರಿದ್ದ ಹಾಗೆ. ಅವರು ಯಾವ ಸ್ವಾಮೀಜಿಗಳಿಗಿಂತ ಕಡಿಮೆಯಿಲ್ಲದಂತೆ ಶ್ರದ್ದೆ, ಭಕ್ತಿ, ಭಾವದಿಂದ ದಿಂಡಿ ಪಾದಯಾತ್ರೆ ಮಾಡುತ್ತಾರೆ.

ನಾಡಿನ ನಾನಾಭಾಗಗಳಿಂದ ಕೋಟ್ಯಾಂತರ ಸಂತರು ಪಾಂಡುರಂಗನ ಸನ್ನಿಧಿಯಲ್ಲಿ ಸೇರುತ್ತಾರೆ. ಜೊತೆಗೆ ನಮ್ಮ ನಾಡಿನಲ್ಲಿ ಹುಟ್ಟಿರುವ ಮಹಾರಾಷ್ಟ್ರದಲ್ಲಿ ಹರಿಯುವ ಭೀಮಾ ನದಿಯಲ್ಲಿ ಪವಿತ್ರ ಸ್ನಾನ ಮಾಡುತ್ತಾರೆ ಎಂಬುದು ಹೆಮ್ಮೆಯ ವಿಷಯ‌.

ಇಂತಹ ವಾರಕರಿಯಲ್ಲಿ ಪಾಲ್ಗೊಳ್ಳಲು ಹಾಗೂ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿದ್ದಕ್ಕೆ ಧನ್ಯತಾಭಾವವಿದೆ ಎಂದು ಹೇಳಿದರು.

ಇದಕ್ಕೂ ಮುನ್ನ ವಯಲು ಸೀಮೆ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ತವನಪ್ಪ ಅಷ್ಟಗಿ,
ಇಸ್ಮಾಯಿಲ್ ತಮಟಗಾರ ಮಾತನಾಡಿದರು.
ಈ ಸಂದರ್ಭದಲ್ಲಿ ಕನಕೂರ, ಮುಳಮುತ್ತಲ, ತಲವಾಯಿ, ಚಂದನಮಟ್ಟಿ ಸೇರಿದಂತೆ ಧಾರವಾಡ ಗ್ರಾಮೀಣ ಭಾಗದ ಗ್ರಾಮದ ಗುರು ಹಿರಿಯರು ಉಪಸ್ಥಿತರಿದ್ದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *