hubli kims
ರಾಜ್ಯ

ಧಾರವಾಡ ಜಿಲ್ಲೆಯಲ್ಲಿ ಬುಧವಾರವೂ ಬರೋಬ್ಬರಿ 5 ಸಾವು, 158 ಜನರಿಗೆ ಕರೋನಾ

ಧಾರವಾಡ prajakiran.com : ಧಾರವಾಡ ಜಿಲ್ಲೆಯಲ್ಲಿ ಬುಧವಾರ ಸಂಜೆ ಮತ್ತೆ ಹೊಸದಾಗಿ 158 ಜನರಿಗೆ ಕೋವಿಡ್ ಪಾಸಿಟಿವ್ ಇರುವುದು ದೃಢವಾಗಿದೆ.

ಆ ಮೂಲಕ ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 2485 ಕ್ಕೆ ಏರಿಕೆಯಾದಂತಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೆಲ್ತ್ ಬುಲೇಟಿನ್ ತಿಳಿಸಿದೆ. 

ಧಾರವಾಡ ಜಿಲ್ಲೆಯಲ್ಲಿ ಬುಧವಾರವು ಬರೋಬ್ಬರಿ 5 ಜನ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿರುವುದು ಜಿಲ್ಲೆಯ ಜನತೆಯನ್ನು ಬೆಚ್ಚಿಬೀಳಿಸಿದೆ.

ಆ ಮೂಲಕ, ಧಾರವಾಡ ಜಿಲ್ಲೆಯಲ್ಲಿ ಈವರೆಗೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದವರಸಂಖ್ಯೆ  78 ಕ್ಕೆ ಏರಿದೆ.  

ಬುಧವಾರ ಜಿಲ್ಲೆಯಲ್ಲಿ 135 ಜನ ಬಿಡುಗಡೆಗೊಂಡಿದ್ದಾರೆ. ಆ ಮೂಲಕ ಈವರೆಗೆ 845 ಜನರು ಬಿಡುಗಡೆಗೊಂಡತಾಗಿದೆ. ಇನ್ನೂ 1562 ಸಕ್ರಿಯ ಕರೋನಾ ಸೋಂಕಿತರು ಜಿಲ್ಲೆಯಲ್ಲಿದ್ದಾರೆ  ಎಂದು ವಿವರಿಸಿದೆ.

ಇದಲ್ಲದೆ, ಇನ್ನೂ  35  ಜನ ಸೋಂಕಿತರು ಕೋವಿಡ್ ನಿಯೋಜಿತ ಆಸ್ಪತ್ರೆಗಳ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವಿವರಿಸಲಾಗಿದೆ.

ಸಾವನ್ನಪ್ಪಿದ್ದವರ ವಿವರ :  ಹುಬ್ಬಳ್ಳಿಯ ಗುಡ್ಸ್ ಶೆಡ್ ರಸ್ತೆಯ ನಿವಾಸಿ ಪಿ-36663 ಸೋಂಕಿತ  79 ವರ್ಷದ ವೃದ್ದೆ ಕರೋನಾ ಹೇಗೆ ಹರಡಿದೆ ಎಂಬುದು ಪತ್ತೆ ಹಚ್ಚಲಾಗುತ್ತಿದೆ. 

ಹುಬ್ಬಳ್ಳಿ ತಬೀಬ್ ಲ್ಯಾಂಡ್ ನಿವಾಸಿ ಪಿ-38812 ಸೋಂಕಿತ 59 ವರ್ಷದ ವ್ಯಕ್ತಿ, ಹುಬ್ಬಳ್ಳಿ ಗೋಪನಕೊಪ್ಪದ ವೆಂಕಟೇಶ ಕಾಲನಿ ಪಿ-44283 ಸೋಂಕಿತ   58 ವರ್ಷದ ಮಹಿಳೆ, ಹುಬ್ಬಳಿ ಅಸರ್ ಓಣಿ ನಿವಾಸಿ ಪಿ 59520 ಸೋಂಕಿತ 69 ವರ್ಷದ ವೃದ್ದ, ಧಾರವಾಡದ ಕುರುಬರ ಓಣಿ ನಿವಾಸಿ ಪಿ-65322 ಸೋಂಕಿತ 56 ವರ್ಷದ ಮಹಿಳೆ ಸಾರಿ ಕೇಸ್ (ತೀವ್ರ ಉಸಿರಾಟ) ದ ತೊಂದರೆಯಿಂದ ಬಳಲುತ್ತಿದ್ದರು. 

ಇವರೆಲ್ಲರೂ ಚಿಕಿತ್ಸೆ ಫಲಿಸದೆ ಜಿಲ್ಲೆಯ ವಿವಿಧ ನಿಯೋಜಿತ ಕೋವಿಡ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಇಲಾಖೆಯ ಹೆಲ್ತ್ ಬುಲೇಟಿನ್ ವಿವರಿಸಿದೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *