ಧಾರವಾಡ prajakiran.com : ಧಾರವಾಡ ಜಿಲ್ಲೆಯಲ್ಲಿ ಶುಕ್ರವಾರ ಸಂಜೆ ಮತ್ತೆ ಹೊಸದಾಗಿ 50 ಜನರಿಗೆ ಕೋವಿಡ್ ಪಾಸಿಟಿವ್ ಇರುವುದು ದೃಢವಾಗಿದೆ.
ಆ ಮೂಲಕ ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 882ಕ್ಕೆ ಏರಿಕೆಯಾದಂತಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೆಲ್ತ್ ಬುಲೇಟಿನ್ ತಿಳಿಸಿದೆ.
ಧಾರವಾಡ ಜಿಲ್ಲೆಯಲ್ಲಿ ಶುಕ್ರವಾರ ಚಿಕಿತ್ಸೆ ಫಲಿಸದೆ ಇಬ್ಬರು ಸಾವನ್ನಪ್ಪಿದ್ದರೆ, 18 ಜನ ಸೋಂಕಿತರು ಕೋವಿಡ್ ನಿಯೋಜಿತ ಆಸ್ಪತ್ರೆಗಳ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 13 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ ಎಂದು ವಿವರಿಸಿದೆ.
ಧಾರವಾಡ ಜಿಲ್ಲೆಯಲ್ಲಿ ಜು.10 ರಂದು 29 ಜನರಿಗೆ ಕರೋನಾ ಹೇಗೆ ಹರಡಿದೆ ಎಂಬುದರ ಸಂಪರ್ಕ ಪತ್ತೆಯಾಗದಿರುವುದು ಆರೋಗ್ಯ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ.
(ಐಎಲ್ ಐ) ತೀವ್ರ ಜ್ವರ, ನೆಗಡಿ, ಕೆಮ್ಮಿನಿಂದ ಬಳಲುತ್ತಿದ್ದ ಜು. 10 ರಂದು 18 ಜನರಿಗೆ ಗಂಟಲು ದ್ರವ ತಪಾಸಣೆ ನಡೆಸಿದಾಗ ಕರೋನಾ ಪಾಸಿಟಿವ್ ಇರುವುದು ದೃಢಪಟ್ಟಿದೆ.
ಜಿಲ್ಲೆಯಲ್ಲಿ ಜು. 10 ರಂದು 2 ಸಾರಿ ಕೇಸ್ ದೃಢಪಟ್ಟಿವೆ. ಅಂತರ್ ರಾಷ್ಟ್ರೀಯ ಪ್ರಯಾಣದಿಂದ ಒಬ್ಬರಿಗೆ ಸೋಂಕು ವಕ್ಕರಿಸಿದೆ.
ಸಾವನ್ನಪ್ಪಿದವರ ವಿವರ : ಪಿ-25518 ಸೋಂಕಿತ 40 ವರ್ಷದ ವ್ಯಕ್ತಿ ಹಾಗೂ ಪಿ-30715 ಸೋಂಕಿತ 60 ವರ್ಷದ ವೃದ್ದ ಸಾರಿ ಕೇಸ್ ನಿಂದ ಬಳಲುತ್ತಿದ್ದರು. ಇವರು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ ಎಂದು ವಿವರಿಸಲಾಗಿದೆ.