ರಾಜ್ಯ

ಪಠ್ಯ ಪರಿಷ್ಕರಣೆ ಪಕ್ಷಾತೀತ ಕೆಲಸ ಆಗಬೇಕು, ರಾಜಕೀಯವಾಗಿ ಆಗಬಾರದು : ಆರ್.ವಿ. ದೇಶಪಾಂಡೆ

ಧಾರವಾಡ prajakiran. com : ಪಠ್ಯಪುಸ್ತಕವನ್ನು ಅನುಷ್ಠಾನಗೊಳಿಸುವ ಕಾರ್ಯದಲ್ಲಿ ಪಕ್ಷಾತೀತ ಕೆಲಸ ಆಗಬೇಕು ಹೊರತು ರಾಜಕೀಯವಾಗಿ ಆಗಬಾರದು ಎಂದು ಕಾಂಗ್ರೆಸ್ ಹಿರಿಯ ಮುಖಂಡ ಹಾಗೂ ಮಾಜಿ ಸಚಿವ ಆರ್. ವಿ. ದೇಶಪಾಂಡೆ ಹೇಳಿದರು.

ಧಾರವಾಡದಲ್ಲಿ ವಿಧಾನ ಪರಿಷತ್ ಶಿಕ್ಷಕರ ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಬಸವರಾಜ ಗುರಿಕಾರ ಪರ ಪ್ರಚಾರ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ದೇಶದ ಸರ್ವಾಂಗೀಣ ಅಭಿವೃದ್ಧಿ ಆಗಬೇಕಿದ್ದರೇ, ಶಾಂತಿ ಸಹಬಾಳ್ವೆ ಬಹಳ ಮಹತ್ವದ್ದು,

ಎಲ್ಲ ಧರ್ಮದ ಜನರು ಪ್ರೀತಿ, ಶಾಂತಿಯಿಂದ ಬದುಕಬೇಕು. ಇದರಿಂದ ಅಶಾಂತಿ, ಬಡತನ ನಿರ್ಮೂಲನೆ ಸಾಧ್ಯ. ಆ ದಿಕ್ಕಿನಲ್ಲಿ ಎಲ್ಲ ರಾಜಕೀಯ ಪಕ್ಷಗಳು ಮುಂದಾಗಬೇಕು.

ಆದರೆ ಎಲ್ಲ ಕಡೆಗೆ ಕೇಸರಿಕರಣ ಮಾಡುವುದು ಪ್ರಾರಂಭವಾಗಿದೆ. ಪಠ್ಯಪುಸ್ತಕದಲ್ಲಿ ಕೇಸರಿಕರಣ ಮಾಡಲಾಗುತ್ತಿದೆ ಎಂದರು.

ನಾನು ಐವತ್ತು ವರ್ಷದಿಂದ ರಾಜಕೀಯದಲ್ಲಿದ್ದೇನೆ. ಆದರೆ ಈವರೆಗೆ ಪಠ್ಯಪುಸ್ತಕದ ಬಗ್ಗೆ ಚರ್ಚೆ ಆಗಿಲ್ಲ. ಯಾವ ಕಂಪನಿಗಳು ವರದಿ ಕೊಡುತ್ತಿದ್ದವು

ಅವುಗಳನ್ನು ಸರ್ಕಾರ ಸ್ವೀಕರಿಸಿ, ಅದರಲ್ಲಿ ಸ್ವಲ್ಪ ಬದಲಾವಣೆ ಆಗತ್ತಾ ಇದ್ದವು ಹೊರತು ಈ ರೀತಿಯ ಚರ್ಚೆ ಆಗತ್ತಾ ಇರಲಿಲ್ಲ.

ಇವತ್ತು ಪಠ್ಯದಲ್ಲಿ ಕುವೆಂಪು, ಡಾ. ಬಾಬಾಸಾಹೇಬ ಅಂಬೇಡ್ಕರ್, ಬಸವಣ್ಣನವರ ಮಾಹಿತಿಗಳಿಲ್ಲ ಇದರ ಅರ್ಥವೇನು ಎಂದು ಪ್ರಶ್ನೆ ಮಾಡಿದರು.

ಇದೀಗ ಶಾಲೆ ಪ್ರಾರಂಭವಾಗಿವೆ. ಮಕ್ಕಳು ದೇಶದ ಆಸ್ತಿ, ಅವರು ಚೆನ್ನಾಗಿ ಬೆಳೆಯಬೇಕು, ಸರಿ ಸಮಯದಲ್ಲಿ ಪಾಠ ಪ್ರಾರಂಭವಾಗಬೇಕು

ಇದು ಎಲ್ಲರ ಕರ್ತವ್ಯ. ಇದೀಗ ಮುಖ್ಯಮಂತ್ರಿಗಳು ಪಠ್ಯ ರಚನೆಯ ಕಮಿಟಿಯನ್ನು ರದ್ದು ಪಡಿಸಿದರೇ, ಹಳೆಯ ಪಠ್ಯವನ್ನೇ ಅನುಷ್ಠಾನ ಮಾಡಬೇಕು ಎಂದು ಒತ್ತಾಯಿಸಿದರು.

ಪಠ್ಯವನ್ನು ಬದಲಾವಣೆ ಮಾಡುವ ವಿಚಾರಗಳು ಇದ್ದರೆ ಮುಂದೆ ಒಳ್ಳೆಯ ಸಾಹಿತಿಗಳು, ಲೇಖಕರನ್ನು ತೆಗೆದುಕೊಂಡು ಸಮಿತಿ ರಚನೆ ಮಾಡಬೇಕು.

ಪಕ್ಷಾತೀತ ಕೆಲಸ ಆಗಬೇಕು ರಾಜಕೀಯವಾಗಿ ಕೆಲಸ‌ ಆಗಬಾರದು ಹೀಗಿದ್ದರೇ ಕೆಲಸ ಆಗುವುದಿಲ್ಲ ಎಂದು ಸರ್ಕಾರದ ವಿರುದ್ಧ ಅಸಮಾಧಾನ ಹೊರ ಹಾಕಿದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *