ರಾಜ್ಯ

ಮುಂದಿನ 14 ದಿನಗಳು ಕೋರೋನಾ ನಿಯಂತ್ರಣಕ್ಕೆ ನಿರ್ಣಾಯಕ ….!

ಜಿಲ್ಲಾಡಳಿತದಿಂದ ಕೋವಿಡ್ ನಿರ್ವಹಣೆಗೆ ಸಿ.ಎಸ್.ಮೆಚ್ಚುಗೆ

ಗ್ರಾಮ ಕೇಂದ್ರಿಕೃತವಾಗಿ ಕಾರ್ಯ ನಿರ್ವಹಿಸಿ: ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ

ಧಾರವಾಡ prajakiran.com : ಕೊವೀಡ್ 2 ನೇ ಅಲೆಯ ಸೋಂಕು ಜಿಲ್ಲೆಯಲ್ಲಿ ಹೆಚ್ಚು ಹರಡದಂತೆ ಕ್ರಮಕೈಗೊಂಡು ಆರಂಭದಿಂದಲೂ ಧಾರವಾಡ ಜಿಲ್ಲಾಡಳಿತ ಉತ್ತಮವಾಗಿ ಕೋವಿಡ್ ನಿರ್ವಹಣೆ ಮಾಡಿದೆ ಎಂದು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಅವರು ಮೇ.20 ಮಧ್ಯಾಹ್ನ ಧಾರವಾಡ ಸರ್ಕಿಟ್‍ಹೌಸ್‍ದ ಹೊರಾಂಗಣದಲ್ಲಿ ಜಿಲ್ಲೆಯ ಹಿರಿಯ ಅಧಿಕಾರಿಗಳ, ನೊಡಲ್ ಅಧಿಕಾರಿಗಳೊಂದಿಗೆ ಜಿಲ್ಲೆಯಲ್ಲಿ ಕೋವಿಡ್ ನಿರ್ವಹಣೆ ಮತ್ತು ನಿಯಂತ್ರಣ, ಚಿಕಿತ್ಸೆ ಕುರಿತು ಪ್ರಗತಿ ಪರಿಶೀಲಾ ಸಭೆ ಜರುಗಿಸಿ ಮಾತನಾಡಿದರು.

ಧಾರವಾಡ ಜಿಲ್ಲೆ ಉತ್ತರ ಭಾಗದ ಕೇಂದ್ರಸ್ಥಾನದಲ್ಲಿದೆ. ಉತ್ತಮ ಆರೋಗ್ಯ ಕೇಂದ್ರ, ಸೌಲಭ್ಯಗಳನ್ನು ಹೊಂದಿದೆ .

ಇದರೊಂದಿಗೆ ನಿರಂತರವಾಗಿ ಶ್ರಮಿಸುವ ಜಿಲ್ಲಾಧಿಕಾರಿ ನೇತೃತ್ವದ ಅಧಿಕಾರಿಗಳ ತಂಡವಿದೆ. ಇವರೆಲ್ಲರ ನಿರಂತರ ಪರಿಶ್ರಮದಿಂದಾಗಿ ಕೋವಿಡ್ ಸೊಂಕಿತರ ಚಿಕಿತ್ಸೆ, ಸೋಂಕು ಹರಡದಂತೆ ಪರಿಣಾಮಕಾರಿ ಕ್ರಮ ಕೈಗೊಂಡಿದೆ.

ಈ ನಿಟ್ಟಿನಲ್ಲಿ ರಾಜ್ಯದಲ್ಲಿಯೇ ಜಿಲ್ಲೆ ಉತ್ತಮವಾಗಿ ಕಾರ್ಯ ನಿರ್ವಹಿಸಿದೆ ಎಂದು ಅವರು ಹೇಳಿದರು.

ಕೋವಿಡ್ ಸೋಂಕು ರಾಜ್ಯದಲ್ಲಿ ದಿನದಿಂದ ದಿನಕ್ಕೆ ನಿಯಂತ್ರಣಕ್ಕೆ ಬರುತ್ತಿದೆ. ಆದರೆ ಗ್ರಾಮೀಣ ಪ್ರದೇಶಕ್ಕೆ ಹಬ್ಬುತ್ತಿರುವುದರಿಂದ ಮುಂದಿನ ಎರಡುವಾರ ನಿರ್ಣಾಯಕವಾಗಿದೆ.

ಜಿಲ್ಲಾಡಳಿತದ ಗಮನ ನಗರಗಳ ಜೋತೆಗೆ ಹಳ್ಳಿ ಕೇಂದ್ರಿತವಾಗಿರಬೇಕು. ಹಳ್ಳಿ ಜನರಿಗೆ ಸೋಂಕು ತಗುಲಿದಾಗ ಬಹುತೇಕರಿಗೆ ಪ್ರತ್ಯೇಕ ಕೊಣೆ, ಶೌಚಾಲಯ ತೊಂದರೆ ಆಗುತ್ತದೆ.

ಆದ್ದರಿಂದ ಅವರನ್ನು ತಾಲೂಕು ಅಥವಾ ಹೊಬಳಿ ಮಟ್ಟದ ಕೋವಿಡ್ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಬೇಕು.

ಈ ನಿಟ್ಟಿನಲ್ಲಿ ಗ್ರಾಮ ಮಟ್ಟದ ಕೋವಿಡ್ ಕಾರ್ಯಪಡೆಗಳು ಹೆಚ್ಚು ಕ್ರೀಯಾಶೀಲವಾಗಬೇಕು ಎಂದು ಅವರು ಹೇಳಿದರು.

ಕೇಂದ್ರ ಸರಕಾರವು ಗ್ರಾಮೀಣ ಪ್ರದೇಶದಲ್ಲಿ ಅನುಸರಿಸಲು ಕೋವಿಡ್ (ಎಸ್.ಓ.ಪಿ) ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ ಅದನ್ನು ಎಲ್ಲರೂ ತಪ್ಪದೇ ಅನುಸರಿಸಬೇಕು.

ಹಳ್ಳಿಯಲ್ಲಿಯೆ ರ್ಯಾಟ್ (ಖಂಖಿ) ಟೆಸ್ಟಿಂಗ್ ಮಾಡಬೇಕು, ಪಾಜಿಟಿವ್ ಬಂದಿರುವ ಕುಟುಂಬ ಸದಸ್ಯರಿಗೆ ಹಾಗೂ ಸಂಪರ್ಕಿತರಿಗೆ ಕೋವಿಡ್ ಟೆಸ್ಟ್ ಕಡ್ಡಾಯವಾಗಿ ಮಾಡಬೇಕು ಎಂದು ಅವರು ಸೂಚಿಸಿದರು.

ಜಿಲ್ಲೆಯಲ್ಲಿ ಕೋವಿಡ್ ಟೆಸ್ಟಿಂಗ್, ಪ್ರಯೋಗಾಲಯಗಳ ನಿರ್ವಹಣೆ, ಹೋಮ್ ಐಸೋಲೇಷನ್, ಆಕ್ಸಿಜನ್ ಪೂರೈಕೆ, ಆಸ್ಪತ್ರೆಗಳಲ್ಲಿ ಚಿಕಿತ್ಸೆ, ಬೆಡ್. ಆಕ್ಸಿಜನ್ ಬೆಡ್, ವೆಂಟಿಲೆಟರ್ ನಿರ್ವಹಣೆ, ಕೋವಿಡ್ ಪಾಜಿಟಿವ್ ಆದವರ ಪತ್ತೆಕಾರ್ಯ, ಔಷಧಿ ವಿತರಣೆ, ಲಸಿಕಾಕರಣ ಮತ್ತು ಬ್ಲ್ಯಾಕ್ ಫಂಗಸ್ ಕುರಿತು ವಿವಿಧ ಅಧಿಕಾರಿಗಳಿಂದ ಮುಖ್ಯ ಕಾರ್ಯದರ್ಶಿಗಳು ಮಾಹಿತಿ ಪಡೆದರು.

ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲೆಯಲ್ಲಿ ಕೋವಿಡ್ ನಿರ್ವಹಣೆ ಕುರಿತು ವಿವರಿಸಿದರು.

 

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *