ಅಂತಾರಾಷ್ಟ್ರೀಯ

ಯೋಗೇಶಗೌಡ ಕೇಸ್ ಗೆ ಮರುಜೀವ ತಂದಿದ್ದೆ ಸಿಬಿಐನ ರಾಕೇಶ್ ರಂಜನ್

ಹುಬ್ಬಳ್ಳಿ orajakiran.com : ಧಾರವಾಡ ಜಿಲ್ಲಾ ಪಂಚಾಯತ ಹೆಬ್ಬಳ್ಳಿ ಬಿಜೆಪಿ ಸದಸ್ಯ ಯೋಗೇಶಗೌಡ ಹತ್ಯೆ ಪ್ರಕರಣಕ್ಕೆ ಮರುಜೀವ ತಂದಿದ್ದೆ ಸಿಬಿಐನ ರಾಕೇಶ್ ರಂಜನ್ ಎಂದರೆ ತಪ್ಪಾಗಲಾರದು.

ಅವರು ಕಳೆದ ಒಂದೂವರೆ ವರ್ಷದಿಂದ ಹಗಲು ರಾತ್ರಿ ಎನ್ನದೆ, ದಿನದ 24 ಗಂಟೆ ಪ್ರಕರಣದ ಬೆನ್ನು ಹತ್ತಿದ್ದಾರೆ.

ತನಿಖೆ ಮಾಡುತ್ತಿರುವ ಸಿಬಿಐ ಆಫೀಸರ್ ರಾಕೇಶ್ ರಂಜನ್ ಸಾಮಾನ್ಯರಲ್ಲ. ಅವರು ಈ ಹಿಂದೆ ಓಬಳಾಪುರಂ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿಯನ್ನು ಜೈಲಿಗಟ್ಟಿದ್ದು ಇದೇ ರಾಕೇಶ್ ರಂಜನ್ ಎಂಬುದು ರಾಜ್ಯದ ಹಾಗೂ ದೇಶದ ಜನತೆ ಮರೆತಿಲ್ಲ.

ಯೋಗೇಶ್ ಗೌಡರ ಹತ್ಯೆ ಪ್ರಕರಣದ ತನಿಖಾಧಿಕಾರಿಯಾಗಿರುವ ರಾಕೇಶ್ ರಂಜನ್ ಸಿಬಿಐ ನಲ್ಲಿ ಅಧಿಕಾರಿಯಾಗಿ ಕೆಲಸ ನಿರ್ವಹಿಸಿದ ಅವಧಿಯಲ್ಲಿಈವರೆಗೆ 14 ಪ್ರಕರಣಗಳ ತನಿಖೆಯಲ್ಲಿ 12 ಅಪರಾಧಿಗಳಿಗೆ ಶಿಕ್ಷೆ ಇನ್ನೂ ಎರಡು ಪ್ರಕರಣಗಳು ವಿಚಾರಣೆ ಹಂತದಲ್ಲಿವೆ.

ಇದೀಗ 15 ನೇ ಪ್ರಕರಣ ಯೋಗೇಶಗೌಡ ಹತ್ಯೆ  ಪ್ರಕರಣವನ್ನು ಅವರು ಕೈಗೆ ಎತ್ತಿಕೊಂಡಿದ್ದಾರೆ.

ಕೇಸ್ ಗೆ ಭಾರೀ ಟ್ವಿಸ್ಟ್ ಕೊಟ್ಟಿರೋ ಆಫೀಸರ್ ರಾಕೇಶ್ ರಂಜನ್ ಅವರಿಗೆ ಯೋಗೀಶಗೌಡ ಕೊಲೆ ಪ್ರಕರಣ ಭೇದಿಸಿರುವುದಕ್ಕೆ ಕೇಂದ್ರ ಗೃಹ ಸಚಿವರ ಮೆಡಲ್ ಪಡೆದಿರೋ ಆಫೀಸರ್ ರಾಕೇಶ್ ರಂಜನ್ ನನ್ನು ಯೋಗೀಶಗೌಡ ಸಹೋದರ ಗುರುನಾಥಗೌಡ, ಕಾನೂನು ನೆರವು ನೀಡಿದ ಸಾಮಾಜಿಕ ಕಾರ್ಯಕರ್ತ ಬಸವರಾಜ ಹೆಚ್. ಕೋರವರ ಅವರು ರಾಕೇಶ ರಂಜನ್ ಅವರ ಕಾರ್ಯಶೈಲಿಗೆ ಮುಕ್ತ ಮನಸ್ಸಿನಿಂದ ಅಭಿನಂದಿಸಿದ್ದಾರೆ.

ಅಲ್ಲದೆ, ಈ ಪ್ರಕರಣದಲ್ಲಿ ತಮಗೆ ನ್ಯಾಯ ಸಿಗುವ ಸಂಪೂರ್ಣ ವಿಶ್ವಾಸವಿದೆ ಎಂದು ಅವರು ಪ್ರಜಾಕಿರಣ.ಕಾಮ್ ಗೆ ತಮ್ಮ ಸಂತಸ ಹಂಚಿಕೊಂಡಿದ್ದಾರೆ.

ಈಗಾಗಲೇ ಈ ಪ್ರಕರಣದ ಎಳು ಜನ ನೈಜ ಕೊಲೆ ಆರೋಪಿಗಳನ್ನು ಸಿಬಿಐ ಅಧಿಕಾರಿ ರಾಕೇಶ ರಂಜನ್ ನೇತೃತ್ವದ ತಂಡ ಬಂಧಿಸಿದೆ.

ಇದೀಗ ಈ ಪ್ರಕರಣದಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿಯವರ ಪಾತ್ರವಿರುವಅಂಶವನ್ನು ಬೆಳಕಿಗೆ ತಂದು ಅವರನ್ನು ಬಂಧಿಸಿರುವುದು ಪ್ರಕರಣದ ತೀವ್ರತೆ ಇನ್ನಷ್ಟು ಹೆಚ್ಚಿಸಿದೆ.

ಸಿಬಿಐನ ತನಿಖಾಧಿಕಾರಿಯಾಗಿರು ರಾಕೇಶ ರಂಜನ್ ಅವರು ತನಿಖೆ ವೇಳೆ ಬಹುತೇಕ ಎಲ್ಲಾ ಅಂಶಗಳನ್ನು ಹೊರ ತಂದಿದ್ದು, ಹಲವರ ಮುಖವಾಡ ಕಳಚಿದ್ದಾರೆ.

ಕೊಲೆ ಪ್ರಕರಣ ಮುಚ್ಚಿ ಹಾಕಲು ಅಧಿಕಾರ ದುರುಪಯೋಗ, ಪೊಲೀಸರ ಮೇಲೆ ಒತ್ತಡ, ಸಾಕ್ಷ್ಯಿಗಳಿಗೆ ಹಣ ಸಹಾಯ ಮಾಡಿ ಬೆದರಿಕೆ, ಒತ್ತಡ ಹಾಕಿರುವ ಅಂಶ, ಕೊಲೆಗೆ ಮುನ್ನ ಸಂಚು, ಒಳ ಪಿತೂರಿ, ರಾಜಕೀಯ ಹಾಗೂ ವೈಯಕ್ತಿಕ ದ್ವೇಷ ಸೇರಿದಂತೆ ಹಲವು ಮಹತ್ವದ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ.

ಇದು  ಯಾರಿಗೆ ಮುಳುವಾಗಲಿದೆ. ಮತ್ತೆ ಯಾರ್ಯಾರ ಪಾತ್ರವಿದೆ ಎಂಬುದರ ಬೆನ್ನು ಹತ್ತಿರುವುದು ಇದೇ ರಾಕೇಶ್ ರಂಜನ್

ಆರಂಭದಿಂದಲೂಯೋಗೀಶಗೌಡ ಸಹೋದರ ಗುರುನಾಥ ಗೌಡ, ಸಾಮಾಜಿಕ ಕಾರ್ಯಕರ್ತ ಬಸವರಾಜ ಕೊರವರ ಈ ಪ್ರಕರಣದಲ್ಲಿ ಪ್ರಭಾವಿಗಳ ಒತ್ತಡವಿದೆ. ಕಾಣದ ಕೈಗಳು ಕೆಲಸ ಮಾಡಿವೆ.

ಈ ಪ್ರಕರಣದ ಸತ್ಯಾಸತ್ಯತೆ ಹೊರಬರಬೇಕಾದರೆ ಸಿಬಿಐ ತನಿಖೆ ಆಗಲೇ ಬೇಕು ಎಂದು ಸುದೀರ್ಘ ಕಾನೂನು ಹೋರಾಟ ನಡೆಸಿದ್ದರು.ಅದಕ್ಕೆ ಈಗ ಮನ್ನಣೆ ಸಿಗುತ್ತಿದೆ ಎಂದರೆ ತಪ್ಪಾಗಲಾರದು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *