ಅಂತಾರಾಷ್ಟ್ರೀಯ

ಧಾರವಾಡ ಕೃಷಿ ವಿವಿ ಘಟಿಕೋತ್ಸವ : ಮುದ್ದೇಬಿಹಾಳದ ಬಸವರಾಜ ನಾರಗಲ್‌ಗೆ ಸ್ವರ್ಣಪದಕ

ಧಾರವಾಡ prajakiran.com ಅ.18:

ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕು ಮದರಿ ಗ್ರಾಮದ ಬಸವರಾಜ ನಾರಗಲ್ ಎಂ.ಎಸ್ಸಿ ಕೃಷಿ ಹವಾಮಾನಶಾಸ್ತ್ರ ಪದವಿಯಲ್ಲಿ ಸ್ವರ್ಣ ಪದಕ ಪಡೆದಿದ್ದಾರೆ.

ಇಂದು ನಡೆದ ವಿವಿಯ 34 ನೇ ಘಟಿಕೋತ್ಸವದಲ್ಲಿ ರಾಜ್ಯಪಾಲರಾದ ಥಾವರಚಂದ್ ಗೆಹ್ಲೋಟ್ ಅವರು ಪದವಿ ಹಾಗೂ ಪದಕ ಪ್ರಧಾನ ಮಾಡಿದರು.

ಬೆಳೆ ಹಾನಿ,ಬೆಳೆ ರೋಗ, ಹವಾಮಾನ ಬದಲಾವಣೆಗಳು ಕೃಷಿಕನ ಭವಿಷ್ಯ ನಿರ್ಧರಿಸುತ್ತವೆ.

ಕೃಷಿ ಹವಾಮಾನಶಾಸ್ತ್ರವು ಇನ್ನಷ್ಟು ನಿಖರ ವರದಿಗಳನ್ನು ನೀಡಲು ಸಾಧ್ಯವಾದರೆ ಕೃಷಿ ಕ್ಷೇತ್ರದಲ್ಲಿ ಗಮನಾರ್ಹ ಬದಲಾವಣೆ ತರಲು ಸಾಧ್ಯ ವಿದೇಶದ ಪ್ರತಿಷ್ಠಿತ ವಿವಿಗಳಲ್ಲಿ ಉನ್ನತ ಅಧ್ಯಯನ ಮಾಡಿ ಈ ನಿಟ್ಟಿನಲ್ಲಿ ಸಾಧನೆ ಮಾಡುವ ಆಶಯವನ್ನು ಸ್ವರ್ಣ ಪದಕ ವಿಜೇತ ವಿದ್ಯಾರ್ಥಿ ಬಸವರಾಜ ನಾರಗಲ್ ವ್ಯಕ್ತಪಡಿಸಿದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *