ರಾಜ್ಯ

ಧಾರವಾಡ ಗ್ರಾಮೀಣ -71ರ ಬಿಜೆಪಿಯ ಸದ್ಯದ ಪರಿಸ್ಥಿತಿ ಬಹಿರಂಗಪಡಿಸಿದ ಕಾರ್ಯಕರ್ತರು…..!?

ಧಾರವಾಡ ಗ್ರಾಮೀಣ -71ರ ಬಿಜೆಪಿ ಶಾಸಕರ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ಹಿರಿಯ, ಯುವ ಕಾರ್ಯಕರ್ತರ ಅಸಮಾಧಾನ ಬಹಿರಂಗ….!

ಭಾರಿ ಚರ್ಚೆ ಹುಟ್ಟು ಹಾಕಿದ ಒಂದು ಪೋಸ್ಟ್

ಧಾರವಾಡ ಪ್ರಜಾಕಿರಣ.ಕಾಮ್ :
ಧಾರವಾಡ ಗ್ರಾಮೀಣ -71ರ ಸದ್ಯದ ಪರಿಸ್ಥಿತಿ!!?? ಎಂಬ ಒಂದು ಫೇಸ್ ಬುಕ್ ಪೋಸ್ಟ್ ಬಿಜೆಪಿ ಪಕ್ಷದ ಕಾರ್ಯಕರ್ತರಲ್ಲಿ ಮಿಂಚಿನ ಸಂಚಲನ ಸೃಷ್ಟಿಸಿದೆ‌.

ಅದು ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹುಬ್ಬಳ್ಳಿಯ ಕಾರ್ಯಕ್ರಮಕ್ಕೆ ಆಗಮಿಸಿದ ಸಂದರ್ಭದಲ್ಲಿ ಹಾಕಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ.

ಅದಕ್ಕೆ ನೂರಾರು ಜನರು ಮುಕ್ತವಾಗಿ ಸ್ಪಂದಿಸಿದರೆ, ಇನ್ನೂ ಕೆಲವರು ನೋಡಿ ಖುಷಿ ಪಟ್ಟು ಪೋನ್ ಮಾಡಿ ಪೋಸ್ಟರ್ ನೋಡಲು ಹೇಳಿದರೆ, ಇನ್ನೂ ಕೆಲ ಹಿಂಬಾಲಕರು ಕೈ ಕೈ ಹಿಸುಕಿಕೊಳ್ಳುತ್ತಿದ್ದಾರೆ.

ಕಾಮಟ್ ಗಳ ಸಂಕ್ಷಿಪ್ತ ವಿವರ ಹೀಗಿದೆ…

ಇಲ್ಲಿ ನೀವೇ ವಿಚಾರ ಮಾಡಿ ಹಿಂಬಾಲಕರಿಗೆ ಹತ್ತುವುದಕ್ಕೆ ಸರಿಯಾದ ಎನಿ ಇಡುತ್ತಾರೆ.ಅದರೆ ನಿಷ್ಠಾವಂತ ಕಾರ್ಯಕರ್ತರಿಗೆ ಹತ್ತದೆ ಆಗದಿರುವ ಎನಿ ಇಡುತ್ತಾರೆ.ಇದೇ ಅವರು ಮಾಡುವ ವ್ಯತ್ಯಾಸ ಹೌದಲ್ವಾ ನನ್ನ ಮಿತ್ರರೇ.

ಇಲ್ಲಿ ದೊಡ್ಡವರು ದೊಡ್ಡವರಾಗಿಯೇ ಉಳಿಯುತ್ತಾರೆ ಸಣ್ಣವರು ಸಣ್ಣವರಾಗಿಯೇ ಉಳಿಯುತ್ತಾರೆ. ಇದೇ ಅವರು ಕಾರ್ಯಕರ್ತರಿಗೆ ಮಾಡುವ ಮೋಸ ಮುಂದೆ ಎಲ್ಲವನ್ನು ಅರ್ಥಮಾಡಿಕೊಂಡು ನಡೆಯೋಣ ಏನಂತೀರಾ ನನ್ನ ಮಿತ್ರರೇ…..

ತಿಳಿದು ಹೇಳಿರೋ ತಿಳಿಯದೇ ಹೇಳಿರೂ ಸರ್ ಗೊತ್ತಿಲ್ಲಾ ವಸ್ತವ ನಿಜವಾದ ಮಾತನ್ನು ಹೇಳಿದಿರಿ 🙏🙏 ರಾಜಕೀಯ ಹೀಗೇ ಇರುತ್ತೆ ಅಂತ ಧಾರವಾಡ – 71 ರ ರಾಜಕೀಯ ನೋಡಬೇಕು

ಅಭ್ಯರ್ಥಿ ಬದಲಾವಣೆ ಒಂದೇ ಅದರ ಮಾರ್ಗ ಹಿಂದುತ್ವ ಅಂತ ಬಂದಿದ್ದಕ್ಕೆ ಮತ ನೀಡಿದ್ದು.

ಜಾತಿ ಅಂತ ಒಡೆದು ಆಳುವ ನೀತಿ ನಿಮ್ಮದಾದರೆ? ಕಾಂಗ್ರೆಸ್ಸನ್ನೇ ಕಿತ್ತು ಎಸೆದಿದ್ದೇವೆ. ಇನ್ನೂ 71ಯಾವ ಲೆಕ್ಕ ಅದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದ ನಾಯಕತ್ವ ಯಾರಿಗೂ ಬೇಕಾಗಿಲ್ಲಾ.ಜೈ ಮೋದಿ

ದೇಶ, ಹಿಂದುತ್ವ ಅಂತಾ ಎಷ್ಟೋ ಯುವಕರು ಮನೆ, ಕೆಲಸ ಬಿಟ್ಟು, ಮನೆಯಲ್ಲಿ ಉಗಿಸಿಕೊಂಡು ಚುನಾವಣೆಯಲ್ಲಿ ಕೆಲಸ ಮಾಡಿದರು.

ನಿಷ್ಟಾವಂತ ಕಾರ್ಯಕರ್ತನೊಬ್ಬ ತೀರಿಕೊಂಡಾಗ ಸೌಜನ್ಯಕ್ಕಾದರೂ ಅವರ ಮನೆಗೆ ಭೇಟಿ ನೀಡದವರನ್ನು ನಾಯಕರು ಅನ್ನುವುದಾದರೂ ಹೇಗೆ??

ಬೆಳಿಗ್ಗೆಯಿಂದ ನನ್ನ ಪೋಸ್ಟ್ ಅನ್ನು ಲೈಕ ಮಾಡಿ, ಮುಕ್ತವಾಗಿ ಕಮೆಂಟಗಳ ಮೂಲಕ ಚರ್ಚಿಸಿದ ಎಲ್ಲರಿಗೂ ಧನ್ಯವಾದಗಳು🙏🙏.

ಪ್ರಮುಖ ನಾಯಕರು ಚರ್ಚೆಯಲ್ಲಿ ಭಾಗಿಯಾಗಿ ಅನೇಕ ಸಲಹೆಗಳನ್ನು ನೀಡಿದ್ದೀರಿ ಅವರಿಗೂ ವಿಶೇಷವಾದ ಧನ್ಯವಾದಗಳು🙏🙏.

ಕೆಲವರಿಗೆ ನನ್ನ ಪೋಸ್ಟ್ ಇಷ್ಟವಾದರೂ, ಲೈಕ ಮಾಡಲು ಹೆದರಿಕೆ, ಕಮೆಂಟ ಮಾಡಲು ಹಿಂಜರಿಕೆ, ಪಾಪ ಏನೋ ಸಣ್ಣ ಪುಟ್ಟ ಕೆಲಸ ಮಾಡಿಸಿಕೊಂಡಿದ್ದಕ್ಕೆ ಭಯ.

ನಿಷ್ಠಾವಂತ ಕಾರ್ಯಕರ್ತರು ಭಯ ಪಡುವ ಅಗತ್ಯವಿಲ್ಲ. ತಪ್ಪು ಯಾರಿಂದಲೇ ಆಗಿರಲಿ ಅದನ್ನು ಹೇಳಲು, ವ್ಯಕ್ತಪಡಿಸಲು ಹಿಂಜರಿಯದಿರಿ, ಅದು ನಿಮಗೆ ನೀವೆ ಮಾಡಿಕೊಂಡ ಆತ್ಮವಂಚನೆ.

ಪೋಸ್ಟರ್ ಲಿಂಕ್ ನೀವು ನೋಡಿ

https://m.facebook.com/story.php?story_fbid=pfbid02ayzjfRzWDaida5xs6vWSwcGBztktd8xEiCztw3T7ni1aqbuQYEUPzymmRMXLBATzl&id=100014132146243&mibextid=Nif5oz

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *