ಅಫ್ಘಾನಿಸ್ತಾನ prajakiran.com : ಇಲ್ಲಿನ ಪಶ್ಚಿಮ ಕಾಬೂಲ್ನ ಮೆಜಾರಿಟಿ ಜಿಟೆ ಜಿಲ್ಲೆಯಲ್ಲಿರುವ ಹೆಣ್ಣುಮಕ್ಕಳ ಶಾಲೆ ಬಳಿ ಬಾಂಬ್ ಸ್ಫೋಟ ಆಗಿದ್ದು, 30 ಮಂದಿ ಮೃತಪಟ್ಟಿದ್ದಾರೆ.
ದಾಶ್ತ್ ಇ ಬಾರ್ಚಿಯ ಸೈಯದ್ ಅಲ್ ಶಾಹ್ದಾ ಬಳಿ ಸ್ಫೋಟ ಆಗಿದೆ. ಮೃತರಲ್ಲಿ ಬಹುತೇಕ 11 ರಿಂದ 15 ವರ್ಷದ ವಿದ್ಯಾರ್ಥಿಗಳೇ ಇದ್ದಾರೆ ಎನ್ನಲಾಗಿದೆ
ಗಾಯಗೊಂಡ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸರಣಿ ಸ್ಫೋಟದ ಬಗ್ಗೆ ಮಾಹಿತಿ ಇಲ್ಲ.
ಆದರೆ ಬಾಂಬ್ ತೀವ್ರತೆ ತುಂಬಾನೇ ಇತ್ತು. ವಿದ್ಯಾರ್ಥಿನಿಯರು ಶಾಲೆ ಮುಗಿಸಿ ಮನೆಗೆ ತೆರಳುವ ವೇಳೆ ಸ್ಫೋಟ ಸಂಭವಿಸಿದೆ ಎಂದು ಪ್ರತ್ಯಕ್ಷ ದರ್ಶಿಗಳು ಮಾಹಿತಿ ನೀಡಿದ್ದಾರೆ.