ಧಾರವಾಡ prajakiran.com : ಧಾರವಾಡ ಜಿಲ್ಲೆಯಲ್ಲಿ ಶುಕ್ರವಾರ ಸಂಜೆ ಮತ್ತೆ ಹೊಸದಾಗಿ 174 ಜನರಿಗೆ ಕೋವಿಡ್ ಪಾಸಿಟಿವ್ ಇರುವುದು ದೃಢವಾಗಿದೆ.
ಆ ಮೂಲಕ ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 2842 ಕ್ಕೆ ಏರಿಕೆಯಾದಂತಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೆಲ್ತ್ ಬುಲೇಟಿನ್ ತಿಳಿಸಿದೆ.
ಧಾರವಾಡ ಜಿಲ್ಲೆಯಲ್ಲಿ ಶುಕ್ರವಾರವು 5 ಜನ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿರುವುದು ಜಿಲ್ಲೆಯ ಜನತೆಯನ್ನು ಬೆಚ್ಚಿಬೀಳಿಸಿದೆ. ಆ ಮೂಲಕ, ಧಾರವಾಡ ಜಿಲ್ಲೆಯಲ್ಲಿ ಈವರೆಗೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದವರಸಂಖ್ಯೆ 85 ಕ್ಕೆ ಏರಿದಂತಾಗಿದೆ.
ಶುಕ್ರವಾರ ಜಿಲ್ಲೆಯಲ್ಲಿ 52 ಜನ ಬಿಡುಗಡೆಗೊಂಡಿದ್ದಾರೆ. ಆ ಮೂಲಕ ಈವರೆಗೆ 973 ಜನರು ಬಿಡುಗಡೆಗೊಂಡತಾಗಿದೆ. ಇನ್ನೂ 1784 ಸಕ್ರಿಯ ಕರೋನಾ ಸೋಂಕಿತರು ಜಿಲ್ಲೆಯಲ್ಲಿದ್ದಾರೆ ಎಂದು ವಿವರಿಸಿದೆ.
ಇದಲ್ಲದೆ, ಇನ್ನೂ23 ಜನ ಸೋಂಕಿತರು ಕೋವಿಡ್ ನಿಯೋಜಿತ ಆಸ್ಪತ್ರೆಗಳ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವಿವರಿಸಲಾಗಿದೆ.
ಸಾವನ್ನಪ್ಪಿದ್ದವರ ವಿವರ : ಪಿ-30754 ಸೋಂಕಿತ 65 ವರ್ಷದ ವೃದ್ದ, ಪಿ-31781 ಸೋಂಕಿತ 51 ವರ್ಷದ ಮಹಿಳೆ, ಪಿ-47436-ಸೋಂಕಿತ 46 ವರ್ಷದ ಮಹಿಳೆ, ಪಿ-48736-ಸೋಂಕಿತ 63 ವರ್ಷದ ವೃದ್ದೆ, ಪಿ-64750-ಸೋಂಕಿತ 83 ವರ್ಷದ ವೃದ್ದೆ ( ಸಾರಿ ಕೇಸ್ ) ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು.
ಐವರು ಚಿಕಿತ್ಸೆ ಫಲಿಸದೆ ಜಿಲ್ಲೆಯ ವಿವಿಧ ನಿಯೋಜಿತ ಕೋವಿಡ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಇಲಾಖೆಯ ಹೆಲ್ತ್ ಬುಲೇಟಿನ್ ವಿವರಿಸಿದೆ.