ಅಂತಾರಾಷ್ಟ್ರೀಯ

ವಿಶ್ವದಲ್ಲಿ ಕೊರೋನಾ ಎರಡನೇ ಅಲೆ, ಪರಿಸ್ಥಿತಿ ಚಿಂತಾಜನಕ….!

ನವದೆಹಲಿ prajakiran.com : ಇಡೀ ವಿಶ್ವದಲ್ಲಿ ಕೊರೋನಾ ಎರಡನೇ ಅಲೆಯ ಅಬ್ಬರ ಹೆಚ್ಚಾಗುತ್ತಿದ್ದು, ದಿನೇ ದಿನೇ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ.

ಕೋವಿಡ್ ಹರಡಲು ಪ್ರಾರಂಭವಾದ ಬಳಿಕ ಇದುವರೆಗೂ ಇಷ್ಟು ಪ್ರಕರಣಗಳು ವರದಿಯಾಗಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.

ಹೊಸ ಪ್ರಕರಣಗಳು ಮತ್ತು ಸಾವಿನ ಸಂಖ್ಯೆ ಹೆಚ್ಚುತ್ತಲೇ ಇದೆ ಪರಿಸ್ಥಿತಿ ಚಿಂತಾಜನಕವಾಗಿದೆ.

ಈ ಹಿಂದೆ ಸೋಂಕು ಹರಡುವಿಕೆಯನ್ನು ತಡೆಗಟ್ಟಿದ್ದ ಕೆಲ ರಾಷ್ಟ್ರಗಳಲ್ಲೂ ಕೂಡ ಈ ಬಾರಿ ಸೋಂಕು ಹೆಚ್ಚಾಗಿದೆ ಎಂದು ಡಬ್ಲ್ಯುಎಚ್‌ಒ ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ವಿಶೇಷ ಸಭೆಯಲ್ಲಿ ತಿಳಿಸಿದ್ದಾರೆ 

ಕೋವಿಡ್ ಮುಂಜಾಗ್ರತ ಕ್ರಮಗಳ ಸಡಿಲಗೊಳಿಸುವಿಕೆ ಹಗೂ ಲಸಿಕೆ ಹಂಚಿಕೆಯಲ್ಲಿನ ತಾರತಮ್ಯ ಸೋಂಕು ಹೆಚ್ಚಲು ಕಾರಣವಾಗಿದೆ.

ಲಸಿಕೆ ವಿತರಣೆಯಲ್ಲಿ ಅಸಮಾನತೆಯಿಂದ ನಮ್ಮ ಮುಂದಿರುವ ಸವಾಲನ್ನು ನಿರ್ವಹಿಸುವಲ್ಲಿ ಸೋತಿದ್ದೇವೆ.

ಡಬ್ಲ್ಯುಹೆಚ್‌ಒ ಅಂಕಿ ಅಂಶಗಳು ಜಾಗತಿಕವಾಗಿ 832 ದಶ ಲಕ್ಷ ಡೋಸ್​ ಕೋವಿಡ್ ಲಸಿಕೆ ಅತಿದೊಡ್ದ, ದೊಡ್ಡ ಮತ್ತು ಮಧ್ಯಮ ಆರ್ಥಿಕತೆಯ ದೇಶಗಳಿಗೆ ಹೋಗಿವೆ.

ಕಡಿಮೆ ಆದಾಯದ ದೇಶಗಳಿಗೆ ಶೇ.0.2 ರಷ್ಟು ಮಾತ್ರ ಲಸಿಕೆ ಹಂಚಿಕೆಯಾಗಿವೆ.
ಈ ಅಸಮಾನತೆ ಕೇವಲ ಲಸಿಕೆ ಹಂಚಿಕೆ ಮಾತ್ರವಲ್ಲದೆ ಆರ್ಥಿಕ ಮತ್ತು ರೋಗ ನಿರ್ವಹಣೆಯ ಮೇಲೆಯೂ ಪರಿಣಾಮ ಬೀರಬಹುದು ಎಂದು ಘೆಬ್ರೆಯೆಸಸ್ ಅಭಿಪ್ರಾಯಪಟ್ಟಿದ್ದಾರೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *