ಆಧ್ಯಾತ್ಮ

ಮನದ ಭಾರ ಕಳಚಿಕೊಂಡ ಮಾನವ ಮಹಾತ್ಮನಾಗುತ್ತಾನೆ

ಜೀವನದಲ್ಲಿ ಒಂದಿಲ್ಲೊಂದು ಸಲ ನಾವು -ಪ್ರವಾಸ ಮಾಡಿರುತ್ತೇವೆ ಮತ್ತು  ಮಾಡುತ್ತಲೇ ಇರುತ್ತೇವೆ. ಪ್ರವಾಸ ಪ್ರಯಾಸವಾಗದಿರಲು ಆದಷ್ಟು ಕಡಿಮೆ ಸಾಮಾನು ಜೊತೆಗೆ ಒಯ್ಯಬೇಕು. ನಮಗೆ ಒತ್ತೊಯ್ಯಲು ಸಾಧ್ಯವಾದಷ್ಟು ಸಾಮಾನು ಇರಬೇಕು. ರೈಲ್ವೆಯಲ್ಲಿ ಲೆಸ್ ಲಗೇಜ್ ಮೋರ್ ಕಂಫರ್ಟೇಬಲ್ (ಕಡಿಮೆ ಸಾಮಾನು ಬಹಳ ಅನುಕೂಲ) ಎನ್ನುವ ಘೋಷಣೆ ಇದೆ. ಇನ್ನೂ ವಿಮಾನದಲ್ಲಿಯಂತೂ ಇಂತಿಷ್ಟೇ ಭಾರ ಜೊತೆಗಿರಬೇಕು ಇಂತಹದ್ದೇ ಸಾಮಾನು ಜೊತೆಗೆ ಇರಬೇಕು ಎಂಬ ನಿಯಮವಿದೆ. ನಿಯಮಕ್ಕೆ ವಿರೋಧವಾದ ವಸ್ತುಗಳು ( ಸಣ್ಣ ಚಾಕು, ಕತ್ತರಿ,  ಇತ್ಯಾದಿ) ಎಷ್ಟೇ ಬೆಲೆಬಾಳುವದಿದ್ದರೂ ಮುಲಾಜಿಲ್ಲದೆ […]