ರಾಜ್ಯ

ರಾಜ್ಯದ ಮಳೆ, ನೆರೆಗೆ ಐದು ಜನರ ಬಲಿ

ಬೆಂಗಳೂರು prajakiran.com : ರಾಜ್ಯದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆ, ಪ್ರವಾಹದ ಪ್ರತಾಪಕ್ಕೆ ಸೋಮವಾರ ಐದು ಜನ ಬಲಿಯಾಗಿದ್ದಾರೆ. ಹಲವು ಜಿಲ್ಲೆಗಳು ಅಕ್ಷರಶಃ ಸಂಕಷ್ಟಕ್ಕೆ ಸಿಲುಕಿವೆ. ರಾಯಚೂರು ಜಿಲ್ಲೆಯಲ್ಲಿ ತೆಪ್ಪ ಮಗುಚಿನಾಲ್ವರು ಕೃಷ್ಣಾ ನದಿಯ ಪ್ರವಾಹಕ್ಕೆ ಕೊಚ್ಚಿ ಹೊಗಿದ್ದಾರೆ. ನಡುಗಡ್ಡೆಯಲ್ಲಿರುವ ಪೆದ್ದಕುರುಮ ಗ್ರಾಮಕ್ಕೆ ತೆಪ್ಪದಲ್ಲಿ ತೆರಳುತ್ತಿದ್ದಾಗ ಏಕಾಎಕಿ ಪ್ರವಾಹ ಬಂದ ಪರಿಣಾಮ ತೆಪ್ಪದೊಳಗೆ ನೀರು ನುಗ್ಗಿದೆ. ಒಟ್ಟು 13 ಜನರಿದ್ದ ತೆಪ್ಪದಲ್ಲಿ ನಾಲ್ವರು ನೀರು ಪಾಲಾಗಿದ್ದರೆ, 9 ಜನರನ್ನು ರಕ್ಷಿಸಲಾಗಿದೆ. ಈ ಮಧ್ಯೆ ರಾಯಚೂರು ಜಿಲ್ಲೆಯ ರಾಮದುರ್ಗದಲ್ಲಿ ಮನೆಯೊಂದು […]

ರಾಜ್ಯ

ಪ್ರವಾಹ ಭೀತಿಯಲ್ಲಿ ಬಾಗಲಕೋಟೆಯ ಹಲವು ಗ್ರಾಮಗಳು…!

ಬಾಗಲಕೋಟೆ prajakiran.com  : ಪ್ರವಾಹ ಭೀತಿಯ ಹಿನ್ನಲೆಯಲ್ಲಿ ಬಾಗಲಕೋಟೆ ಜಿಲ್ಲೆಯ ನದಿ ತೀರದ ಹಲವು ಹಳ್ಳಿಗಳ ಗ್ರಾಮಸ್ಥರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಜಿಲ್ಲೆಯಲ್ಲಿ ಮೂರು ನದಿಗಳ ಆರ್ಭಟ ಜೋರಾಗಿದೆ. ಹೀಗಾಗಿ ನದಿತೀರದ ಜನತೆ ಮತ್ತೆ ಕಂಗಾಲಾಗಿದ್ದು, ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಬದುಕುವಂತಾಗಿದೆ. ಬಾದಾಮಿ ತಾಲೂಕಿನ ಗೋವನಕೊಪ್ಪ ಗ್ರಾಮದಲ್ಲಿ ಅಪಾಯ ಮೀರಿ ಹರಿಯುತ್ತಿದೆ ಮಲಪ್ರಭಾ ನದಿ ಕಳೆದ ವರ್ಷ ಕೂಡ ಗ್ರಾಮದ ಹಲವು ಮನೆ ನೆಲಸಮಗೊಂಡಿದ್ದವು. ಈ ವರ್ಷ ಮತ್ತೆ ಪ್ರವಾಹ ಬಂದರೆ ಹೇಗೆ ಎಂಬ ಭೀತಿಯಲ್ಲಿದ್ದಾರೆ.ಇದೇ ವೇಳೆ ಕಳೆದ […]

ರಾಜ್ಯ

ಲಕಖಾಪುರ ನಡುಗಡ್ಡೆ : ರಾತ್ರಿಯಿಡೀ ಪರದಾಡಿದ ಜನತೆ

ಗದಗ prajakiran.com : ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಗ್ರಾಮವೊಂದು ಅಕ್ಷರಶಃ ನಡುಗಡ್ಡೆಯಂತಾಗಿದೆ. ಇದರಿಂದಾಗಿ ಗ್ರಾಮಸ್ಥರು ನಿನ್ನೆ ಸಂಜೆಯಿಂದ ರಸ್ತೆ ಬದಿ ಟೆಂಟ್ ಹಾಕಿಕೊಂಡು ಉಳಿದಿದ್ದರೆ, ಇನ್ನು ಕೆಲವರು ಟ್ರ್ಯಾಕ್ಟರ್ ನಲ್ಲಿ ತಂಗಿದ್ದರು. ಹೌದು ಇಂತಹ ಸಂಕಷ್ಟ ಪರಿಸ್ಥಿತಿ ಎದುರಿಸುತ್ತಿರುವ ಗ್ರಾಮ ಗದಗ ಜಿಲ್ಲೆಯ ನರಗುಂದ ತಾಲೂಕಿನ ಲಕಖಾಪುರ ಸುತ್ತಲೂ ನೀರು ತುಂಬಿ ನಡುಗಡ್ಡೆಯಂತಾಗಿತ್ತು.ಈ ಗ್ರಾಮವಷ್ಟೇ ಅಲ್ಲದೆ, ಮಲಪ್ರಭಾ ನದಿ ಅಂಚಿನಲ್ಲಿರುವ ಗದಗ ಜಿಲ್ಲೆಯ ರೋಣ ಹಾಗೂ ನರಗುಂದ ತಾಲೂಕಿನ 25ಕ್ಕೂ ಹೆಚ್ಚು ಗ್ರಾಮಗಳು ಪ್ರವಾಹ […]

ರಾಜ್ಯ

ಗದಗ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ…!

ಮಂಜುನಾಥಸಿಂಗ್ ರಾಠೋಢ ಗದಗ : ಮಲಪ್ರಭಾ ಅಚ್ಚುಕಟ್ಟು ಪ್ರದೇಶಗಳಲ್ಲಿ ಮಳೆ ಪ್ರಮಾಣ ಹೆಚ್ಚಾಗಿದ್ದು, ನವೀಲುತೀರ್ಥ ಡ್ಯಾಂ ನಿಂದ 15 ಸಾವಿರ ಕ್ಯೂಸೆಕ್ಸ್ ನೀರು ಹೊರಗೆ ಬಿಡಲಾಗಿದೆ. ಯಾವುದೇ ಸಂದರ್ಭದಲ್ಲಿ ನೀರಿನ ಪ್ರಮಾಣ ಹೆಚ್ಚಾಗುವ ಸಾಧ್ಯತೆಯಿದ್ದು, ನದಿ ಪಾತ್ರದ ಗ್ರಾಮಗಳ ಜನತೆ ಮುಂಜಾಗ್ರತೆ ಕ್ರಮವಾಗಿ ಸುರಕ್ಷಿತ ಸ್ಥಳಗಳಿಗೆ ತೆರಳಬೇಕು ಎಂದು ರಾಜ್ಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ತಿಳಿಸಿದರು. ಜಿಲ್ಲೆಯ ನರಗುಂದ ತಾಲ್ಲೂಕಿನ ಲಕ್ಮಾಪೂರ ಗ್ರಾಮಕ್ಕೆ (ಅಗಸ್ಟ 16) […]

ndrf team rescue operation
ರಾಜ್ಯ

ಧಾರವಾಡದಲ್ಲಿ ಹಾನಿಯಾದ ಮನೆ, ಬೆಳೆಗಳಿಗೆ ಶೀಘ್ರ ಪರಿಹಾರ

ಧಾರವಾಡ prajakiran.com : ಕಳೆದ ಎರಡು ಮೂರು ದಿನಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿದ್ದು, ಇದರಿಂದಾಗಿ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಬಹಳಷ್ಟು ಮನೆಗಳಿಗೆ  ಮತ್ತು ಬೆಳೆ ಹಾನಿಯಾಗಿದೆ. ರಾಜ್ಯ ಸರಕಾರದಿಂದ ನಷ್ಟದ ಪರಿಹಾರ  ನೀಡಲು  ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಕ್ರಮಕೈಗೊಳ್ಳಲಾಗಿದೆ ಎಂದು    ಕೈಗಾರಿಕಾ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಜಗದೀಶ ಶೆಟ್ಟರ ಹೇಳಿದರು. ಅವರು ಭಾನುವಾರ ನವಲಗುಂದ ತಾಲೂಕಿನ ಯಮನೂರ ಹತ್ತಿರದ ಬೆಣ್ಣಿ ಹಳ್ಳದಲ್ಲಿ ಎನ್.ಡಿ.ಆರ್.ಎಫ್. ತಂಡ ನಡೆಸಿದ ಜೀವರಕ್ಷಣೆ ಕುರಿತ ಅಣಕು ಪ್ರದರ್ಶನ ವೀಕ್ಷಣೆ ಮಾಡಿ  ಮಾತನಾಡಿದರು. ನವಲಗುಂದಕ್ಕೆ […]