ರಾಜ್ಯ

ಧಾರವಾಡ ಜಿಲ್ಲಾಡಳಿತ ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ವಾಟ್ಸ ಅಪ್ ಮೂಲಕ ಸ್ಪಂದನೆ  

ಧಾರವಾಡ prajakiran.com : ಸಾರ್ವಜನಿಕರು ಕಚೇರಿಗೆ ಅಲೆದಾಡುವುದನ್ನು ತಪ್ಪಿಸಲು ಹಾಗೂ ಕೋವಿಡ್ ಮುಂಜಾಗೃತೆಗಾಗಿ ಧಾರವಾಡ ಜಿಲ್ಲಾಡಳಿತವು ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ವಾಟ್ಸ್ ಅಪ್ ಮೂಲಕ ಜನರಿಗೆ ಸರ್ಕಾರಿ ಸೌಲಭ್ಯಗಳನ್ನು ವಿಸ್ತರಿಸುತ್ತಿದೆ.  ಕಚೇರಿಗೆ ಬಾರದೇ ಮನೆಯಲ್ಲಿಯೇ ಕುಳಿತು ಸಾಮಾಜಿಕ ಭದ್ರತಾ ಯೋಜನೆಯಡಿ ಪಿಂಚಣಿಗೆ ಅರ್ಹರನ್ನು ಆಯ್ಕೆಮಾಡಿರುವ ಕ್ರಮವನ್ನು ಬೃಹತ್ ಮಧ್ಯಮ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ ಶೆಟ್ಟರ್ ಮುಕ್ತ ಕಂಠದಿಂದ ಶ್ಲಾಘನೆ ಮಾಡಿದರು. ಹಾಗೂ ಫಲಾನುಭವಿಗಳಿಗೆ ಸ್ವತ: ಆದೇಶ ಪತ್ರ ವಿತರಿಸಿದರು. ಸಂಧ್ಯಾ ಸುರಕ್ಷಾ ಪಿಂಚಣಿ […]

ಜಿಲ್ಲೆ

ಕೊರೊನಾ ಸುರಕ್ಷತೆ : ಜಿಲ್ಲಾಡಳಿತದಿಂದ ಉಚಿತ ದೂರವಾಣಿ ಸಮಾಲೋಚನೆ  

ಧಾರವಾಡ prajakiran.com : ಕೊರೊನಾ ಸುರಕ್ಷತೆ ಹಾಗೂ ಆರೋಗ್ಯ ಸಮಸ್ಯೆಗಳ ಕುರಿತು ನಾಗರಿಕರಿಗೆ ಉಚಿತ ಸಮಾಲೋಚನೆ ಸೌಲಭ್ಯ ಕಲ್ಪಿಸಿದೆ. ಸಲಹೆ ನೀಡಲು ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ಹಾಗೂ ಸರ್ಕಾರೇತರ ಸಂಸ್ಥೆಗಳು ಮತ್ತು ರಾಜ್ಯ, ಹೊರರಾಜ್ಯ ಹಾಗೂ ವಿದೇಶಗಳಲ್ಲಿರುವ ಆಸಕ್ತ ವೈದ್ಯರ ಸಹಯೋಗದಲ್ಲಿ ಆಶ್ರಯದಲ್ಲಿ, ವೈದ್ಯರೊಂದಿಗೆ ಚರ್ಚಿಸಿ ಸಲಹೆ ಪಡೆಯಲು ದೂರವಾಣಿ ಮೂಲಕ ಉಚಿತ ಸಮಾಲೋಚನೆ ನಡೆಸಬಹುದು. ಈ ಸೌಲಭ್ಯವನ್ನು ನಾಗರಿಕರು https://i-invent.org/ddclics ವೆಬ್ ವಿಳಾಸ ಮೂಲಕ ಪಡೆಯಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. Share on: WhatsApp

ರಾಜ್ಯ

ಧಾರವಾಡ ಜಿಲ್ಲೆಯ 71 ಕರೋನಾ ಸೋಂಕಿತರ ವಿವರ ಇಲ್ಲಿದೆ ನೋಡಿ

*ಒಟ್ಟು 1159 ಕ್ಕೇರಿದ ಪ್ರಕರಣಗಳ ಸಂಖ್ಯೆ* *ಇದುವರೆಗೆ 434 ಜನ ಗುಣಮುಖ ಬಿಡುಗಡೆ* *687 ಸಕ್ರಿಯ ಪ್ರಕರಣಗಳು* ಇದುವರೆಗೆ 38 ಮರಣ ಧಾರವಾಡ prajakiran.com : ಧಾರವಾಡ ಜಿಲ್ಲೆಯಲ್ಲಿ ಸೋಮವಾರ ಮತ್ತೇ 71 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಒಟ್ಟು ಪ್ರಕರಣಗಳ ಸಂಖ್ಯೆ 1159 ಕ್ಕೆ ಏರಿದೆ. ಇದುವರೆಗೆ 434 ಗುಣಮುಖರಾಗಿ ಆಸ್ಪತ್ರೆಯಿಂದ  ಬಿಡುಗಡೆಯಾಗಿದ್ದಾರೆ. 687 ಪ್ರಕರಣಗಳು ಸಕ್ರಿಯವಾಗಿವೆ.38 ಜನ ಮೃತಪಟ್ಟಿದ್ದಾರೆ  ಎಂದು ಜಿಲ್ಲಾಧಿಕಾರಿಗಳಾದ ನಿತೇಶ್ ಪಾಟೀಲ್ ತಿಳಿಸಿದ್ದಾರೆ. DWD 1089 (15 ವರ್ಷ,ಬಾಲಕ) ಹುಬ್ಬಳ್ಳಿ ನಗರದ ಕಾರವಾರ […]