ರಾಜ್ಯ

ನಿರುದ್ಯೋಗಿ ಪದವೀಧರರ ಬದುಕು ರೂಪಿಸಲು ಹತ್ತು ಹಲವು ಯೋಜನೆ ರೂಪಿಸಿದ ಬಸವರಾಜ ಗುರಿಕಾರ

ಧಾರವಾಡ prajakiran.com : ರಾಜ್ಯ ಸರ್ಕಾರ ನೇಮಿಸಿಕೊಳ್ಳುವ ಎಲ್ಲ ತಾತ್ಕಾಲಿಕ ನೇಮಕಾತಿಯಲ್ಲಿ ನಿವೃತ್ತರೇ ಇದ್ದಾರೆ. ಈ ಸ್ಥಳಗಳಲ್ಲಿ ನಿರುದ್ಯೋಗಿ ಪದವೀಧರರನ್ನು ನೇಮಿಸುವುದು. ನಿರುದ್ಯೋಗಿ ಪದವೀಧರರಿಗೆ ಸುಸ್ಥಿರ ಕೃಷಿಗೆ ತೊಡಗಿಕೊಳ್ಳಲು ಸುಸ್ಥಿರ ನೆರವು ಯೋಜನೆ ಜಾರಿಗೆ ತರಲು ಸರ್ಕಾರದ ಮೇಲೆ ಒತ್ತಡ ಹಾಕಲಾಗುವುದು ಎಂದು ಪಶ್ಚಿಮ ಪದವೀಧರ ಕ್ಷೇತ್ರದ ಪಕ್ಷೇತರಅಭ್ಯರ್ಥಿ ಬಸವರಾಜ ಗುರಿಕಾರ ಹೇಳಿದರು. ಅವರು ಬುಧವಾರ ಹುಬ್ಬಳ್ಳಿಯ ನೆಹರು ಕಾಲೇಜು, ಕುಂದಗೋಳ ಪ್ರಥಮ ದರ್ಜೆ ಕಾಲೇಜು, ಹರ್ಬಟ್ ಕಾಲೇಜಿನಲ್ಲಿ ಬಿರುಸಿನ ಪ್ರಚಾರ ನಡೆಸಿ, ಮತ ಯಾಚನೆ ಮಾಡಿದರು. […]

ರಾಜ್ಯ

ಧಾರವಾಡ ಪಶ್ಚಿಮ ಪದವೀಧರರ ಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಬಸವರಾಜ ಗುರಿಕಾರ ನಾಮಪತ್ರ ಸಲ್ಲಿಕೆ

ಧಾರವಾಡ prajakiran.com : ಧಾರವಾಡ ಪಶ್ಚಿಮ ಪದವೀಧರರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಬಸವರಾಜ ಗುರಿಕಾರ ಮಂಗಳವಾರ ಧಾರವಾಡ  ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಾಮ ಪತ್ರ  ಸಲ್ಲಿಸಿದರು. ನಾಮ ಪತ್ರ ಸಲ್ಲಿಕೆ ಮುನ್ನ ಜಗಜ್ಯೋತಿ ಬಸವೇಶ್ವರ, ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ ಅಂಬೇಡ್ಕರ, ಛತ್ರಪತಿ ಶಿವಾಜಿ ಮಹಾರಾಜ, ಡೆಪೂಟಿ ಚೆನ್ನಬಸಪ್ಪ ಪುತ್ಥಳಿಗಳಿಗೆ ಮಾಲಾರ್ಪಣೆ ಮಾಡಿ ನಮನ ಸಲ್ಲಿಸಿದರು.  ನಂತರ ಕರ್ನಾಟಕ ಕಾಲೇಜು ಆವರಣದಿಂದ ಆಲೂರು ವೆಂಕಟರಾವ್ ಪುತ್ಥಳಿಯವರೆಗೆ  ಪದವೀಧರರೊಂದಿಗೆ ಆಗಮಿಸಿದರು. ಈ ಸಂಧರ್ಭದಲ್ಲಿ ಮೃತ್ಯುಂಜಯ ಸಹಕಾರಿ ಬ್ಯಾಂಕ್ ಅಧ್ಯಕ್ಷರಾದ ಬಸವರಾಜ […]

ರಾಜ್ಯ

ದೂರ ಶಿಕ್ಷಣ ರದ್ದುಗೊಳಿಸಿರುವ ರಾಜ್ಯ ಸರಕಾರದ ಕ್ರಮಕ್ಕೆ ಬಸವರಾಜ ಗುರಿಕಾರಅಸಮಾಧಾನ

ಧಾರವಾಡ prajakiran.com : ಕರ್ನಾಟಕದ ಸಾಂಪ್ರದಾಯಿಕ ವಿಶ್ವವಿದ್ಯಾಲಯಗಳು ದೂರ ಶಿಕ್ಷಣ ಮುಖಾಂತರ ನೀಡಲಾಗುತ್ತಿರುವ ಕೋರ್ಸ್ ಗಳಿಗೆ ರಾಜ್ಯ ಸರ್ಕಾರ ಅನುಮತಿ ರದ್ದುಗೊಳಿಸಿರುವುದು ಸರಿಯಾದ ಬೆಳವಣಿಗೆ ಅಲ್ಲ ಎಂದು ಅಖಿಲ ಭಾರತ ಶಿಕ್ಷಕರ ಫೆಡರೇಷನ್ ಉಪಾಧ್ಯಕ್ಷ ಬಸವರಾಜ ಗುರಿಕಾರ  ಅಸಮಾಧಾನ  ವ್ಯಕ್ತಪಡಿಸಿದ್ದಾರೆ.   ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ  ಹಾಗೂ ಉನ್ನತ ಶಿಕ್ಷಣ ಸಚಿವರು ಈ ನಿರ್ಣಯವನ್ನು ಮರುಪರಿಶೀಲಿಸಿ, ಅವಕಾಶ ಮುಂದುವರೆಸಬೇಕೆಂದು  ಆಗ್ರಹಿಸಿದ್ದಾರೆ. ರಾಜ್ಯ ಸರ್ಕಾರದ ಈ ನಿರ್ಣಯದಿಂದಾಗಿ ರಾಜ್ಯದಲ್ಲಿ ದೂರ ಶಿಕ್ಷಣ ಪಡೆಯಲು ಬಯಸುವ ಲಕ್ಷಾಂತರ ವಿದ್ಯಾರ್ಥಿಗಳು ಉನ್ನತ […]

ರಾಜ್ಯ

ಮಕ್ಕಳಿಗೆ ಆನ್ ಲೈನ್ ಶಿಕ್ಷಣ ಬೇಡವೇ ಬೇಡ ಎಂದ ಬಸವರಾಜ ಗುರಿಕಾರ

ಧಾರವಾಡ prajakiran.com : ರಾಜ್ಯಾದ್ಯಂತ ಬಹು ಚರ್ಚಿತ ವಿಷಯವಾಗಿರುವ ಆನ್ ಲೈನ್ ಶಿಕ್ಷಣ ಯಾವುದೇ ಕಾರಣಕ್ಕೂ ಪ್ರಾಥಮಿಕ, ಪ್ರೌಢ ಶಾಲೆಯ ಮಕ್ಕಳಿಗೆ ಬೇಡವೇ ಬೇಡ ಎಂದು ಅಖಿಲ ಭಾರತ ಶಿಕ್ಷಕರ ಫೆಡರೇಶನ್ ರಾಷ್ಟ್ರೀಯ ಉಪಾಧ್ಯಕ್ಷ ಬಸವರಾಜ ಗುರಿಕಾರ ಆಗ್ರಹಿಸಿದ್ದಾರೆ. ಅವರು ಶನಿವಾರ ನಗರದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ರಾಜ್ಯ ಸರಕಾರ ಯಾವುದೇ ಕಾರಣಕ್ಕೂ ಆನ್ ಲೈನ್ ಶಿಕ್ಷಣಕ್ಕೆ ಅವಕಾಶ ನೀಡಬಾರದು ಎಂದು ಮನವಿ ಮಾಡಿದರು. ಇದರಿಂದ ಮಕ್ಕಳಿಗೆ ಲಾಭಕ್ಕಿಂತ ನಷ್ಟವೇ ಹೆಚ್ಚು. ಪೋಷಕರೇ ಮಕ್ಕಳಿಗೆ ಮೋಬೈಲ್ ನೀಡಿ ದಾರಿ […]