ರಾಜ್ಯ

ಬೆಳಗಾವಿ, ಬಾಗಲಕೋಟೆಯ ಪ್ರವಾಹ ಪ್ರೀಡಿತ ಪ್ರದೇಶಗಳ ವೈವಾನಿಕ ಸಮೀಕ್ಷೆ

ಬೆಳಗಾವಿ/ ಬಾಗಲಕೋಟೆ prajakiran.com : ಉತ್ತರಕರ್ನಾಟಕ ಭಾಗದಲ್ಲಿ ಸುರಿಯುತ್ತಿರುವ ಮಳೆಯಿಂದ ಸಂಭವಿಸಿದ ಅಪಾರ ಹಾನಿಯ ವೈಮಾನಿಕ ಸಮೀಕ್ಷೆಯನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಂಗಳವಾರ ನಡೆಸಿದರು. ಬೆಳಗಾವಿಹಾಗೂ ಬಾಗಲಕೋಟೆ ಜಿಲ್ಲೆಯ ಹಲವು ಪ್ರದೇಶಗಳ ವಸ್ತುಸ್ಥಿತಿಯನ್ನು ಕಣ್ಣಾರೆ ಕಂಡರು. ಜನರಿಗೆ ಆದಅಪಾರ ಹಾನಿ ಕುರಿತು ಕಂದಾಯ ಸಚಿವ ಆರ್. ಅಶೋಕ್, ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ, ಡಿಸಿಎಂ ಲಕ್ಷ್ಮಣ ಸವದಿ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಂದ ಪಡೆದುಕೊಂಡರು. ಇದಕ್ಕು ಮುನ್ನ ಬೆಳಗಾವಿಯಲ್ಲಿಧಾರವಾಡ, ಬೆಳಗಾವಿ ಹಾಗೂ ಇತರ ಜಿಲ್ಲೆಗಳ ಅಧಿಕಾರಿಗಳ […]

ಅಂತಾರಾಷ್ಟ್ರೀಯ

ಸಚಿವ ರಮೇಶ ಜಾರಕಿಹೊಳಿಗೆ ಪತ್ರ ಬರೆದ ಡಿಸಿಎಂ ….!

ಮಲಪ್ರಭಾ ನದಿಗೆ ಒತ್ತುವರಿ ಕಂಟಕ ಬೆಂಗಳೂರು prajakiran.com : ಉತ್ತರಕರ್ನಾಟಕದ ಜೀವನಾಡಿ ಮಲಪ್ರಭಾ ನದಿ ತೀರದಲ್ಲಿ ಅತಿಯಾದ ಮಾನವನ ದುರಾಸೆಯಿಂದ ಒತ್ತುವರಿ ಪರಿಣಾಮ ನದಿ ಪ್ರವಾಹದಿಂದ ಬೆಳಗಾವಿ, ಧಾರವಾಡ, ಗದಗ ಹಾಗೂ ಬಾಗಲಕೋಟೆ ಜಿಲ್ಲೆಗಳ ವ್ಯಾಪ್ತಿಯಲ್ಲಿ ಅಪಾರ ಆಸ್ತಿಪಾಸ್ತಿ ಹಾನಿಯುಂಟಾಗುತ್ತಿದೆ. ಆದುದ್ದರಿಂದ ಮಲಪ್ರಭಾ ನದಿ ಪಾತ್ರದ ಒತ್ತುವರಿ ತೆರವುಗೊಳಿಸುವುದಕ್ಕೆ ಸರಕಾರ ಕ್ರಮ ಕೈಗೊಳ್ಳಬೇಕಾಗುತ್ತದೆ.  ಹೀಗಾಗಿ ಮಲಪ್ರಭಾ ನದಿಯ ಉಳಿವಿಗೆ ಒತ್ತುವರಿ ತೆರವುಗೊಳಿಸಿ, ಶಾಶ್ವತ ಪರಿಹಾರ ಕಂಡು ಕೊಳ್ಳುವ ಮತ್ತು ಪ್ರವಾಹ ನಿಯಂತ್ರಿಸುವ ಬಗ್ಗೆ ನಾಲ್ಕು ಜಿಲ್ಲೆಗಳ ಜನಪ್ರತಿನಿಧಿಗಳ […]

ರಾಜ್ಯ

ಕೃಷ್ಣಾ ನದಿ ಹಿನ್ನಿರಿನಿಂದ ಜಮಖಂಡಿ ತಾಲೂಕಿನ ಹಲವು ಗ್ರಾಮಗಳ ಸಂಪರ್ಕ ಕಡಿತ

ಬಾಗಲಕೋಟೆ prajakiran.com : ಮಹಾರಾಷ್ಟ್ರದ ಪಶ್ಚಿಮಘಟ್ಟದಲ್ಲಿ ಮಳೆಯ ಅಬ್ಬರ ಮುಂದುವರೆದಿದೆ. ಅದೇ ರೀತಿ ಉತ್ತರಕರ್ನಾಟಕದ ಬೆಳಗಾವಿ, ಧಾರವಾಡ, ಬಾಗಲಕೋಟೆ,ಗದಗ ಜಿಲ್ಲೆಯ ನದಿಗಳಾದ  ಕೃಷ್ಣಾ, ಘಟಪ್ರಭಾ ಹಾಗೂ ಮಲಪ್ರಭಾ ನದಿಗಳು‌ ತುಂಬಿ ಹರಿಯುತ್ತಿವೆ. ಇದರಿಂದಾಗಿ‌ ನದಿಗಳ ಪಾತ್ರದ ಗ್ರಾಮಗಳಲ್ಲಿ ಪ್ರವಾಹದ ಭೀತಿ ಉಂಟಾಗಿದ್ದು,  ಆ ಭಾಗದ ಜನರು ಆತಂಕಗೊಂಡಿದ್ದು, ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಬದುಕುತ್ತಿದ್ದಾರೆ. ಮಂಗಳವಾರ   ಜಮಖಂಡಿ ತಾಲೂಕಿನ ಶುರರ್ಪಾಲಿ,ಜುಂಝರವಾಡ , ತುಬಚಿ,ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ, ಸೇತುವೆಗಳ ಮೇಲೆ ನೀರು ಹರಿಯುತ್ತಿರುವುದರಿಂದ ಸಂಪರ್ಕ ಕಡಿತಗೊಂಡಿದೆ. Share […]