ನವದೆಹಲಿ prajakiran. com : ದೇಶದಲ್ಲಿ ಪದೆ ಪದೇ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಯಾಗುತ್ತಿದ್ದು, ಇಂದು ಮತ್ತೆ ಪ್ರತಿ ಲೀಟರ್ ಪೆಟ್ರೋಲ್ ಬೆಲೆಯಲ್ಲಿ 13 ಪೈಸೆ, ಡೀಸೆಲ್ ನಲ್ಲಿ 29 ಪೈಸೆ ಹೆಚ್ಚಳವಾಗಿದೆ.
ರಾಜಧಾನಿ ಬೆಂಗಳೂರಿನಲ್ಲಿ ಪೆಟ್ರೋಲ್ 96.14 ರೂ. ಡೀಸೆಲ್ 88.84 ರೂಗೆ ಬೆಲೆ ಏರಿಕೆಯಾಗಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ 93.21 ರೂ. ಡೀಸೆಲ್ 84.07ಕ್ಕೆ ಏರಿಕೆಯಾಗಿದೆ.
ಮುಂಬೈನಲ್ಲಿ ಪೆಟ್ರೋಲ್ 99.49 ರೂ. ಡೀಸೆಲ್ 92.78 ರೂ. ಆಗಿದೆ.
ಚೆನ್ನೈ ನಲ್ಲಿ ಪೆಟ್ರೋಲ್ 94.40 ರೂ. ಡೀಸೆಲ್ ದರ 88.87 ರೂ. ಆಗಿದೆ.