ರಾಜ್ಯ

ಕೇಂದ್ರ, ರಾಜ್ಯದ ಬಿಜೆಪಿ ಸರಕಾರದಿಂದ ಆಶಾ ಕಾರ್ಯಕರ್ತೆಯರ ತೀವ್ರ ನಿರ್ಲಕ್ಷ್ಯ : ಪಿ.ಎಚ್. ನೀರಲಕೇರಿ ಆಕ್ರೋಶ

ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ಕಾಂಗ್ರೆಸ್ ಬೆಂಬಲ

ಕೋವಿಡ್ ಹೆಸರಿನಲ್ಲಿ ಲೂಟಿ ನಡೆಸುತ್ತಿರುವ ಬಿಜೆಪಿ

ಧಾರವಾಡ  prajakiran.com : ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ 42 ಸಾವಿರ ಆಶಾ ಕಾರ್ಯಕರ್ತೆಯರಿಗೆ ಕನಿಷ್ಟ ಮಾಸಿಕ ೧8 ಸಾವಿರ ಗೌರವಧನ ಕೊಡುವ ಮೂಲಕ ಅವರ ಸೇವೆಯನ್ನು ಕೇಂದ್ರ ಹಾಗೂ ರಾಜ್ಯ ಸರಕಾರ ತಮ್ಮ ಮಾತೃ ಹೃದಯವನ್ನು ಪ್ರದರ್ಶಿಸಬೇಕು ಎಂದು ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಪಿ.ಎಚ್. ನೀರಲಕೇರಿ ಆಗ್ರಹಿಸಿದರು.

ಅವರು ನಗರದಲ್ಲಿ ಶುಕ್ರವಾರ ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ಸಂಪೂರ್ಣ ಬೆಂಬಲ ಸೂಚಿಸಿ, ಐದು ಜನ ಆಶಾ ಕಾರ್ಯಕರ್ತೆಯರಿಗೆ ಸಾಂಕೇತಿಕವಾಗಿ ಸನ್ಮಾನಿಸಿ ಆಹಾರದ ಕಿಟ್ ನೀಡಿ ಗೌರವಿಸಿ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಸದೃಢ ಸಮಾಜ ನಿರ್ಮಾಣದಲ್ಲಿ ಆಶಾ ಕಾರ್ಯಕರ್ತರ ಪಾಲು ಬಹು ದೊಡ್ಡದಿದೆ.  ಸಮಾಜದ ಸ್ವಾಸ್ಥ್ಯ ಕಾಪಾಡುವ ಕರ್ತವ್ಯದಲ್ಲಿ ಆಶಾ ಕಾರ್ಯಕರ್ತೆಯರು ಹಗಲು ರಾತ್ರಿ ಯನ್ನೇ ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.

ಅವರು ಕಳೇದ 5 ತಿಂಗಳಿನಿಂದ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಸರಕಾರವನ್ನು ಆಗ್ರಹಿಸುತ್ತಲೇ ಬಂದರೂ ಸರಕಾರವು ಆಶಾ ಕಾರ್ಯಕರ್ತೆಯರ ಮನವಿಗೆ ಸ್ಪಂದಿಸದಿರುವುದು ನೋವಿನ ಸಂಗತಿಯಾಗಿದೆ ಎಂದು ಕಿಡಿಕಾರಿದರು.

ಈ ಹಿಂದೆ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರಕಾರದ ಅವಧಿಯಲ್ಲಿ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ (ಎನ್‌ಆರ್‌ಎಚ್‌ಎಂ) ಅಡಿಯಲ್ಲಿ ಸಮಾಜದಲ್ಲಿನ ಮಹಿಳೆಯರು ಮತ್ತು ನವಜಾತ ಶಿಶುಗಳ ಆರೋಗ್ಯ ರಕ್ಷಣೆಯ ಉದ್ದೇಶದಿಂದ ಆಶಾ ಕಾರ್ಯಕರ್ತೆಯರನ್ನು ನೇಮಕ ಮಾಡಿತ್ತು.

ಸದ್ಯ ಆಶಾ ಕಾರ್ಯಕರ್ತೆಯರಿಗೆ ಮಾಸಿಕ ಕೇಂದ್ರ ಸರಕಾರ ೨ ಸಾವಿರ ಮತ್ತು ರಾಜ್ಯ ಸರಕಾರ ೪ ಸಾವಿರ ಸೇರಿ ಒಟ್ಟು 6 ಸಾವಿರ ರೂಪಾಯಿಗಳನ್ನು ಮಾತ್ರ  ನೀಡುತ್ತಿದೆ.

ಅದನ್ನು ಅವರು 12 ಸಾವಿರಕ್ಕೆ ಹೆಚ್ಚಿಸಬೇಕು ಎಂದು ಆಗ್ರಹಿಸಿ ಹೋರಾಟ ನಡೆಸುತ್ತಿದ್ದಾರೆ. ಅವರ ನ್ಯಾಯಯುತ ಹೋರಾಟಕ್ಕೆ ನಮ್ಮ ಕರ್ನಾಟಕ ಕಾಂಗ್ರೆಸ್ ಸಂಪೂರ್ಣ ಬೆಂಬಲ ನೀಡುತ್ತದೆ ಎಂದು ತಿಳಿಸಿದರು.

ಸರಕಾರದ ಇಲಾಖೆಯೊಂದರಲ್ಲಿ ನಿಗದಿತ ಸಮಯದಲ್ಲಿ ಕರ್ತವ್ಯ ನಿರ್ವಹಿಸುವ ‘ಡಿ’ ದರ್ಜೆ ನೌಕರ ೧೮ ಸಾವಿರ ಮೂಲ ವೇತನ ಪಡೆಯುತ್ತಾರೆ.

ಆದರೆ ದಿನ 24 ಗಂಟೆಗಳ ಕಾಲ ಯಾವುದೇ ಸಮಯವನ್ನು ಲೆಕ್ಕಸಿದೆ ದುಡಿಯುವ ಆಶಾ ಕಾರ್ಯಕರ್ತೆಯರಿಗೆ  ಕೇಂದ್ರ ಸರಕಾರ ೪ ಸಾವಿರ ಮತ್ತು ರಾಜ್ಯ ಸರಕಾರ ೮ ಸಾವಿರ ರೂಪಾಯಿಗಳನ್ನು ಕೊಡಲು ಮುಂದೆ ಬಾರದಿರುವುದುಅವರ ನಿರ್ಲಜ್ಯತನವನ್ನು ತೋರಿಸುತ್ತದೆ.

ಅವರಿಗೆ ದುಡ್ಡುಹೊಡೆಯುವುದರಲ್ಲಿ ಇರುವ ಹುಮ್ಮಸ್ಸು, ಸಾವಿರಾರು ಆಶಾ ಕಾರ್ಯಕರ್ತೆಯರು ತಾಯಂದಿರ  ಬಗ್ಗೆಇಲ್ಲ. ಇವರಿಗೆಯಾವುದೇ ಮಾನ ಮರ್ಯಾದೆ ಇಲ್ಲ.

ಕೇಂದ್ರದ ನರೇಂದ್ರ ಮೋದಿ ಹಾಗೂ ರಾಜ್ಯದ ಬಿ.ಎಸ್. ಯಡಿಯೂರಪ್ಪ ಸರಕಾರದ ಅನಾದರದ ವಿರುದ್ದ  ತೀವ್ರ ಹಾಗೂ ಹರಿತ ಶಬ್ದಗಳಲ್ಲಿ ಹರಿಹಾಯ್ದರು.

ಪಸ್ತುತ ಕೋವಿಡ್ ಸಂಕಷ್ಟದಲ್ಲಿ ಆಶಾ ಕಾರ್ಯಕರ್ತೆಯರು ತಮ್ಮ ಜೀವವನ್ನು ಲೆಕ್ಕಿಸದೇ ಸರಕಾರದ ಆದೇಶದಂತೆ ಕೆಲಸ ನಿರ್ವಹಿಸುತ್ತಿದ್ದಾರೆ. ಅವರಿಗೆ ೫೦ ಲಕ್ಷ ರೂಪಾಯಿ ವಿಮೆ ಒದಗಿಸುವ ಬದಲು, ಬದುಕಿರುವಾಗ ಅಗತ್ಯ ಸಂರಕ್ಷಣಾ ಸಾಮಗ್ರಿ, ಗೌರವಧನ ನೀಡಲು ಆಸಕ್ತಿ ತೋರಿಸಬೇಕು ಎಂದರು.

ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತ್ತಾಯಿಸಿ ರಾಜ್ಯಾದ್ಯಂತ ಆಶಾ ಕಾರ್ಯಕರ್ತೆಯರು ಹೋರಾಟ ನಡೆಸುತ್ತಿದ್ದರೆ, ಸರಕಾರದಲ್ಲಿರುವ ಸಚಿವರು ಕೋವಿಡ್-೧೯ ಹೆಸರಿನಲ್ಲಿ ಲೂಟಿ ಮಾಡುತ್ತಿದ್ದಾರೆ.

 ತಮಿಳುನಾಡು ಸರಕಾರ ಅದೇ ವೆಂಟಿಲೇಟರ್ ಅನ್ನು 4 ಲಕ್ಷಕ್ಕೆ ಖರೀದಿಸಿದೆ. ಅದನ್ನೇ ನಮ್ಮ ರಾಜ್ಯದ ಬಿಜೆಪಿ ಸರಕಾರ 18 ಲಕ್ಷಕ್ಕೆ ಖರೀದಿಸುವ ಮೂಲಕ ಕೋಟ್ಯಾಂತರ ರೂಪಾಯಿ ಹೊಡೆಯುತ್ತಿದೆ ಎಂದು ಆರೋಪಿಸಿದರು.

 ನಮ್ಮ ಜಿಲ್ಲೆಯವರೇ ಆದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಅವರು ಈವರಗೆ ಆಶಾ ಕಾರ್ಯಕರ್ತೆಯರ ಬಗ್ಗೆ ಚಕಾರ ಎತ್ತುತ್ತಿಲ್ಲ. ಇದು ಅವರ ಹೊಣೆಗೇಡಿತನವನ್ನು ಪ್ರದರ್ಶಿಸುತ್ತದೆ ಎಂದು ಕಿಡಿಕಾರಿದರು.

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಸ್ವಾತಿ ಮಾಳಗಿ, ಮಂಜುನಾಥ ಭೋವಿ, ಎಸ್.ಎ. ಪವಾರ, ಎನ್.ಬಿ.ನಾಗರಾಜ, ಆಶಾ ಕಾರ್ಯಕರ್ತೆಯರಾದ ಸವಿತಾ ಛಬ್ಬಿ ಇನ್ನಿತರರು ಸುದ್ದಿಗೋಷ್ಠಿಯಲ್ಲಿದ್ದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *