ಅಂತಾರಾಷ್ಟ್ರೀಯ

ಭಟ್ಕಳದಲ್ಲಿ ಅಕ್ರಮವಾಗಿ 8 ವರ್ಷಗಳಿಂದ ನೆಲೆಸಿದ್ದ ಪಾಕಿಸ್ತಾನ ಮಹಿಳೆ ಬಂಧನ…!

ಭಟ್ಕಳ prajakiran.com : ಪಾಕಿಸ್ತಾನ ಮಹಿಳೆಯೊಬ್ಬಳು ಕಳೆದ 8 ವರ್ಷಗಳಿಂದ ಭಟ್ಕಳದಲ್ಲಿ ಅಕ್ರಮವಾಗಿ ನೆಲೆಸಿದ್ದು ಪತ್ತೆಯಾಗಿದೆ‌.

ತಕ್ಷಣ ಆ ಮಹಿಳೆಯನ್ನು ಉತ್ತರಕನ್ನಡ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ದೇವರಾಜು ನೇತೃತ್ವದ ತಂಡ ಗುರುವಾರ ವಶಕ್ಕೆ ಪಡೆದಿದೆ.

ಬಂಧಿತ ಮಹಿಳೆಯನ್ಬು
ಖತೀಜಾ ಜಾವೇದ್ ಎಂದು ಗುರುತಿಸಲಾಗಿದ್ದು, ಖಚಿತ ಮಾಹಿತಿ ಮೇರೆಗೆ ಪೊಲೀಸರು ಪರಿಶೀಲನೆ ನಡೆಸಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ.

8 ವರ್ಷದ ಹಿಂದೆ ಭಟ್ಕಳ ಮೂಲದ ಜಾವೀದ್ ಮೊಹಿದ್ದೀನ್ ರುಕ್ನುದ್ದೀನ್‌ ಅನ್ನು ದುಬೈನಲ್ಲಿ ವಿವಾಹವಾಗಿದ್ದಳು.

ಖತೀಜಾ 2014ರಲ್ಲಿ ಪ್ರವಾಸಿ ವೀಸಾ ಪಡೆದು 3 ತಿಂಗಳು ಭಾರತದಲ್ಲಿದ್ದು ವಾಪಸ್​ ಹೋಗಿದ್ದಳು.

ಆನಂತರ ಕಳ್ಳಮಾರ್ಗದ ಮೂಲಕ ಭಾರತ ಪ್ರವೇಶಿಸಿದ್ದ ಮಹಿಳೆ, ಭಟ್ಕಳದಲ್ಲೇ ಪತಿಯೊಂದಿಗೆ ವಾಸವಿದ್ದಳು.

ಅಲ್ಲದೆ, ಸುಳ್ಳು ದಾಖಲೆ ನೀಡಿ ವೋಟರ್ ಐಡಿ, ರೇಶನ್ ಕಾರ್ಡ್, ಪಡೆದಿದ್ದಾಳೆ.

ಆಕೆಯ ವಿರುದ್ಧ ಐಪಿಸಿ ಸೆಕ್ಷನ್ 468, 471 ಅಡಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *