ರಾಜ್ಯ

ಧಾರವಾಡದ ಹೆಬ್ಬಳ್ಳಿ ಗ್ರಾಮ ಪಂಚಾಯತ್ ಎದುರು ಮಳೆಹಾನಿ ಪರಿಹಾರ ವಿತರಣೆ ತಾರತಮ್ಯ ಪ್ರತಿಭಟನೆ

ಧಾರವಾಡ ಪ್ರಜಾಕಿರಣ.ಕಾಮ್  : ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದಲ್ಲಿ ಕಳೆದ ಅಕ್ಟೋಬರ್ ತಿಂಗಳಲ್ಲಿ ಸುರಿದ ಅಪಾರ ಮಳೆಯಿಂದ 220 ಮನೆ ಹಾನಿಗೀಡಾಗಿವೆ.

ಮನೆ ಬಿದ್ದು ತಿಂಗಳು ಕಳೆದರೂ ಈವರೆಗೆ ಅನೇಕರಿಗೆ ಪರಿಹಾರ ದೊರೆತಿಲ್ಲ. ಅದರಲ್ಲಿ ಕೇವಲ 36 ಜನರಿಗೆ ಮಾತ್ರ ಅನುಮೋದನೆ ನೀಡಲಾಗಿದೆ.

ಇನ್ನುಳಿದ 180 ಜನರಿಗೆ ಅನ್ಯಾಯ ಏಸಗಲಾಗಿದೆ ಎಂದು ಆರೋಪಿಸಿ ಬುಧವಾರ ಹಲವಾರು ಗ್ರಾಮಸ್ಥರು ಹೆಬ್ಬಳ್ಳಿ ಗ್ರಾಮ ಪಂಚಾಯತ್ ಎದುರು ಪ್ರತಿಭಟನೆ ನಡೆಸಿದರು.

ನೇತೃತ್ವ ವಹಿಸಿ ಮಾತನಾಡಿದ
ಜನಜಾಗೃತಿ ಸಂಘದ ಅಧ್ಯಕ್ಷರಾದ ಬಸವರಾಜ ಕೊರವರ, ಅಕಾಲಿಕ ಮಳೆಯಿಂದ ಹಾನಿ ಸಂಭವಿಸಿದ 24 ಗಂಟೆಗಳಲ್ಲಿ ಸಂತ್ರಸ್ತರಿಗೆ
ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯ ಮೂಲಕ ಪರಿಹಾರ ನೀಡಲು ಅವಕಾಶವಿದೆ.

ಆದರೆ ಅಧಿಕಾರಿಗಳು ಸಕಾಲಕ್ಕೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸದೆ ಇರುವುದರಿಂದ ಅನೇಕರು ಮನ ಕಳೆದುಕೊಂಡು ಬೀದಿಪಾಲಾದರೂ ಅವರು ಮನೆಯಲ್ಲಿ ವಾಸವಿಲ್ಲ. ಶೇಕಡ 15 ಕುಸಿತ ವಾಗಿದೆ ಎಂದು ವರದಿ ನೀಡಿ ಅಧಿಕಾರಿಗಳು ಕೈಚೆಲ್ಲಿದ್ದಾರೆ.

ಹೀಗಾಗಿ ಆ ಅನುದಾನ
ಸದ್ಬಳಕೆ ಆಗದೆ ನೂರಾರು ಬಡ ಹಾಗೂ ಶೋಷಿತ ಜನರಿಗೆ ಅನ್ಯಾಯ ಆಗಿದೆ ಎಂದು ಆರೋಪಿಸಿದರು.

ಇದರ ವಿರುದ್ಧ ನವೆಂಬರ್ 7 ರಂದು ಧಾರವಾಡ ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್‌ ಹೋರಾಟ ನಡೆಸುವ ಮೂಲಕ ತಪ್ಪಿತಸ್ಥ ಅಧಿಕಾರಿಗಳ ವಿರುದ್ದ ಕ್ರಮಕ್ಕೆ ಆಗ್ರಹ ಹಾಗೂ ಬಡಜನರಿಗೆ ಯಾವುದೇ ರೀತಿಯ ತಾರತಮ್ಯ ಮಾಡದೆ ಶೀಘ್ರವಾಗಿ ಪರಿಹಾರ, ಮನೆ ನಿರ್ಮಾಣದ ಧನ ಸಹಾಯ ನೀಡಬೇಕು ಮತ್ತು ಮತ್ತೊಂದು ಬಾರಿ ಸರ್ವೆ ನಡೆಸಬೇಕು ಎಂದು ಆಗ್ರಹಿಸಿದರು.

ಇದೇ ವೇಳೆ ಮಾತನಾಡಿದ ಜನಜಾಗೃತಿ ಸಂಘದ ಉಪಾಧ್ಯಕ್ಷರಾದ ನಾಗರಾಜ ಕಿರಣಗಿ, ಆಡಳಿತ ವಿಕೇಂದ್ರೀಕರಣ ಉದ್ದೇಶದಿಂದ ಗ್ರಾಮಪಂಚಾಯತ್ ವ್ಯವಸ್ಥೆ ಜಾರಿಗೆ ತರಲಾಗಿದೆ.

ಆದರೆ, ಕೆಳಹಂತದ ಅಧಿಕಾರಿಗಳ ದುರಾಸೆ, ದುರಾಡಳಿತದಿಂದ ಸಂತ್ರಸ್ತರಿಗೆ ನೆರವು ಹಾಗೂ ಪರಿಹಾರ ಮರಿಚಿಕೆ ಆಗಿದೆ. ಜನಪ್ರತಿನಿಧಿಗಳ ಬೇಜವಾಬ್ದಾರಿಯಿಂದ ಬಡವರ ಪಾಲಾಗಬೇಕಾದ ಯೋಜನೆ ಉಳ್ಳವರ, ಪ್ರಬಲರಿಗೆ ಸಿಗುತ್ತಿವೆ.

ಧ್ವನಿ ಇಲ್ಲದವರು ಕಚೇರಿ ಅಲೆದಾಡಿ ಹೋರಾಟ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿರುವುದು ಬೇಸರದ ಸಂಗತಿ ಎಂದರು.

ಈ ಬಗ್ಗೆ ಜಿಲ್ಲಾಡಳಿತದ ಗಮನ ಸೆಳೆದು ಅನ್ಯಾಯ ಸರಿಪಡಿಸಲು ಮನವಿ ಮಾಡಲಾಯಿತು.

ನಾಲ್ಕು ಗಂಟೆಗಳ ಕಾಲ ಹೋರಾಟ ನಡೆಸಿದರೂ ಗ್ರಾಪಂ ಅಭಿವೃದ್ಧಿ ಅಧಿಕಾರಿ, ಅಧ್ಯಕ್ಷರು, ಸದಸ್ಯರು ಆಗಮಿಸದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ, ಜಿಪಂ ಕಾರ್ಯನಿರ್ವಾಹಕ ಅಧಿಕಾರಿ, ತಹಶೀಲ್ದಾರರ ಗಮನ ಸೆಳೆಯಲಾಯಿತು.

ಆಗ ಸ್ಥಳಕ್ಕೆ ಆಗಮಿಸಿದ ತಲಾಟಿ ಆನಿಕಿವಿಯನ್ನು ಗ್ರಾಮಸ್ಥರು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

ಅಲ್ಲದೆ, ಕೆರೆ ಹಾನಿಯಿಂದ ಹೆಬ್ಬಳ್ಳಿ ಗ್ರಾಮದ
ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ವರ್ಗದ 7 ಜನರ ಮನೆ ಹಾನಿಯಾದರೂ ಕೇವಲ ಇಬ್ಬರಿಗೆ ಮಾತ್ರ ಪರಿಹಾರ ನೀಡಲಾಗಿದೆ. ಅಲ್ಲದೆ, ಇನ್ನುಳಿದ ಕುಟುಂಬದ ಸದಸ್ಯರಿಗೆ ಈವರೆಗೆ ಪರಿಹಾರ ನೀಡಿಲ್ಲ.

ಉಮೇಶ ಮಠಪತಿ, ಬಸಪ್ಪ ಆಯಟ್ಟಿ ಸೇರಿದಂತೆ ಅನೇಕರಿಗೆ
ಪರಿಹಾರ ವಿತರಣೆ ತಾರತಮ್ಯ, ಫಲಾನುಭವಿಗಳ ಪಟ್ಟಿಯಲ್ಲಿನ ಲೋಪದೋಷದ ಕುರಿತು ಮಾಹಿತಿ ಕೇಳಿದರೆ, ಉತ್ತರಿಸಲು ತಡವರಿಸಿ ಕಕ್ಕಾಬಿಕ್ಕಿಯಾದರು.

ಆಗ ಅಮ್ಮಿನಬಾಯಿ ನಾಡಕಚೇರಿ ಉಪತಹಸೀಲ್ದಾರ ಮಂಗಳಗಟ್ಟಿ ದೂರನ್ನು ಕುಲೂಂಕುಶವಾಗಿ ಆಲಿಸಿ ಮೇಲಾಧಿಕಾರಿಗಳ‌ ಗಮನ ಸೆಳೆಯುವುದಾಗಿ ಹೇಳಿದರು.

ಹೋರಾಟದಲ್ಲಿ ಪಾಲ್ಗೊಂಡ ಅನೇಕ ಗ್ರಾಮಸ್ಥರು ತಮಗಾದ ಅನ್ಯಾಯದ ವಿರುದ್ಧ ಕಿಡಿಕಾರಿ, ಆಕ್ರೋಶ ಹೊರ ಹಾಕಿದರು.

ಈ ಪ್ರತಿಭಟನೆಯಲ್ಲಿ ದಲಿತ ಸಂಘರ್ಷ ಸಮಿತಿಯ ನಿಂಗಪ್ಪ ಅಳಗವಾಡಿ, ರೈತ ಸಂಘದ ರವಿರಾಜ ಕಂಬಳಿ ಸೇರಿದಂತೆ ಅನೇಕ ಗುರು ಹಿರಿಯರು ಪಾಲ್ಗೊಂಡಿದ್ದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *