ರಾಜ್ಯ

ಹುಬ್ಬಳ್ಳಿ-ಧಾರವಾಡ ಅವಳಿನಗರದ ವಿವಿಧ ವಿದ್ಯಾರ್ಥಿನಿಲಯಗಳಲ್ಲಿ 137 ಕೋವಿಡ್ ….!

ಧಾರವಾಡ prajakiran.com : ಹುಬ್ಬಳ್ಳಿ ಧಾರವಾಡ ಅವಳಿ ನಗರದ ವಿವಿಧ ವಿದ್ಯಾರ್ಥಿ ವಸತಿನಿಲಯಗಳಲ್ಲಿ ಏಪ್ರಿಲ್ ತಿಂಗಳಲ್ಲಿ ಏ.20)l ವರೆಗೆ ಒಟ್ಟು 137 ಕೋವಿಡ್ ಪ್ರಕರಣಗಳು ವರದಿಯಾಗಿವೆ ಎಂದು‌ ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ.

ಧಾರವಾಡ ಕ್ಲಾಸಿಕ್ ಕೋಚಿಂಗ್ ಕೇಂದ್ರದ ಮಲಪ್ರಭಾ ಹಾಸ್ಟೆಲ್ -4, ಕವಿವಿಯ ನ್ಯೂ ಪಿಜಿ ಬಾಯ್ಸ್ ಹಾಸ್ಟೆಲ್ -1, ರಾಣಿ ಚನ್ನಮ್ಮ ವಿದ್ಯಾರ್ಥಿನಿಯರ ಹಾಸ್ಟೆಲ್-2 ಹಾಗೂ ಕರ್ನಾಟಕ ಕಾಲೇಜಿನ ಉದಯ ಹಾಸ್ಟೆಲ್ -1, ಕೃಷ್ಣಾ ಹಾಸ್ಟೆಲ್ -1 ಮತ್ತು ಇಲ್ಲಿವರೆಗೆ ಎಸ್.ಡಿ.ಎಮ್. ಇಂಜನಿಯರಿಂಗ್ ಕಾಲೇಜ – 53 ಗೌರಿಶಂಕರ ವಿದ್ಯಾರ್ಥಿ ವಸತಿನಿಲಯದಲ್ಲಿ 46 ಹಾಗೂ
ಹುಬ್ಬಳ್ಳಿಯ ಕೆಎಲ್ಇ ಪ್ರೇರಣಾ ಕಾಲೇಜ -2, ಬಿವ್ಹಿಬಿ ಸರಸ್ವತಿ ಹಾಸ್ಟೆಲ್ -1 ಮತ್ತು ಇಲ್ಲಿವರೆಗೆ ಬಿ.ವ್ಹಿಬಿ. ಸಹ್ಯಾದ್ರಿ ಬಾಯ್ಸ್ ಹಾಸ್ಟೆಲ್ – 25 ಸೇರಿದಂತೆ ಒಟ್ಟು 137 ಕೋವಿಡ್ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ.

ಕೋವಿಡ್ ಪಾಸಿಟಿವ್ ಹೊಂದಿರುವ ಎಲ್ಲರಿಗೂ ಸೂಕ್ತ ಚಿಕಿತ್ಸೆ, ಔಷಧಿ ನೀಡಲಾಗಿದ್ದು, ಅವರ ಆರೋಗ್ಯದ ಮೇಲೆ ವೈದ್ಯರು ನಿಗಾವಹಿಸಿದ್ದಾರೆ.

ಸಾರ್ವಜನಿಕರು ತಪ್ಪದೆ ಮಾಸ್ಕ್ ಧರಿಸಿ ಸಂಚರಿಸಬೇಕು ಮತ್ತು ಎಲ್ಲರೂ ಪರಸ್ಪರ ಸಾಮಾಜಿಕ ಅಂತರ ಕಾಪಾಡಿ, ಕೋವಿಡ್ ನಿಯಂತ್ರಿಸಲು ಸಹಕರಿಸಬೇಕೆಂದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *