ಹೈದರಾಬಾದ್ prajakiran.com : ಭಾರತ್ ಬಯೋಟೆಕ್ ಸಂಸ್ಥೆ ಅಭಿವೃದ್ಧಿಪಡಿಸಿರುವ ಕೋವ್ಯಾಕ್ಸಿನ್ ಲಸಿಕೆಯು ಶೇ.77.8 ರಷ್ಟು ಪರಿಣಾಮಕಾರಿಯಾಗಿದೆ ಎಂದು ಮೂರನೇ ಹಂತದ ವೈದ್ಯಕೀಯ ಪರೀಕ್ಷೆಯಿಂದ ತಿಳಿದುಬಂದಿದೆ.
ಈ ಕುರಿತು ಸಾಮಾಜಿಕ ಮಾದ್ಯಮವಾದ ಟ್ವಿಟರ್ನಲ್ಲಿ ಟ್ವಿಟ್ ಮಾಡುವ ಮೂಲಕ ಸಂಸ್ಥೆ ಮಾಹಿತಿ ಹಂಚಿಕೊಂಡಿದ್ದು, ಕೋವ್ಯಾಕ್ಸಿನ್ ಕೊರೋನಾ ಲಸಿಕೆ ಸುರಕ್ಷಿತವಾಗಿದೆ ಎಂದು ಸಾಬೀತಾಗಿದೆ.
ಭಾರತದಲ್ಲಿ ನಡೆಸಿದ ಸುದೀರ್ಘ ವೈದ್ಯಕೀಯ ಪರೀಕ್ಷೆಯಲ್ಲಿ ಕೋವ್ಯಾಕ್ಸಿನ್ ಯಶಸ್ಸ ಎಂದು ತಿಳಿಸಿದೆ.
ಸೋಂಕಿನ ಲಕ್ಷಣಗಳಿರುವವರಿಗೆ ಕೋವ್ಯಾಕ್ಸಿನ್ ಶೇ. 77.8ರಷ್ಟು ಪರಿಣಾಮಕಾರಿಯಾಗಿದೆ.
ತೀವ್ರ ಸೋಂಕಿನ ಲಕ್ಷಣಗಳನ್ನು ಹೊಂದಿರುವವರ ವಿರುದ್ಧ ಶೇ.93.4ರಷ್ಟು ಪರಿಣಾಮಕಾರಿಯಗಿದೆ ಎಂದು ಹೇಳಿದೆ.
ಗರ್ಭಿಣಿಯರು ಕೂಡ ಕೊರೋನಾ ವ್ಯಾಕ್ಸಿನ್ ಪಡೆದುಕೊಳ್ಳಲು ಅರ್ಹರು ಎಂದು ಕೇಂದ್ರ ಆರೋಗ್ಯ ಮತ್ತು ಮಹಿಳಾ ಕಲ್ಯಾಣ ಇಲಾಖೆ ತಿಳಿಸಿದೆ.