ಅಂತಾರಾಷ್ಟ್ರೀಯ

ಧಾರವಾಡ ಸೇರಿ ಕರ್ನಾಟಕದ ಎಂಟು ಜಿಲ್ಲೆಗಳು ಕರೋನಾ ಎರಡನೇ ಅಲೆಯಲ್ಲಿ ಡೇಂಜರ್ ಝೋನ್

ನವದೆಹಲಿ prajakiran.com : ಕರ್ನಾಟಕದ ಎಂಟು ಜಿಲ್ಲೆಗಳು ಕರೋನಾ ಎರಡನೇ ಅಲೆಯಲ್ಲಿ ಡೇಂಜರ್ ಝೋನ್ ನಲ್ಲಿವೆ.
ಕೇಂದ್ರ ಸರ್ಕಾರದ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ರಿಪೋರ್ಟ ನಲ್ಲಿ ಈ ಜಿಲ್ಲೆಗಳಿವೆ.

ನಿನ್ನೇಯಷ್ಟೇ ಪ್ರಧಾನಿ ನರೇಂದ್ರ ಮೋದಿಯವರು ಕರ್ನಾಟಕದಲ್ಲಿನ ಮೂರು ಜಿಲ್ಲೆಯನ್ನು ಹೈ ರಿಸ್ಕ್ ಎಂದು ಘೋಷಣೆ ಮಾಡಿದ್ದರು.

ಅದರ ಬೆನ್ನಲ್ಲೇ , ಕೇಂದ್ರ ಆರೋಗ್ಯ ಇಲಾಖೆ ಇನ್ನೊಂದು ರಿಪೋರ್ಟ್ ಬಿಡುಗಡೆ ಮಾಡಿದೆ.
ಕೇಂದ್ರ ಆರೋಗ್ಯ ಇಲಾಖೆ ಕಾರ್ಯದರ್ಶಿ ರಾಜೇಶ್‌ ಭೂಷಣ್‌ ನೇತೃತ್ವದ ತಂಡ ಈ ರಿಪೋಟ್ ಬಿಡುಗಡೆ ಮಾಡಿದೆ.

ಕೇಂದ್ರ ಸರ್ಕಾರದ ಆರೋಗ್ಯ ಇಲಾಖೆ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ್ದು, ಕೆಳಗೆ ಕೊಟ್ಟಿರುವ ರಾಜ್ಯದ ಎಂಟು
ಜಿಲ್ಲೆಗಳು ಹೈ ರಿಸ್ಕ್ ನಲ್ಲಿವೆ.

ಬೀದರ್ – 200% ಏರಿಕೆ
ಕಲಬುರಗಿ – 136%
ಧಾರವಾಡ – 100%
ದಕ್ಷಿಣ ಕನ್ನಡ -82%
ಬಳ್ಳಾರಿ – 63%
ಬೆಳಗಾವಿ – 57%
ಮೈಸೂರು – 40%
ಬೆಂಗಳೂರು ನಗರ – 25%

ಗಡಿ ಜಿಲ್ಲೆ ಬೀದರ್ ಗೆ ಶಾಕ್  : 

ಕೇಂದ್ರ ಸರ್ಕಾರವೇ ಗುರುತಿಸಿದಂತೆ ಕರೋನಾ ಹೈ ರಿಸ್ಕ್ ಜಿಲ್ಲೆಗಳಲ್ಲಿ ಬೀದರ್ ಜಿಲ್ಲೆ ಪ್ರಥಮ ಸ್ಥಾನ ಪಡೆದಿದೆ‌.

ಕಳೆದ ಮೂರು ದಿನದಲ್ಲಿ 100 ಕ್ಕೂ ಹೆಚ್ಚು ಕೇಸ್ ಗಳು ಪತ್ತೆಯಾಗಿದ್ದು, ನಿನ್ನೆ ಒಂದೇ ದಿನ 47 ಕರೋನಾ ಕೇಸ್ ಗಳು ಪತ್ತೆಯಾಗುವ ಮ‌ೂಲಕ ಜಿಲ್ಲೆಯಲ್ಲಿ ಕರೋನಾ ಸಂಖ್ಯೆ ಗಣನೀಯವಾಗಿ ಏರಿಕೆ ಕಂಡಿದೆ.

ಇನ್ನು ಈ ಭಾಗದಲ್ಲಿ ಜಿಲ್ಲಾಡಳಿತ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದ್ದು, ಇಂದು ಬಹುತೇಕ ನಿಯಮಗಳ ಬಗ್ಗೆ ಜಿಲ್ಲಾಧಿಕಾರಿ ಮಾರ್ಗಸೂಚಿ ಬಿಡುಗಡೆ ಮಾಡಬಹುದು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *