ರಾಜ್ಯ

ಧಾರವಾಡದಲ್ಲಿ ಮತ್ತೆ ಕರೊನಾ ಸ್ಪೋಟ : ಒಂದೇ ದಿನ 35 ಜನರಿಗೆ ಸೋಂಕು





ಧಾರವಾಡ Prajakiran.com : ವಿದ್ಯಾನಗರಿ ಧಾರವಾಡದಲ್ಲಿ ಮತ್ತೆ ಕರೊನಾ ಸ್ಪೋಟಗೊಂಡಿದೆ.

ಒಂದೇ ದಿನ ಬರೋಬ್ಬರಿ 35 ಜನರಿಗೆ ಸೋಂಕು ದೃಢವಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.




ಮೂವರು ಮಕ್ಕಳು ಸೇರಿ 35 ಜನರಿಗೆ ಪಾಸಿಟಿವ್ ಬಂದಿದೆ.
ಸೋಂಕಿತರ ಸಂಪರ್ಕದಿಂದಲೇ 16 ಜನರಿಗೆ ಸೋಂಕು ಹರಡಿದೆ.

10 ಜನರಿಗೆ ಐಎಲ್‌ಐ ಸಮಸ್ಯೆ ಹಿನ್ನೆಲೆಯಲ್ಲಿ ಕೋವಿಡ್ ತಪಾಸಣೆ ನಡೆಸಿದಾಗ ಕರೋನಾ ಇರುವ ಆತಂಕಕಾರಿ ಸಂಗತಿ ಹೊರಬಿದ್ದಿದೆ.




ಉಸಿರಾಟದ ಸಮಸ್ಯೆಯಿಂದ ಇಬ್ಬರಿಗೆ ಸಮಸ್ಯೆಯಿತ್ತು.
ಪರೀಕ್ಷಿಸಿದಾಗ ಸೋಂಕು ದೃಢವಾಗಿದೆ.

ಇದೇವೇಳೆ ಕಳವಳಕಾರಿ ಸಂಗತಿಯೆಂದರೆ 7 ಸೋಂಕಿತರಿಗೆ ಇದು ಹೇಗೆ ಹರಡಿದೆ ಎಂಬ ಸಂಪರ್ಕ ಪತ್ತೆಯಾಗಿಲ್ಲ.

ಆ ಮೂಲಕ ಧಾರವಾಡ ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 380ಕ್ಕೇರಿದಂತಾಗಿದೆ. ಇದು ಜಿಲ್ಲೆಯ ಜನರಿಗೆ ಆತಂಕ ತಂದಿದೆ.



PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *