ನಿನ್ನೇ ಒಂದೇ ದಿನ 142 ಪ್ರಕರಣ ಪತ್ತೆಯಾಗಿದ್ದವು
ಒಟ್ಟು ಸೋಂಕಿತರ ಸಂಖ್ಯೆ 575ಕ್ಕೆ ಏರಿಕೆ
ಧಾರವಾಡ prajakiran.com : ಧಾರವಾಡ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕರೋನಾ ಹಾವಳಿ ಹೆಚ್ಚುತ್ತಲೇ ಇದೆ.
ನಿನ್ನೇ ಒಂದೇ ದಿನ ಬರೋಬ್ಬರಿ 142 ಪ್ರಕರಣಗಳು ಪತ್ತೆಯಾಗಿದ್ದರೆ, ಇಂದು ಮಂಗಳವಾರ ಮತ್ತೆ ಒಂದೇ ದಿನ 175 ಪ್ರಕರಣ ಪತ್ತೆಯಾಗುವ ಮೂಲಕ
ಒಟ್ಟು ಸೋಂಕಿತರ ಸಂಖ್ಯೆ 575ಕ್ಕೆ ಏರಿಕೆಯಾಗಿದೆ.
ಧಾರವಾಡ ತಾಲೂಕಿನ ಹಲವು ಶಿಕ್ಷಕರು ಹಾಗೂ ಮಕ್ಕಳಿಗೆ ಕರೋನಾ ದೃಢಪಟ್ಟಿದೆ.
ಇದರಿಂದಾಗಿ ಮಕ್ಕಳಿಗೆ ಶಾಲೆಗೆ ಕಳುಹಿಸಬೇಕೋ ಬೇಡವೋ ಎಂಬ ಆತಂಕ ಪೋಷಕರದ್ದಾದರೆ,
ಶಾಲೆಗಳನ್ನು ನಡೆಸಬೇಕೋ ಬೇಡವೋ ಎಂಬ ಚಿಂತನೆ ಶಿಕ್ಷಣ ಇಲಾಖೆಗೆ ಎದುರಾಗಿದೆ.
ಒಟ್ಟಾರೆ ಧಾರವಾಡ ಜಿಲ್ಲೆಯ ಕರೋನಾ ಆತಂಕ ಎಲ್ಲರನ್ನು ದಿನದಿಂದ ದಿನಕ್ಕೆ ತಲ್ಲಣ
ಮೂಡಿಸುತ್ತಿದೆ.