ಜಿಲ್ಲೆ

ಧಾರವಾಡ ಜಿಲ್ಲೆಯಲ್ಲಿ ಇಂದಿನಿಂದ 18ರಿಂದ  44 ವರ್ಷದೊಳಿಗನವರಿಗೆ ಕೋವಿಶಿಲ್ಡ್ ಲಸಿಕಾರಣ

ಧಾರವಾಡ prajakiran.com : ಜಿಲ್ಲೆಯಲ್ಲಿ ಮೇ.10ರಿಂದ 18 ವರ್ಷ ಮೇಲ್ಪಟ್ಟ ಹಾಗೂ 44 ವರ್ಷದೊಳಗಿನವರಿಗೆ ಕೋವಿಶಿಲ್ಡ್ ಲಸಿಕೆ ಹಾಕಲಾಗುತ್ತದೆ.

ಆಸಕ್ತ ಫಲಾನುಭವಿಗಳು ಆರೋಗ್ಯ ಸೇತುಆ್ಯಪ್ ದಲ್ಲಿ ನೋಂದಣಿ ಮಾಡಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು,‌ ರಾಜ್ಯ ಸರಕಾರವು ನಾಳೆಯಿಂದ ಕೋವಿಶಿಲ್ಡ್ ಲಸಿಕೆಯನ್ನು 18 ವರ್ಷ ಮೇಲ್ಪಟ್ಟ ಮತ್ತು 44 ವರ್ಷದೊಳಗಿನ ಫಲಾನುಭವಿಗಳಿಗೆ ನೀಡಲು ಆದೇಶಿಸಿದೆ.

ಸರಕಾರದ ಆದೇಶದಂತೆ ಧಾರವಾಡ ಜಿಲ್ಲಾಡಳಿತದಿಂದ, ಧಾರವಾಡ ಜಿಲ್ಲಾ ಆಸ್ಪತ್ರೆ, ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ ಹಾಗೂ ಕಲಘಟಗಿ, ಕುಂದಗೋಳ ಮತ್ತು ನವಲಗುಂದ ತಾಲೂಕಾ ಆಸ್ಪತ್ರೆಗಳಲ್ಲಿ ‌ಲಸಿಕೆ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ‌.

ಪ್ರತಿ ಲಸಿಕಾ ಕೇಂದ್ರದಲ್ಲಿ ಪ್ರತಿ ದಿನ 150 ಜನ ಫಲಾನುಭವಿಗಳಿಗೆ ಲಸಿಕೆ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.

18 ವರ್ಷ ಮೇಲ್ಪಟ್ಟ ಹಾಗೂ 44 ವರ್ಷದೊಳಗಿನ ಫಲಾನುಭವಿಗಳಿಗೆ ಲಸಿಕಾರಣಕ್ಕೆ ನಾಳೆ ಮಧ್ಯಾಹ್ನ 3 ಗಂಟೆಗೆ ಧಾರವಾಡ ಜಿಲ್ಲಾಆಸ್ಪತ್ರೆ ಹಾಗೂ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗಳಲ್ಲಿ ಚಾಲನೆ‌ ನೀಡಲಾಗುವುದು.

ಮತ್ತು ಕಲಘಟಗಿ,ಕುಂದಗೋಳ ನವಲಗುಂದ ತಾಲೂಕಾ ಆಸ್ಪತ್ರೆಗಳಲ್ಲಿ ಮೇ. 11 ರ ಮಂಗಳವಾರದಿಂದ ನೋಂದಾಯಿತ ಪಲಾನುಭವಿಗಳಿಗೆ ಲಸಿಕಾರಣ ಆರಂಭಿಸಲಾಗುವುದೆಂದು ಅವರು ತಿಳಿಸಿದ್ದಾರೆ.

ಅರ್ಹ ಫಲಾನುಭವಿಗಳು ಆರೋಗ್ಯಸೇತು ಆ್ಯಪ್ ದಲ್ಲಿ ನೋಂದಣಿ ಮಾಡಿಕೊಳ್ಳಬೇಕು.

ಮೊಬೈಲ್ ಬಳಸಿ, ಆನ್ ಲೈನ್ ಮೂಲಕ ಆರೋಗ್ಯ ಸೇತು ಆ್ಯಪ್ ದಲ್ಲಿ ನೋಂದಣಿ ಮಾಡಿಕೊಂಡ ಫಲಾನುಭವಿಗಳಿಗೆ ಮಾತ್ರ ಲಸಿಕೆ ನೀಡಲಾಗುತ್ತದೆ. ಆಸ್ಪತ್ರೆಗಳಲ್ಲಿ
ಸ್ಪಾಟ್ ರಜಿಸ್ಟ್ರೇಶನ್ ಇರುವದಿಲ್ಲ.

ಆದ್ದರಿಂದ ನೋಂದಾಯಿತ ಫಲಾನುಭವಿಗಳು ಲಸಿಕಾಕರಣಕ್ಕೆ‌ ನಿಗದಿಗೊಳಿಸಿರುವ ಆಸ್ಪತ್ರೆಗಳಿಗೆ ತೆರಳಿ, ಲಸಿಕೆಯನ್ನು ಪಡೆದುಕೋಳ್ಳಬಹುದು ಎಂದು‌ ಅವರು ತಿಳಿಸಿದ್ದಾರೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *