ರಾಜ್ಯ

ನಾಲ್ಕು ದಿನಗಳಲ್ಲಿ ಧಾರವಾಡ ಜಿಲ್ಲೆಯ ಆರು, ಹಾವೇರಿಯ ಒಬ್ಬರು ಸಾವು 





ಧಾರವಾಡ prajakiran.com : ಕೋವಿಡ್ ಪಾಸಿಟಿವ್ ಹೊಂದಿದ್ದ ಧಾರವಾಡ ಜಿಲ್ಲೆಯ ಆರು ಜನ ಹಾಗೂ ನೆರೆಯ ಹಾವೇರಿ ಜಿಲ್ಲೆಯ ಒಬ್ಬ ವ್ಯಕ್ತಿ ಸೇರಿ ಒಟ್ಟು ಏಳು ಜನ ಕಳೆದ ನಾಲ್ಕು ದಿನಗಳ ಅವಧಿಯಲ್ಲಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ತಿಳಿಸಿದೆ.

ಸೋಂಕಿತರನ್ನು ಪಿ -18716 ( 55 , ಪುರುಷ ) ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಮಾದಾಪುರ ಗ್ರಾಮದವರು ಎಂದು ಗುರುತಿಸಲಾಗಿದೆ. ಅವರು ತೀವ್ರ ಉಸಿರಾಟದ ತೊಂದರೆಯಿಂದ ಜುಲೈ 2 ರಂದು ದಾಖಲಾಗಿದ್ದರು. ಜುಲೈ 8 ರಂದು ಮೃತಪಟ್ಟಿದ್ದಾರೆ.

ಪಿ-23232 ( 88 , ಪುರುಷ) ಹುಬ್ಬಳ್ಳಿ ಗಿರಣಿಚಾಳ ನಿವಾಸಿ. ತೀವ್ರ ಉಸಿರಾಟದ ತೊಂದರೆಯಿಂದ ಜುಲೈ 1 ರಂದು ಚಿಕಿತ್ಸೆಗೆ ದಾಖಲಾಗಿದ್ದರು. ಜುಲೈ 3 ರಂದು ಮೃತಪಟ್ಟಿದ್ದಾರೆ. ಮರಣೋತ್ತರವಾಗಿ ಕೋವಿಡ್ ದೃಢಪಟ್ಟಿದೆ.



ಪಿ-24839 ( 65, ಪುರುಷ) ಹುಬ್ಬಳ್ಳಿ ಸೋನಿಯಾಗಾಂಧಿ ನಗರ ನಿವಾಸಿ. ನೆಗಡಿ, ಕೆಮ್ಮು, ಜ್ವರದಿಂದ ಜುಲೈ 7 ರಂದು ಚಿಕಿತ್ಸೆಗೆ ದಾಖಲಾಗಿದ್ದರು. ಜುಲೈ 8 ರಂದು ಮೃತಪಟ್ಟಿದ್ದಾರೆ.

ಪಿ-25532 ( 67, ಪುರುಷ) ಹಳೆಹುಬ್ಬಳ್ಳಿ ಬಾಣತಿಕಟ್ಟಾ ನಿವಾಸಿ.ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ಜುಲೈ 4 ರಂದು ದಾಖಲಾಗಿ, ಜು 8 ರಂದು ಮರಣ ಹೊಂದಿದರು.

ಪಿ-28410 (78, ಮಹಿಳೆ) ಹುಬ್ಬಳ್ಳಿಯ ಕಮರಿಪೇಟ ಮುಲ್ಲಾ ಓಣಿ ನಿವಾಸಿ. ನೆಗಡಿ, ಕೆಮ್ಮು, ಜ್ವರದಿಂದ ಜುಲೈ 6 ರಂದು ಚಿಕಿತ್ಸೆಗೆ ದಾಖಲಾಗಿದ್ದರು.ಅವರು ಕೂಡ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.



ಪಿ-30725 ( 54, ಪುರುಷ) ಹುಬ್ಬಳ್ಳಿ ಬೀರಬಂದ್ ಓಣಿ ನಿವಾಸಿ.ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು.ಜುಲೈ 6 ರಂದು ಚಿಕಿತ್ಸೆಗೆ ದಾಖಲಾಗಿ ಗುರುವಾರ ಜು.9 ರಂದು ಮೃತಪಟ್ಟರು.

ಪಿ-30726( 85, ಪುರುಷ) ಹುಬ್ಬಳ್ಳಿಯ  ಸಿದ್ಧಗಂಗಾ ಕಾಲನಿ ನಿವಾಸಿ. ಕೆಮ್ಮು,ಜ್ವರದ ಚಿಕಿತ್ಸೆಗೆ ಜುಲೈ 5 ರಂದು ರೇಲ್ವೆ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಿಸದೆ ಮರಣ ಹೊಂದಿದರು.

ಮೃತರ ಎಲ್ಲಾ ಪಾರ್ಥಿವ ಶರೀರಗಳನ್ನ ನಿಯಮಾನುಸಾರ ಪ್ಯಾಕಿಂಗ್ ಮಾಡಿ, ಅಂತ್ಯಕ್ರಿಯೆ ನೆರವೇರಿಸಲಾಗಿದೆ ಎಂದು ಆರೋಗ್ಯ ಇಲಾಖೆ ವಿವರಿಸಿದೆ.




PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *