ಜಿಲ್ಲೆ

ಕೊರೊನಾ ಸುರಕ್ಷತೆ : ಜಿಲ್ಲಾಡಳಿತದಿಂದ ಉಚಿತ ದೂರವಾಣಿ ಸಮಾಲೋಚನೆ  

ಧಾರವಾಡ prajakiran.com : ಕೊರೊನಾ ಸುರಕ್ಷತೆ ಹಾಗೂ ಆರೋಗ್ಯ ಸಮಸ್ಯೆಗಳ ಕುರಿತು ನಾಗರಿಕರಿಗೆ ಉಚಿತ ಸಮಾಲೋಚನೆ ಸೌಲಭ್ಯ ಕಲ್ಪಿಸಿದೆ. ಸಲಹೆ ನೀಡಲು ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ಹಾಗೂ ಸರ್ಕಾರೇತರ ಸಂಸ್ಥೆಗಳು ಮತ್ತು ರಾಜ್ಯ, ಹೊರರಾಜ್ಯ ಹಾಗೂ ವಿದೇಶಗಳಲ್ಲಿರುವ ಆಸಕ್ತ ವೈದ್ಯರ ಸಹಯೋಗದಲ್ಲಿ ಆಶ್ರಯದಲ್ಲಿ, ವೈದ್ಯರೊಂದಿಗೆ ಚರ್ಚಿಸಿ ಸಲಹೆ ಪಡೆಯಲು ದೂರವಾಣಿ ಮೂಲಕ ಉಚಿತ ಸಮಾಲೋಚನೆ ನಡೆಸಬಹುದು. ಈ ಸೌಲಭ್ಯವನ್ನು ನಾಗರಿಕರು https://i-invent.org/ddclics ವೆಬ್ ವಿಳಾಸ ಮೂಲಕ ಪಡೆಯಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. Share on: WhatsApp

ರಾಜ್ಯ

ಕೋವಿಡ್ ಬಗ್ಗೆ ಅನಗತ್ಯ ಭಯ ಬೇಡ : ಆಪ್ತಮಿತ್ರ ಸಹಾವಾಣಿಗೆ ಕರೆ ಮಾಡಿ

ಧಾರವಾಡ prajakiran.com : ಲಕ್ಷಣ ರಹಿತ ಕೋವಿಡ್ ಸೋಂಕಿತರು ಮನೆಯಲ್ಲಿಯೇ ಪ್ರತ್ಯೇಕವಾಗಿದ್ದು, ಚಿಕಿತ್ಸೆ ಪಡೆಯಲು ಅವಕಾಶವಿದೆ. ಇಂತಹ ವ್ಯಕ್ತಿಯ ಕುಟುಂಬ ಸದಸ್ಯರುಗಳಿಗೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ,ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಲಹೆಗಳನ್ನು ಸಲಹೆ ನೀಡಿದೆ. ಕೋವಿಡ್ ಬಗ್ಗೆ ಅನಗತ್ಯವಾಗಿ ಯಾರೊಬ್ಬರು ಭಯಪಡಬಾರದು ಹಾಗೂ ಪ್ರತ್ಯೇಕಿತ ವ್ಯಕ್ತಿಯನ್ನು ಕಳಂಕಿತರಂತೆ  ಕಾಣಬಾರದು. ಪ್ರತ್ಯೇಕ್ಷವಾಗಿರುವ ವ್ಯಕ್ತಿಯು ಹರ್ಷಚಿತ್ತದಿಂದ ಸಂತೋಷವಾಗಿರುವಂತೆ ನೋಡಿಕೊಳ್ಳಿ ಹಾಗೂ ಅವರ  ಸ್ಥೈರ್ಯವನ್ನು ಹೆಚ್ಚಿಸಿ,  ವ್ಯಕ್ತಿಯು ಮನೆಯಲ್ಲಿ ಪ್ರತ್ಯೇಕವಾಗಿರುವುದನ್ನು ಖಚಿತ ಪಡಿಸಿಕೊಳ್ಳಿ. ಯಾವಾಗಲೂ 2 ಮೀಟರ್ ಅಂದರೆ 6 ಅಡಿ ಅಂತರವನ್ನು […]