ರಾಜ್ಯ

ರಾಜ್ಯದಲ್ಲಿ ಗುರುವಾರ ಸೋಂಕಿಗೆ ಬರೋಬ್ಬರಿ 83 ಸಾವು, 6128 ಪ್ರಕರಣ ಪತ್ತೆ

ಬೆಂಗಳೂರು prajakiran.com : ರಾಜ್ಯದಲ್ಲಿ ಗುರುವಾರವೂ ಮಹಾಮಾರಿ ಕರೋನಾ ಅಟ್ಟಹಾಸ ಮುಂದುವರೆದಿದ್ದು, ಇಂದು ಕೂಡ ವಿವಿಧ ಜಿಲ್ಲೆಗಳಲ್ಲಿ 83 ಜನ ಸಾವನ್ನಪ್ಪಿದ್ದಾರೆ. ಮತ್ತೆ ಹೊಸದಾಗಿ 6128 ಜನರಿಗೆ ಸೋಂಕು ಹರಡಿದ್ದರಿಂದ ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 1,18,632 ಕ್ಕೆ ಏರಿಕೆಯಾಗಿದೆ.  ಇಂದು ರಾಜ್ಯದಲ್ಲಿ 3793 ಜನ ಬಿಡುಗಡೆಗೊಂಡಿದ್ದು, ಈವರೆಗೆ ಒಟ್ಟು  46,694 ಜನ ಗುಣಮುಖರಾಗಿದ್ದು, 69,700 ಸಕ್ರಿಯ ಪ್ರಕರಣಗಳಿದ್ದು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 620 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋವಿಡ್ -19 ಸೋಂಕಿನಿಂದ ರಾಜ್ಯದಲ್ಲಿ […]

ಅಪರಾಧ

ದೇವಸ್ಥಾನದ ಘಂಟೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಅರ್ಚಕ

ಬೀದರ prajakiran.com : ದೇವಸ್ಥಾನದಲ್ಲಿನ ಘಂಟೆಗೆ ಪೂಜಾರಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೀದರ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಬಸವ ಕಲ್ಯಾಣದ ತಾಲೂಕಿನ ಮೋರಖಂಡಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ನಾಗರಾಜ ಸ್ವಾಮಿ (38) ಎಂಬಾತನೇ ಆತ್ಮಹತ್ಯೆ ಮಾಡಿಕೊಂಡವನಾಗಿದ್ದಾನೆ ಬೆಳಗ್ಗೆ ಮಂದಿರಕ್ಕೆ ಆಗಮಿಸಿದ ಈತ ದೇವಸ್ಥಾನದ ಘಂಟೆಗೆ ಹಗ್ಗದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಗ್ರಾಮದ ಸಿದ್ಧೇಶ್ವರ ದೇವಸ್ಥಾನದ ಪೂಜಾರಿಯಾಗಿದ್ದ ಈತನಿಗೆ, 7 ಎಕರೆ ಜಮೀನಿದ್ದು, ಪಿಕೆಪಿಎಸ್ ಹಾಗೂ ಕೃಷ್ಣಾ ಗ್ರಾಮೀಣ […]

ರಾಜ್ಯ

ಪ್ರಾಣಿ ಹಿಂಸೆಯಲ್ಲಿ ತೋಡಗಿದವರ ವಿರುದ್ಧ ಕಠಿಣ ಕ್ರಮ 

ಬೆಂಗಳೂರು Prajakiran.com : ರಾಜ್ಯದಲ್ಲಿ ಪ್ರಾಣಿ ಹಿಂಸೆಯಲ್ಲಿ ತೋಡಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ ತಿಳಿಸಿದರು. ಗುರುವಾರ ವಿಕಾಸ ಸೌಧ ಕೊಠಡಿ ಸಂಖ್ಯೆ ೩೧೮ ರಲ್ಲಿ ನಡೆದ ಕರ್ನಾಟಕ ರಾಜ್ಯ ಪ್ರಾಣಿ ಕಲ್ಯಾಣ ಮಂಡಳಿಯ ಪ್ರಥಮ ಸಭೆಯಲ್ಲಿ ಈ ಕುರಿತು ಗಂಭೀರವಾಗಿ ಚರ್ಚೆ ನಡೆಸಿದ ಬಳಿಕ ಈ ವಿಷಯ ಪ್ರಕಟಿಸಿದರು.  ಈ ಸಭೆಯಲ್ಲಿ ಪ್ರಾಣಿ ಕಲ್ಯಾಣ ಮಂಡಳಿಯ ಸದಸ್ಯರು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು […]