ಜಿಲ್ಲೆ

ಧಾರವಾಡ ಜಿಲ್ಲೆಯ 22304 ವಿದ್ಯಾರ್ಥಿಗಳು ಪಾಸ್‌

ಧಾರವಾಡ prajakiran.com : ಕೊರೊನಾ ಎರಡನೇ ಅಲೆ ಆರ್ಭಟದಿಂದಾಗಿ ಪಿಯುಸಿ ದ್ವಿತೀಯ ವರ್ಷದ ಪರೀಕ್ಷೆಗಳು ರದ್ದಾಗಿದ್ದವು.

ಆದರೆ, ಇದೀಗ ಎಲ್ಲಾ ವಿದ್ಯಾರ್ಥಿಗಳಿಗೆ ಸರ್ಕಾರ ಸಿಹಿ ಸುದ್ದಿ ನೀಡಿದೆ.

ರೆಗ್ಯುಲರ್ ವಿದ್ಯಾರ್ಥಿಗಳು ಸೇರಿದಂತೆ ರಿಪಿಟರ್ಸ್‌ ವಿದ್ಯಾರ್ಥಿಗಳ ಪಾಸ್ ಮಾಡಲಾಗಿದೆ.

ಧಾರವಾಡ ಜಿಲ್ಲೆಯ 22304 ವಿದ್ಯಾರ್ಥಿಗಳು ಪಾಸ್‌ ಆಗಿದ್ದು, ಇದರ ಜೊತೆಗೆ 3105 ರಿಪಿಟರ್ಸ್‌ಗಳಿಗೂ ಜಾಕ್‌ಪಾಟ್‌ ನೀಡಲಾಗಿದೆ. ಅಂದರೆ ರಿಪಿಟರ್ಸ್‌ಗಳನ್ನೂ ಪಾಸ್ ಮಾಡಲಾಗಿದೆ.

ಕಲಾ ವಿಭಾಗದಲ್ಲಿದ್ದ 6763, ವಾಣಿಜ್ಯ ವಿಭಾಗದಲ್ಲಿದ್ದ 8416 ಹಾಗೂ ವಿಜ್ಞಾನ ವಿಭಾಗದಲ್ಲಿದ್ದ 10230 ವಿದ್ಯಾರ್ಥಿಗಳನ್ನು ಪಾಸ್ ಮಾಡಲಾಗಿದೆ.

ಪ್ರಸಕ್ತ ವರ್ಷದ ಪಿಯುಸಿ ವಿದ್ಯಾರ್ಥಿಗಳ ಫಲಿತಾಂಶವನ್ನು ಅವರ ಮೂರು ವರ್ಷದ ಸಾಧನೆ ಮೇಲೆ ನಿರ್ಧರಿಸಲಾಗಿದೆ.

ಎಸ್ಸೆಸ್ಸೆಲ್ಸಿಗೆ ಸಂಬಂಧಿಸಿದಂತೆ ಶೇ.45 ರಷ್ಟು, ಪ್ರಥಮ ಪಿಯುಸಿಗೆ ಸಂಬಂಧಿಸಿದಂತೆ ಶೇ.45 ರಷ್ಟು ಹಾಗೂ ದ್ವಿತೀಯ ಪಿಯುಸಿ ವರ್ಷದಲ್ಲಿ ಶೇ.10 ರಷ್ಟು ಅವರ ಸಾಧನೆಯನ್ನು ಪರಿಗಣಿಸಿ ಈ ಫಲಿತಾಂಶ ಪ್ರಕಟ ಮಾಡಲಾಗಿದೆ.

ಯಾವ ವಿದ್ಯಾರ್ಥಿಗೆ ಈ ಫಲಿತಾಂಶ ತೃಪ್ತಿ ತಂದಿಲ್ಲವೋ ಅಂತಹ ವಿದ್ಯಾರ್ಥಿಗಳು ಆಗಸ್ಟ್ 19 ರಂದು ಖಾಸಗಿಯವರು ನಡೆಸುವ ಪಿಯುಸಿ ಪರೀಕ್ಷೆಗೆ ಹಾಜರಾಗಲೂ ಅವಕಾಶ ನೀಡಲಾಗಿದೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *