ರಾಜ್ಯ

ಪಿ ಎಸ್ ಐ ಅಕ್ರಮ ನೇಮಕಾತಿ : ಸಿಬಿಐ ತನಿಖೆಗೆ ವಹಿಸಲು ಒತ್ತಾಯಿಸಿ ಧಾರವಾಡದಲ್ಲಿ ಮಳೆಯಲ್ಲಿಯೇ ಒಂದೂವರೆ ಗಂಟೆಗೂ ಹೆಚ್ಚು ಕಾಲ ಬೃಹತ್ ಪ್ರತಿಭಟನೆ

ಜನಜಾಗೃತಿ ಸಂಘದ ಅಧ್ಯಕ್ಷರಾದ ಬಸವರಾಜ ಕೊರವರ ನೇತೃತ್ವ

ಜು. 31ರೊಳಗೆ ಮರು ಪರೀಕ್ಷೆ ದಿನಾಂಕ ಪ್ರಕಟಿಸಿ

ಎಫ್ ಡಿಎ ಹಗರಣದ ನೇಮಕಾತಿ ಅಕ್ರಮ ತನಿಖೆ ನಡೆಸಲಿ

ಪೊಲೀಸರ ನೇಮಕಾತಿ ವಯೋಮಿತಿ 33ಕ್ಕೆ ಹೆಚ್ಚಿಸಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯ

ಧಾರವಾಡ prajakiran. com : ಪಿ ಎಸ್ ಐ ಅಕ್ರಮ ನೇಮಕಾತಿ ಪ್ರಕರಣದ ಹಗರಣ ಬಗೆದಷ್ಟು ಆಳವಿದ್ದು, ಎಡಿಪಿಜಿಗಿಂತ ಉನ್ನತಮಟ್ಟದವರು ಶಾಮೀಲು ಸಾಧ್ಯತೆಯಿದ್ದು, ಇದನ್ನು ಕೂಡಲೇ ರಾಜ್ಯ ಸರ್ಕಾರ ಹಿಂದಿನ ಸಿದ್ದರಾಮಯ್ಯ ಅವಧಿ ಸೇರಿದಂತೆ 2016ರಿಂದ ಸಿಬಿಐ ತನಿಖೆಗೆ ವಹಿಸಲು ಒತ್ತಾಯಿಸಿ ಧಾರವಾಡದ ಜಿಲ್ಲಾಧಿಕಾರಿ ಕಚೇರಿ ಎದುರು ಜನಜಾಗೃತಿ ಸಂಘದ ಅಧ್ಯಕ್ಷರಾದ ಬಸವರಾಜ ಕೊರವರ ನೇತೃತ್ವದಲ್ಲಿ ಮಳೆಯನ್ನು ಲೆಕ್ಕಿಸದೆಯೇ ಒಂದೂವರೆ ಗಂಟೆಗೂ ಹೆಚ್ಚು ಕಾಲ ಬೃಹತ್ ಪ್ರತಿಭಟನೆ ನಡೆಸಿದರು.

ಜು. 31ರೊಳಗೆ 545 ಪಿಎಸ್ ಐ ಅಭ್ಯರ್ಥಿಗಳ ಮರು ಪರೀಕ್ಷೆ ದಿನಾಂಕ ಪ್ರಕಟಿಸಿ ಹಾಗೂ 420 ಹೊಸ ಅಭ್ಯರ್ಥಿಗಳ ಪರೀಕ್ಷೆ ನಡೆಸಬೇಕು ಎಂದು ಆಗ್ರಹಿಸಿದರು.

ಇದಲ್ಲದೆ, ಎಫ್ ಡಿಎ ನೇಮಕಾತಿಯಲ್ಲಿ ಅಕ್ರಮ ನಡೆದಿರುವ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಅದನ್ನು ತನಿಖೆಗೆ ಒಳಪಡಿಸಬೇಕು ಎಂದು ನೋಂದ ಅಭ್ಯರ್ಥಿಗಳು ಆಗ್ರಹಿಸಿದರು.

ಪೊಲೀಸರ ನೇಮಕಾತಿ ವಯೋಮಿತಿಯನ್ನು ಜಮ್ಮು ಕಾಶ್ಮೀರ, ಕೇರಳ ಮಾದರಿಯಲ್ಲಿ 33ಕ್ಕೆ ಹೆಚ್ಚಿಸಬೇಕು ಎಂದು ಮನವಿ ಮಾಡಿದರು.

ಈ ವೇಳೆ ಮಾತನಾಡಿದ ಜನಜಾಗೃತಿ ಸಂಘದ ಅಧ್ಯಕ್ಷರಾದ ಬಸವರಾಜ ಕೊರವರ, ಆರೋಪ ಪ್ರತ್ಯಾರೋಪದಲ್ಲಿ ಸರಕಾರ ಹಾಗೂ ವಿರೋಧ ಪಕ್ಷದ ನಾಯಕರು ಕಾಲಹರಣ ಮಾಡುತ್ತಾ ರಾಜ್ಯದ ಲಕ್ಷಾಂತರ ಯುವ ಜನರ ಬದುಕಿನೊಂದಿಗೆ ಚೆಲ್ಲಾಟ ಮಾಡುತ್ತಿದ್ದಾರೆ.

ಇಬ್ಬರಿಗೂ ನೈತಿಕತೆಯಿದ್ದರೆ ಹಿಂದಿನ ನೇಮಕಾತಿ ಸೇರಿದಂತೆ ಎಲ್ಲವೂ ಸಿಬಿಐ ತನಿಖೆಗೆ ಒಳಪಡಿಸಲಿ ಎಂದು ಆಗ್ರಹಿಸಿದರು.
ಈಗಾಗಲೇ ಪಿಎಸ್ ಐ ನೇಮಕಾತಿ ಹಗರಣದಲ್ಲಿ ಎಡಿಜಿಪಿ ರ‌್ಯಾಂಕ್ ಅಧಿಕಾರಿ ಬಂಧನವಾಗಿರುವುದರಿಂದ ಇದರ ಹಿಂದೆ ಪ್ರಭಾವಿಗಳ ಕೈವಾಡ ಇರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.

ಕೆಪಿಎಸ್ ಸಿ ಭ್ರಷ್ಟಾಚಾರದ ಕೂಪವಾಗಿದ್ದು, ಎಫ್ ಡಿಎ, ಎಸ್ ಡಿಎ ಹುದ್ದೆ ಲಕ್ಷಾಂತರ ರೂಪಾಯಿಗೆ ಮಾರಾಟವಾದರೆ, ಕೆಎಸ್ ಪಿಎಸ್ ಹಾಗೂ ತಹಸೀಲ್ದಾರ್ ಹಾಗೂ ಸಹಾಯಕ ಆಯುಕ್ತರ ಹುದ್ದೆಗೆ ಶಾದಿ‌ಭಾಗ್ಯ ನೀಡಿ ನೇಮಕ ಮಾಡಿಕಿಳ್ಳುತ್ತಿರುವುದು ಗುಟ್ಟಾಗಿ ಉಳಿದಿಲ್ಲ ಎಂದು ಕಿಡಿಕಾರಿದರು.

ಪ್ರಾಮಾಣಿಕವಾಗಿ ಹಗಲು ರಾತ್ರಿ
ಕಷ್ಟಪಟ್ಟು ಓದಿದ ಅಭ್ಯರ್ಥಿಗಳು ಏನೂ ದಿಕ್ಕು ತೋಚದೆ ಹೋಟೆಲ್ ಗಳಲ್ಲಿ ಕೆಲಸ ಮಾಡುವಂತಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಜನಪ್ರತಿನಿಧಿಗಳಿಗೆ ಲಕ್ಷಾಂತರ ಯುವಕರ ಭವಿಷ್ಯದ ಬಗ್ಗೆ ಕಿಂಚಿತ್ತೂ ಕಾಳಜಿ ಇದ್ದರೆ ಭ್ರಷ್ಟಾಚಾರ ಮುಕ್ತ ಪಾರದರ್ಶಕ ನೇಮಕಾತಿ ಮಾಡುವ ಮೂಲಕ ತಮ್ಮ ನೈತಿಕತೆ ಪ್ರದರ್ಶನ ಮಾಡಲು ಮುಂದಾಗಲಿ ಇಲ್ಲದಿದ್ದರೆ ಕಾನೂನು ಹೋರಾಟ ಅನಿವಾರ್ಯವಾಗಲಿದೆ ಎಂದು ಬಸವರಾಜ ಕೊರವರ ಎಚ್ಚರಿಸಿದರು.

ಈ ಪ್ರತಿಭಟನೆಯಲ್ಲಿ ಜನಜಾಗೃತಿ ಸಂಘದ ಉಪಾಧ್ಯಕ್ಷರಾದ ನಾಗರಾಜ ಕಿರಣಗಿ, ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿ, ಸುರೇಶ ಕೆ. ಶಿವಕುಮಾರ್ ದೊಡಮನಿ, ರವಿಶಂಕರ್ ಮಾಲಿಪಾಟೀಲ್, ಶರಣು ಬಾಗೂರ, ಬಸವರಾಜ ಕೊತದೊಡ್ಡಿ, ವೇಣು ಜಿರಾಕ್ಸ, ಚೇತನ್ ಪೂಜಾರಿ, ಸಾಗರ್ ಪಿರಗಣ್ಣವರ, ವಿರುಪಾಕ್ಷಿ, ದೇವರಾಜ್, ವಸಂತ್ ಲಮಾಣಿ , ದುರ್ಗೇಶ್ ಫುಲ್ಬಾವಿ, ವಿರೇಶ್ ಪೂಜಾರಿ, ರಾಮಾಂಜಿ ರಾಮನಗೌಡ, ಹೇಮಂತ್ ಕೆಂಪಣ್ಣ,ಲಕ್ಷ್ಮಣ ಹಾದಿಮನಿ ಮಲ್ಲಿಕಾರ್ಜುನ, ಅಭಿಜಿತ್ ವಿಶ್ವ ಟಕ್ಕನವರ್, ಗುರುರಾಜ್ ಜೇರಿ, ಶಶಿಧರ್ ನಾಯಕ ಇತರ ಸಂಗಡಿಗರು ಭಾಗಿಯಾಗಿದ್ದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *