ರಾಜ್ಯ

ಉತ್ತರ ಕರ್ನಾಟಕಕ್ಕೆ ಬಜೆಟ್ ನಲ್ಲಿ ನಿರ್ಲಕ್ಷ್ಯ ಅರವಿಂದ ಬೆಲ್ಲದ ಆಕ್ರೋಶ

  • ಧಾರವಾಡ ಪ್ರಜಾಕಿರಣ.ಕಾಮ್  : ಸರಕಾರದ ಉತ್ತರ ಕರ್ನಾಟಕದ ನಿರ್ಲಕ್ಷ್ಯ ಧೋರಣೆಯ ವಿರುದ್ಧ ವಿಧಾನಸಭೆಯಲ್ಲಿ ಗುರುವಾರ ಪ್ರತಿಪಕ್ಷ ಉಪ ನಾಯಕ ಅರವಿಂದ ಬೆಲ್ಲದ ತೀವ್ರ ವಾಗ್ದಾಳಿ ನಡೆಸಿದರು.

    ಬಜೆಟ್ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇತ್ತೀಚೆಗೆ ಮುಖ್ಯಮಂತ್ರಿಗಳು ಮಂಡಿಸಿದ ಬಜೆಟ್‌ನಲ್ಲಿ ಕಿತ್ತೂರು ಕರ್ನಟಕಮ ಕಲ್ಯಾಣ ಕಲ್ಯಾಣ ಕರ್ನಾಟಕ ಭಾಗವನ್ನು ನಿರ್ಲಕ್ಷ್ಷಿಸಲಾಗಿದೆ.

  • ಬಜೆಟ್‌ನಲ್ಲಿ ನಗರಾಭಿವೃದ್ಧಿ ಇಲಾಖೆಯ ಮೂಲಕ ಪ್ರಕಟಿಸಿದ ಅನುದಾನದಲ್ಲಿ ಬೆಳಗಾವಿ, ಬಳ್ಳಾರಿ. ದಾವಣಗೆರೆ ಹುಬ್ಬಳ್ಳಿ-ಧಾರವಾಡ ನಗರಗಳಿಗೆ ಬಿಡಿಗಾಸು ಕೂಡ ನೀಡಿಲ್ಲ.
  • ಅಲ್ಲದೇ ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆಯ ಬೇಡಿಕೆಯ ಕುರಿತು ಯಾವುದೇ ಪ್ರಸ್ತಾಪ ಮಾಡಲಾಗಿಲ್ಲ ಎಂದು ಆರೋಪಿಸಿದರು.

    ಹುಬ್ಬಳ್ಳಿಯಲ್ಲಿ ಬಿಜೆಪಿ ಸರಕಾರದ ಅವಧಿಯಲ್ಲಿ ಆರಂಭಿಸಲಾದ ಡಾ.ಗಂಗೂಬಾಯಿ ಹಾನಗಲ್ಲ ಸಂಗೀತ ಗುರುಕುಲಕ್ಕೆ ಬರೀ ೨೪ ಲಕ್ಷ ರೂಪಾಯಿ ಅನುದಾನ ನೀಡಲಾಗಿದೆ.

ಈ ಅನುದಾನದಿಂದ ಶಿಕ್ಷಕರಿಗೆ ವೇತನ ನೀಡಲು ಸಾರ್ಧಯವಾಗದು. ವೇತನವಿಲ್ಲದ ಕಾರಣ ಅನೇಕ ಸಂಗೀತ ಶಿಕ್ಷಕರು ಕೆಲಸ ಬಿಟ್ಟಿದ್ದಾರೆ. ದೇಶ ಕಂಡ ಹೆಸರಾಂತ ಹಿಂದುಸ್ತಾನಿ ಗಾಯಕಿ, ಹಿಂದುಳಿದ ವರ್ಗದ ಡಾ.ಗಂಗೂಬಾಯಿ ಹಾನಗಲ್ಲ ಅವರ ಬಗ್ಗೆ ಗೊತ್ತಿದ್ದು ಈ ರೀತಿ ಮಾಡಿದ್ದು ಏಕೆ ? ಎಂದರು.

ಜೊತೆಗೆ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನಕ್ಕೆ ಅಗತ್ಯವಿದ್ದ ೨೮ ಕೋ.ರೂ.ಗಳ ಪೈಕಿ ಬರೀ ೧೦.೯೪ ಕೋ.ರೂ.ಬಿಡುಗಡೆ ಮಾಡಿದ್ದು ಸರಿಯಲ್ಲ ಎಂದು ಛೇಡಿಸಿದರು.

ಮುಂದಿನ ಆರ್ಥಿಕ ವರ್ಷದಲ್ಲಿ ೩೮,೫೨೫ ಕೋ.ರೂ. ಅಬಕಾರಿ ತೆರಿಗೆಯನ್ನು ನಿರೀಕ್ಷಿಸಲಾಗುತ್ತಿದೆ ರಾಜ್ಯದ ಬಜೆಟ್‌ನಲ್ಲಿ ತಿಳಿಸಲಾಗಿದೆ.

ಸರಕಾರ ರಾಜ್ಯದಲ್ಲಿ ಅಬಕಾರಿ ತೆರಿಗೆ ಸಂಗ್ರಹಣೆಯಲ್ಲಿ ೧೮ ಸ್ಲ್ಯಾಬ್‌ಗಳನ್ನು ಮಾಡಿದೆ. ಈ ಸ್ಲ್ಯಾಬ್‌ಗಳಲ್ಲಿ ಮೊದಲ ನಾಲ್ಕು ಸ್ಲ್ಯಾಬ್‌ಗಳ ಮದ್ಯವನ್ನು ಬಡ ಜನರು ಸೇವಿಸುವುದರಿಂದ ಶೇ.೮೫ ರಷ್ಟು ಅಬಕಾರಿ ತೆರಿಗೆ ಬಡವರಿಂದ ಅಂದರೆ ಒಂದು ಕುಟುಂಬದಿಂದ ೩೨ ಸಾವಿರ ರೂಪಾಯಿ ಆದಾಯ ಸರಕಾರಕ್ಕೆ ಬರುತ್ತಿದೆ.

ಅಲ್ಲದೇ ಸುಮಾರು ಪ್ರತಿವರ್ಷ ೫೦ ಸಾವಿರ ರೂಪಾಯಿಗಳನ್ನು ಪ್ರತಿ ಕುಟುಂಬ ಸರಕಾರಕ್ಕೆ ಸಂದಾಯ ಮಾಡುತ್ತಿದೆ.

ಸರಕಾರವೆ ತಿಳಿಸಿದಂತೆ ರಾಜ್ಯದಲ್ಲಿ ೧.೨೦ ಕೋಟಿ ಬಿಪಿಎಲ್ ಕಾರ್ಡುಗಳನ್ನು ಹೊಂದಿರುವ ಕುಟುಂಬಗಳಿವೆ. ಈ ಕುಟುಂಬಗಳಿಗೆ ಸರಕಾರವು ಗೃಹಲಕ್ಷ್ಮೀ, ಅನ್ನಭಾಗ್ಯ ಇನ್ನಿತರ ಯೋಜನೆಗಳು ಸೇರಿ ಬರೀ ೨೭ ರಿಂದ ೨೮ ಸಾವಿರ ರೂಪಾಯಿಗಳನ್ನು ಒಂದು ವರ್ಷಕ್ಕೆ ನೀಡುತ್ತಿದೆ. ಆದರೆ ಸರಕಾರವು ಈ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂದರು.

ಮುಖ್ಯಮಂತ್ರಿ ಸಿದ್ಧರಾಮಯ್ಯನವರ ೧೫ ನೇ ಬಜೆಟ್ ಕೇವಲ ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಮಾತ್ರ ಸೀಮಿತವಾಗಿದೆ ಎಂದ ಬೆಲ್ಲದ, ಸರಕಾರ ಮಾತ್ರ ಸಾಲ ಮಾಡಿ ತುಪ್ಪ ತಿನ್ನಬೇಕು ಎಂದು ತೀರ್ಮಾನಿಸಿದಂತೆ ಆಗಿದೆ ಎಂದು ತಮ್ಮ ೯೦ ಕ್ಕೂ ಹೆಚ್ಚು ನಿಮಿಷಗಳ ಮಾತುಗಳಲ್ಲಿ ಆಕ್ರೋಷವ್ಯಕ್ತಪಡಿಸಿದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *