ಧಾರವಾಡದ ಮುರುಘಾಮಠದ ೯೪ ನೇ ಜಾತ್ರಾ ಮಹೋತ್ಸವ ಫೆ.10ರಿಂದ ಆರಂಭ

ಮುರುಘೇಂದ್ರ ಮಹಾಶಿವಯೋಗಿಗಳ ಸ್ಮರಣೆ

ಧಾರವಾಡ ಪ್ರಜಾಕಿರಣ. ಕಾಮ್ : ಶ್ರೀ ಮದಥಣಿ ಮುರುಘೇಂದ್ರ ಮಹಾಶಿವಯೋಗಿಗಳ ೯೪ ನೇ ಜಾತ್ರಾ ಮಹೋತ್ಸವ, ಗ್ರಂಥ ಲೋಕಾರ್ಪಣೆ ಹಾಗೂ ೨೦೨೪ ರ ಶ್ರೀ ಮೃತ್ಯುಂಜಯ ಮಹಾಂತ ಪ್ರಶಸ್ತಿ ಪ್ರಧಾನ, ಶಿವಾನುಭ ಚಿಂಥನ, ವಚನ ನೃತ್ಯ ಹಾಗೂ ಗಾಯನವು ಫೇ .೧೦ ರಿಂದ ೧೪ ರವರೆಗೆ ಶ್ರೀ ಮುರಘಾಮಠದಲ್ಲಿ ಜರುಗಲಿವೆ ಎಂದು ಡಾ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ತಿಳಿಸಿದರು.

ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ. ಬಸವ” ಮಾರ್ಗದಲ್ಲಿಯೇ ನಡೆದು, “ಬಸವ” ಮಾರ್ಗದಲ್ಲಿಯೇ ದುಡಿದು, ಬಸವಾದರ್ಶದ ಪರಿಭಾಷೆಯಲ್ಲಿಯೇ ಸತ್ವಪೂರ್ಣ ಬದುಕು ಸವೆಸಿದ ಪೂಜ್ಯ ಲಿಂ. ಅಥಣಿ ಮುರುಘೇಂದ್ರ ಮಹಾಶಿವಯೋಗೀಶ್ವರರ ಜಾತ್ರೆ ಮುರುಘಾಮಠದ ಅತೀಮುಖ್ಯ ವಾರ್ಷಿಕ ಸಮಾರಂಭ.

ಇದನ್ನು ಪ್ರತಿವರ್ಷ ಅತ್ಯಂತ ವೈಭವದಿಂದ ನಡೆಸುತ್ತ ಬಂದಿದೆ. .೧೦ ರ ಬೆಳಗ್ಗೆ ೯ ಕ್ಕೆ ಅಗಡಿ ಶ್ರೀ ನಿಜಗುಣ ಶಿವಯೋಗಿ ಸ್ವಾಮಿಜಿ ಸಾನಿಧ್ಯದಲ್ಲಿ ಶ್ರೀ ಗುರುಸಿದ್ದ ಸ್ವಾಮಿಜಿ ಧ್ವಜಾರೋಹಣ ನೆರವೇರಿಸುವರು.

ಶ್ರೀ ಪ್ರಶಾಂತ ದೇವರು ಸಮ್ಮುಖವಹಿಸುವರು. ಸಂಜೆ ೭ ಕ್ಕೆ ಜಾತ್ರಾ ಮಹೋತ್ಸವ ಉದ್ಘಾಟನೆ, ಚನ್ನಬಸವಣ್ಣನವರ ಕರಣ ಹಸಿಗೆ ವ್ಯಾಖ್ಯಾನ ಸಂಪುಟ ಲೋಕಾರ್ಪಣೆಯು ಮೂರಸಾವಿಮಠದ ಶ್ರೀ ಗುರುಸಿದ್ದ ರಾಜಯೋಗೇಂದ್ರ ಸ್ವಾಮಿಜಿ ಸಾನಿಧ್ಯದಲ್ಲಿ ನಡೆಯಲಿದ್ದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡÀ ಜಾತ್ರಾ ಮಹೋತ್ಸವ ಸಮಾರಂಭ ಉದ್ಘಾಟಿಸುವರು.

ಇಳಕಲ್ ಶ್ರೀ ಗುರು ಮಹಾಂತ ಸ್ವಾಮಿಜಿ ಸಾನಿಧ್ಯದಲ್ಲಿ ಶ್ರೀ ಗುರುಬಸವಲಿಂಗ ಸ್ವಾಮಿಜಿ ಗುರುವಂದನಾ ಕಾರ್ಯಕ್ರಮ ಜರುಗಲಿದೆ. 

ಬಿ.ವಿ.ಚಿಕ್ಕಮಠ ಇವರನ್ನು ಸನ್ಮಾನಿಸಲಾಗುವುದು ಎಂದರು.
೧೧ ರ ಸಂಜೆ ೭ ಕ್ಕೆ ಶಿವಾನುಭವ ಚಿಂಥನ-೧ ಸಾನಿಧ್ಯವನ್ನು ಶ್ರೀ ಶಿವಬಸವ ಸ್ವಾಮಿಜಿ ಸಾನಿಧ್ಯವಹಿಸಲಿದ್ದು ಚನ್ನಬಸವ ಸ್ವಾಮಿಜಿ ಸಮ್ಮುಖವಹಿಸುವರು.

ವಚನ ಸಾಹಿತ್ಯದಲ್ಲಿ ಮಾನವೀಯ ಮೌಲ್ಯಗಳು ಕುರಿತು ಡಾ.ವೀಣಾ ಬಿರಾದಾರ ಉಪನ್ಯಾಸ ನೀಡುವರು, 

ಫೆ ೧೨ ಸಂಜೆ ೦೭ ಕ್ಕೆ ನಿಡಸೂಸಿ ಮಠದ ಶ್ರೀ ಪಂಚಮ ಶಿವಲಿಂಗೇಶ್ವರ ಸ್ವಾಮಿಜಿ ಸಾನಿಧ್ಯದಲ್ಲಿ ಶಿವಾನುಭವ ಚಿಂಥನ ೨ ನಡೆಯಲಿದೆ.

ಶ್ರೀ ನೀಲಕಂಠ ಸ್ವಾಮಿಜಿ ಸಮ್ಮುಖದಲ್ಲಿ ಶಿವಕುಮಾರ ಪಾಟೀಲ ಅವರನ್ನು ಸನ್ಮಾನಿಸಲಾಗುವುದು. ಶಿವಲೀಲಾ ಕುಲಕರ್ಣಿ ಅಧ್ಯಕ್ಷತೆವಹಿಸಲಿದ್ದು ಜಾನಪದದಲ್ಲಿ ಶರಣರು ಕುರಿತು ಪ್ರೊ. ಶಕುಂತಲಾ ಸಿಂಧೂರ ಉಪನ್ಯಾಸ ನೀಡುವರು.

ಜ.೧೩ ರ ಸಂಜೆ ೭ ಕ್ಕೆ ಡಾ.ಚನ್ನವೀರ ಶಿವಾಚಾರ್ಯ ಸ್ವಾಮಿಜಿ ಅವರಿಗೆ 10 ಗ್ರಾಂ ಚಿನ್ನದ ಪದಕ 25 ಸಾವಿರ ನಗದು ಹಾಗು ಪಲಕ ವನ್ನು ಸಚಿವ ಮಧು ಬಂಗಾರಪ್ಪ ಅವರು ಮೃತ್ಯುಂಜಯ-ಮಹಾಂತ ಪ್ರಶಸ್ತಿ ಪ್ರಧಾನ ಮಾಡುವರು.

ಡಾ.ಶ್ರೀ ತೋಂಟದ ಸಿದ್ದರಾಮ ಸ್ವಾಮಿಜಿ ಸಾನಿಧ್ಯವಹಿಸಲಿದ್ದು ಶ್ರೀ ನಿಜಗುಣ ಪ್ರಭು ತೋಂಟದಾರ್ಯ ಸ್ವಾಮಿಜಿ ಸಮ್ಮುಖವಹಿಸುವರು.

ಶಾಸಕರಾದ ಬಸವರಾಜ ಬೊಮ್ಮಾಯಿ, ಅರವಿಂದ ಬೆಲ್ಲದ ಅತಿಥಿಯಾಗಿ ಪಾಲ್ಗೊಳ್ಳುವರು ಎಂದು ತಿಳಿಸಿದರು.

ಫೆ‌ ೧೪ ರಂದು ಬೆಳಿಗ್ಗೆ ೦೪ ಗಂಟೆಗೆ ಲಿಂಗದೀಕ್ಷೆ ಕಾರ್ಯಕ್ರಮದಲ್ಲಿ ಶ್ರೀ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಜಿ, ಚನ್ನಬಸವ ಸ್ವಾಮಿಜಿ ಸಾನಿಧ್ಯವಹಿಸುವರು

ವಿವಿಧ ಮಠಾಧೀಶರು ಉಪಸ್ಥಿತರಿರುವರು.

ಸಂಜೆ ೪ ಕ್ಕೆ ಶ್ರೀ ಮದಥಣಿ ಮುರುಘೇಂದ್ರ ಮಹಾಶಿವಯೋಗಿಗಳವರ ರಥೋತ್ಸವವು ನಡೆಯಲಿದ್ದು, ವಿವಿಧ ಮಠಾಧೀಶರು ಸಮ್ಮುಖವಹಿಸುವರು.

ಈ ಸಮಾರಂಭದಲ್ಲಿ ಶ್ರದ್ಧಾಭಕ್ತಿಯಿಂದ ಸಕಲ ಸದ್ಭಕ್ತರು ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ವಿನಂತಿಸಿದರು.

ಪತ್ರಿಕಾಗೋಷ್ಟಿಯಲ್ಲಿ ನಾಗರಾಜ ಪಟ್ಟಣಶೆಟ್ಟಿ. ಡಿ ಬಿ ಲಕಮನಹಳ್ಳಿ. ಸಿದ್ದರಾಮಣ್ಣ ನಡಕಟ್ಟಿ. ಎಸ್. ಎಸ್. ಲಕ್ಸ್ಮೇಶ್ವರ್. ಸಿ ಎಸ್ ಪಾಟೀಲ್. ಎಂ ಎಸ್ ಸಾಲಿಮಠ ಇದ್ದರು.