ಚೆನ್ನೈ Prajakiran.com : ವಂಡಲೂರಿನ ಅರಿಗ್ನಾರ್ ಅನ್ನಾ ಪ್ರಾಣಿ ಸಂಗ್ರಹಾಲಯದಲ್ಲಿ ಕೊರೋನಾ ಸೋಂಕಿಗೆ ತುತ್ತಾಗಿದ್ದ ಸಿಂಹವೊಂದು ಮೃತಪಟ್ಟಿದೆ.
12 ವರ್ಷದ ಪಾಥಬನಾಥನ್ ಎಂಬ ಏಷ್ಯಾಟಿಕ್ ಗಂಡು ಸಿಂಹಗೆ ಜೂನ್ 3ರಂದು ಕೊರೋನಾ ಸೋಂಕು ದೃಢಪಟ್ಟಿದ್ದು, ಸೋಂಕಿತ ಸಿಂಹಗಳ ಮೇಲೆ ಹೆಚ್ಚಿನ ನಿಗಾ ವಹಿಸಲಾಗಿತ್ತು ಎಂದು ಭೋಪಾಲ್ನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೈ ಸೆಕ್ಯುರಿಟಿ ಅನಿಮಲ್ ಡಿಸೀಸ್ ವರದಿ ತಿಳಿಸಿದೆ.
ಚೆನ್ನೈ ನ ಪ್ರಾಣಿ ಸಂಗ್ರಹಾಲಯದಲ್ಲಿ ಈಗಾಗಲೇ 9 ಪ್ರಾಣಿಗಳಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ಜೂನ್ 4 ರಂದು ಇದೇ ಸಂಗ್ರಹಾಲಯದಲ್ಲಿ ಸಿಂಹಿಣಿ ನೀಲಾ ಕೋವಿಡ್ ಸೋಂಕಿಗೆ ಮೃತಪಟ್ಟಿತ್ತು.
ಸದ್ಯ ಕೊರೋನಾ ಸೋಂಕಿತ ಇತ್ತರೆ ಮೂರು ಸಿಂಹಗಳ ಮೇಲೆ ನಿಗಾ ವಹಿಸಲಾಗಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.