ರಾಜ್ಯ

ಧಾರವಾಡ ಕೃಷಿ ವಿಶ್ವವಿದ್ಯಾಲಯದ ವಿಸಿ , ಮುಲ್ಲಾ ಹಠಾವೋ ಎಂದ ಪ್ರಮೋದ ಮುತಾಲಿಕ್….!

ಧಾರವಾಡ ಕೃಷಿ ವಿಶ್ವವಿದ್ಯಾಲಯ ಅವ್ಯವಸ್ಥೆ ಆಗರ

ಹಗರಣದ ತನಿಖೆಗೆ ಮುತಾಲಿಕ್ ಧ್ವನಿ

ಹುಬ್ಬಳ್ಳಿ prajakiran.com :  ಧಾರವಾಡದ ಕೃಷಿ ವಿಶ್ವವಿದ್ಯಾಲಯ ಅವ್ಯವಸ್ಥೆ ಆಗರವಾಗಿದೆ.

ವಿಶ್ವವಿದ್ಯಾಲಯದಲ್ಲಿ ಭ್ರಷ್ಟಾಚಾರ, ಮಹಿಳೆಯರ ಲೈಂಗಿಕ ಶೋಷಣೆ ತಾಂಡವವಾಡುತ್ತಿದೆ.

ಇಲ್ಲಿರುವ ಅವ್ಯವಸ್ಥೆ ವಿರುದ್ಧ ಹಾಗೂ ಹಗರಣದ ಬಗ್ಗೆ ತನಿಖೆ ಮಾಡಬೇಕು ಎಂದು ಶ್ರೀರಾಮಸೇನಾದ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಆಗ್ರಹಿಸಿದರು.

ಸೋಮವಾರ ಸುದ್ಧಿ ಗೋಷ್ಟಿ ಯಲ್ಲಿ ಮಾತನಾಡಿದ ಅವರು, ಕೃಷಿ ವಿಶ್ವವಿದ್ಯಾಲಯ ಕುಲಪತಿಗಳ ಆಪ್ತ ಸಹಾಯಕ ಎಂ.ಎ.ಮುಲ್ಲಾ ಹಾಗೂ ಯು.ಬಿ.ಮೇಸ್ತಿ ಎಂಬುವವರಿಂದ ಕೃಷಿ ವಿಶ್ವವಿದ್ಯಾಲಯ ಹದಗೆಟ್ಟು ಹೋಗಿದೆ. ರೈತರ ಹೆಸರಿನಲ್ಲಿ ಧಾರವಾಡ ಕೃಷಿ ವಿವಿ ಅನ್ಯಾಯ ಮಾಡುತ್ತಿದೆ ಎಂದರು.

ಇತ್ತೀಚಿಗೆ ಅಪಘಾತ ಆಯ್ತು, ಆ ಮೂಲಕ ಸಾಕಷ್ಟು ವಿಷಯ ಬಹಿರಂಗವಾಗಿದೆ.

ಅದು ಅಪಘಾತವಲ್ಲ, ಅದು ರೇಪ್ ಆಂಡ್ ಮರ್ಡರ್ ಎಂದು ಆರೋಪ ಮಾಡಿದ ಅವರು, ಬಾಗಲಕೋಟೆ ಅಂತ ಹೇಳಿ ಗೋವಾಗೆ ಒತ್ತಾಯದ ಮೂಲಕ ಯುವತಿಯರನ್ನು ಕರೆದುಕೊಂಡು ಹೋಗಲಾಗಿದೆ ಎಂದು ದೂರಿದರು.

ಎಂ ಎ ಮುಲ್ಲಾ, ಯು. ಬಿ.ಮೆಸ್ತಿ ಇವರಿಬ್ಬರು ಸೇರಿ ಯುವತಿಯರನ್ನ ಕೊಂದಿದ್ದಾರೆ.ಈ ಬಗ್ಗೆ ದೊಡ್ಡ ಮಟ್ಟದಲ್ಲಿ ತನಿಖೆಯಾಗಬೇಕು ಎಂದು ಆಗ್ರಹಿಸಿದರು.

ಕೃಷಿ ವಿವಿಯ ವಿಸಿ ಸಹ ಗೋವಾಗೆ ಹೋಗಿದ್ದರು ಎನ್ನುವ ಮಾಹಿತಿ ಇದೆ. ಘಟನೆ ನಡೆದು 2 ತಿಂಗಳಾಗಿದೆ. ಇನ್ನು ವರೆಗೂ ಎಫ್ಐಆರ್ ಆಗಿಲ್ಲ.

ಮೇಘಾ ಮತ್ತು ರೇಖಾ ಇಬ್ಬರನ್ನೂ ಸ್ವಹಿತಕ್ಕಾಗಿ ಬಳಸಿಕೊಂಡಿದ್ದಾರೆ. ಇಷ್ಟೆಲ್ಲಾ ಆದರೂ ಇಬ್ಬರನ್ನು ಸಸ್ಪೆನ್ಡ್ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು

ಕೃಷಿ ವಿವಿ ಆವರಣದಲ್ಲೇ, ಮಸೀದಿ, ಸ್ಮಶಾನ, ದರ್ಗಾವನ್ನ ಮಾಡಿದ್ದಾರೆ. ಈ ಹಿನ್ನಲೆಯಲ್ಲಿ ವಿಸಿ, ಮುಲ್ಲಾ ಹಠಾವೋ ಕೃಷಿ ವಿವಿ ಬಚಾವೋ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

. ಅಲ್ಲದೇ ಸತ್ತು ಹೋದ ಯುವತಿಯರ ಕುಟುಂಬಕ್ಕೆ 25 ಲಕ್ಷ ಪರಿಹಾರ ಕೊಡಬೇಕೆಂದು ಶ್ರೀ ರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಒತ್ತಾಯಿಸಿದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *