ರಾಜ್ಯ

ಜನರ ಕರೋನಾ ಪರೀಕ್ಷೆ ಪ್ರಮಾಣ ಕಡಿಮೆ ಮಾಡಿದ ಸರಕಾರ….!.

ಧಾರವಾಡ prajakiran.com : ದೇಶದಾದ್ಯಂತ ಜನರ ಕರೋನಾ ಪರೀಕ್ಷೆ ಪ್ರಮಾಣವನ್ನು ಸರಕಾರ ಕಡಿಮೆ ಮಾಡಿದೆ.ಹೊರತು ಹರಡುವದನ್ನು ತಡೆಯಲು ವಿಫಲವಾಗಿದೆ ಎಂದು ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಪಿ.ಎಚ್. ನೀರಲಕೇರಿ ಆರೋಪಿಸಿದರು

. ರಾಜ್ಯದಲ್ಲೂ ಸಹಿತ ಬಿಜೆಪಿಯ ಬಿ ಎಸ್ ವೈ ಸರಕಾರ ರೋಗದ ಲಕ್ಷಣ ಇದ್ದವರಿಗೆ ಮಾತ್ರ ಪರೀಕ್ಷೆ ಮಾಡುವಂತೆ ಮೌಖಿಕ ಆದೇಶದನ್ವಯ ಎಲ್ಲ ಜಿಲ್ಲೆಗಳಲ್ಲಿ ಹೆಚ್ಚು ಜನರ ಪರೀಕ್ಷೆ ಮಾಡುತ್ತಿಲ್ಲ ಎಂದು ದೂರಿದ್ದಾರೆ.

ಇದೆ ರೀತಿ ದೇಶದಲ್ಲಿ ಸಹಿತ ಕೋವಿಡ್ ಪರೀಕ್ಷೆ ಮಾಡುವದನ್ನು 80%ಕಡಿತಗೊಳಿಸಲಾಗಿದೆ‌

ಇದರ ಪರಿಣಾಮ ಇಂದು ಈ ಕೆಳಕಂಡ ಅಂಕಿಅಂಶಗಳು ಇಳಿಕೆಯಾಗಿದೆ ಎಂದು ಬಿಂಬಿಸುವ ಪ್ರಯತ್ನವನ್ನು ನರೇಂದ್ರ ಮೋದಿಯವರ ನೇತೃತ್ವದ ಬಿಜೆಪಿ ಸರಕಾರ ಸುಳ್ಳು ಮಾಹಿತಿಯನ್ನು ಕೊಟ್ಟು ಜನರನ್ನು ದಿಕ್ಕುತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ಕಿಡಿಕಾರಿದ್ದಾರೆ.

ಆದ್ದರಿಂದ ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಈ ರೀತಿ ಅಂಕಿ ಅಂಶಗಳನ್ನು ಕೊಟ್ಟು ತಮ್ಮ ವೈಫಲ್ಯವನ್ನು ಮುಚ್ಚಿಕೊಳ್ಳುವ ಬದಲಾಗಿ ಇಲ್ಲಿಯವರೆಗೆ ಮಾಡಿದ ತಪ್ಪುಗಳನ್ನು ಮುಂದೆ ಆಗದಂತೆ ಎಚ್ಚರಿಕೆ ವಹಿಸಿ ಪ್ರಾಮಾಣಿಕವಾಗಿ ನಿಯಮಾನುಸಾರ ತಜ್ಞರ ಸಲಹೆಗಳಂತೆ ಕಟ್ಟುನಿಟ್ಟಾಗಿ ಕ್ರಮ ಜರುಗಿಸಿ ಜನರ ಪ್ರಾಣಹಾನಿ ನಿಲ್ಲಿಸುವ ಕಾರ್ಯವನ್ನು ಯುದ್ದೂಪಾದಿಯಲ್ಲಿ ಮಾಡಬೇಕೆಂದು ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಪಿ.ಎಚ್. ನೀರಲಕೇರಿ
ಆಗ್ರಹಿಸಿದ್ದಾರೆ.

ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಿಗೆ ಆಕ್ಸಿಜನ್ ಸರಬರಾಜು ಮಾಡಿದ ಮುಸ್ಲಿಂ ರಾಷ್ಟ್ರಕ್ಕೆ ಧನ್ಯವಾದ

ಧಾರವಾಡ, ಬೆಳಗಾವಿ, ಗದಗ ಜಿಲ್ಲೆಗಳ ಕೋವಿಡ್ ಸೋಂಕಿತರಿಗೆ ಆಮ್ಲಜನಕ ಪೂರೈಸಿದ ಕುವೈತ್ ರಾಷ್ಟ್ರಕ್ಕೆ
ವಿಶೇಷವಾಗಿ ಸುಮಾರು 75 ಮೆಟ್ರಿಕ್ ಟನ್ ಆಕ್ಸಿಜನ್ ಪೂರೈಸಿದ
ಭಾರತದ ಎನ್ ಡಿ ಎ ನೇತೃತ್ವದ ಬಿಜೆಪಿ ಸರಕಾರದ  ಪ್ರಧಾನಿ ನರೇಂದ್ರ ಮೋದಿ, ಅವರಿಗೆ ಕೃತಜ್ಞತೆಗಳು ತಿಳಿಸಿದರು

ಇನ್ನು ಪೂರೈಕೆಯಾದ ಆಮ್ಲಜನಕವನ್ನು ಆಸ್ಪತ್ರೆಗಳ ಮುಖಾಂತರ ರೋಗಿಗಳಿಗೆ ಬಳಸಲು ಮತ್ತು ಜನರ ಜೀವ ಉಳಿಸಲು ಜಿಲ್ಲಾಡಳಿತಕ್ಕೆ, ಅಧಿಕಾರಿಗಳೊಂದಿಗೆ ಹೆಗಲುಕೊಟ್ಟು ಯಾವುದೇ ರೀತಿಯ ಅಧಿಕಾರ ದುರುಪಯೋಗ ಆಗದಂತೆ ಒಟ್ಟಾಗಿ ಪ್ರಾಮಾಣಿಕವಾಗಿ ಜನರ ಸೇವೆಯನ್ನು ಮಾಡಬೇಕೆಂದು ಒತ್ತಾಯಿಸಿದ್ದಾರೆ.

ಜನರ ಆರೋಗ್ಯ ಕಾಪಾಡುವ ಕೆಲಸ ವನ್ನು ಪಕ್ಷ, ಜಾತಿ, ಕೋಮು ಬೇಧ ಎಲ್ಲವನ್ನೂ ಮೀರಿ ಸಮಾರೋಪಾದಿಯಲ್ಲಿ ಸೇವೆ ಮಾಡಬೇಕಾದ ಅವಸ್ಯಕತೆಯನ್ನು ಅರಿತು ಎಲ್ಲರೂ ಕಾರ್ಯೋನ್ಮುಖರಾಗೋಣ ಎಂದು ಕೆಪಿಸಿಸಿ ಮಾಧ್ಯಮ ವಿಶ್ಲೃಷಕ ಪಿ.ಎಚ್. ನೀರಲಕೇರಿ ತಿಳಿಸಿದರು

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *