ರಾಜ್ಯ

ಧಾರವಾಡ ತಹಸೀಲ್ದಾರ್ ಅಧಿಕಾರ ದುರುಪಯೋಗ : ರಾತ್ರೋ ರಾತ್ರಿ ಪ್ರಭಾವಿಗಳ ಒತ್ತಡಕ್ಕೆ ಮಣಿದು ಹೈಕೋರ್ಟ್ ಆದೇಶ ಉಲ್ಲಂಘಿಸಿದ ಆರೋಪ

  ಧಾರವಾಡ ತಹಸೀಲ್ದಾರ್ ಅಧಿಕಾರ ದುರುಪಯೋಗ  \

ರಾತ್ರೋ ರಾತ್ರಿ ಪ್ರಭಾವಿಗಳ ಒತ್ತಡಕ್ಕೆ ಮಣಿದು ಹೈಕೋರ್ಟ್ ಆದೇಶ ಉಲ್ಲಂಘಿಸಿದ ಆರೋಪ

ಉತಾರದಲ್ಲಿ ಪಾರ್ವತಿ ಕಾಳೆಣ್ಣವರ ಸೋದರಿಯರ ಹೆಸರು ತೆಗೆದು ಹಾಕಿದ ಆಪಾದನೆ

ಧಾರವಾಡ ಜಿಲ್ಲಾಧಿಕಾರಿಗಳಿಗೆ ಜನಜಾಗೃತಿ ಸಂಘದ ಅಧ್ಯಕ್ಷ  ಬಸವರಾಜ ಕೊರವರ ನೇತೃತ್ವದಲ್ಲಿ ದೂರು

ಧಾರವಾಡ prajakiran. com : ಧಾರವಾಡದ ಗುಲಗಂಜಿಕೊಪ್ಪದ ಸರ್ವೇ ನಂ. ೭೩/೧ ಹಾಗೂ ೭೩/೨ ರಲ್ಲಿ ೫ ಎಕರೆ ೨ ಗುಂಟೆ ಹಾಗೂ ೩ ಎಕರೆ, ಸರ್ವೇ ನಂ.  ೬೦ರಲ್ಲಿ ೬ ಎಕರೆ ಭೂಮಿ ಪಾರ್ವತವ್ವ ಕಾಳೆಣ್ಣನವರ್ ಹಾಗೂ ಸೋದರಿಯರ ಮಾಲಿಕತ್ವದಲ್ಲಿದೆ.

ಈ ಬಗ್ಗೆ ೨೦೧೩ರಲ್ಲಿ ಸಿವಿಲ್ ನ್ಯಾಯಾಲಯವು ಇವರ ಸೋದರ ಸಂಬAಧಿಗಳಿಗೆ ಪಾಲು ಸಿಗಬೇಕು ಎಂದು ಆದೇಶ ಮಾಡಿತ್ತು.

ಇದನ್ನು ಪ್ರಶ್ನಿಸಿ ಪಾರ್ವತವ್ವ ಕಾಳೆಣ್ಣನವರ್ ಹಾಗೂ ಸೋದರಿಯರು
ಹೈಕೋರ್ಟ್ ಮೆಟ್ಟಿಲು ಹತ್ತಿದ್ದರು.

ಸಿವಿಲ್ ನ್ಯಾಯಾಲಯದ ಆದೇಶಕ್ಕೆ ಇತ್ತೀಚೆಗೆ ಫೆ. ೨೧ರಂದು ಧಾರವಾಡ ಹೈಕೋರ್ಟ್ ತಡೆಯಾಜ್ಞೆಯನ್ನು ಕೂಡ ನೀಡಿತ್ತು.

ಆ ಆದೇಶದ ನಡುವೆ ಧಾರವಾಡ ಸಿವಿಲ್ ನ್ಯಾಯಾಲಯವು ಈ ವ್ಯಾಜ್ಯ ಇರ್ತರ್ಥ್ಯ ಆಗುವರೆಗೆ ಈ ಜಮೀನಿನಲ್ಲಿ ಯಾವುದೇ ಚಟುವಟಿಕೆಗಳನ್ನು ನಡೆಸದಂತೆ ಸೂಚಿಸಿತ್ತು.

ಈ ಬಗ್ಗೆ ಧಾರವಾಡ ತಹಸೀಲ್ದಾರ್ ಸಂತೋಷ ಬಿರಾದಾರ ಅವರಿಗೆ ತಕರಾರು ಅರ್ಜಿ ಸಲ್ಲಿಸಿದರೂ ಕೂಡ ಧಾರವಾಡ ಹೈಕೋರ್ಟ್ ಆದೇಶದ ದೃಢಿಕೃತ ಪ್ರತಿ ತರುವಂತೆ ಸೂಚಿಸಿ, ರಾತ್ರೋ ರಾತ್ರಿ ಪ್ರಭಾವಿಗಳ ಒತ್ತಡಕ್ಕೆ ಮಣಿದು ಹಣದ ಆಮಿಷಕ್ಕೆ ಒಳಗಾಗಿ ಹೈಕೋರ್ಟ್ ಆದೇಶ ಉಲ್ಲಂಘಿಸಿ ಸೋದರ ಸಂಬಂಧಿಗಳ ಹೆಸರು ಸೇರ್ಪಡೆ ಮಾಡಿದ್ವಲ್ಲದೆ, ಉತಾರದಲ್ಲಿ ಪಾರ್ವತಿ ಕಾಳೆಣ್ಣವರ ಹಾಗೂ ಅವರ ಸಹೋದರಿಯವರ ಹೆಸರು ತೆಗೆದು ಹಾಕಿದ್ದಾರೆ.

ಈ ಬಗ್ಗೆ ಯಾವುದೇ ನ್ಯಾಯಾಲವು ಆದೇಶ ನೀಡಿಲ್ಲ. ಹಾಗಿದ್ದರೂ ಅವರು ಹೆಸರು ತೆಗೆದು ಹಾಕಿದ್ದು ಯಾವ ಕಾರಣಕ್ಕೆ. ಇದಕ್ಕೆ ಒತ್ತಡ ಹೇರಿದವರು ಯಾರು ಎಂಬ ಪ್ರಶ್ನೇ ಈಗ ಎದುರಾಗಿದೆ.

ಧಾರವಾಡ ತಹಸೀಲ್ದಾರ್ ಕಚೇರಿಗೆ ಹಲವು ಬಾರಿ ಅಲೆದಾಡಿದರೂ ಸಕರಾತ್ಮಕವಾಗಿ ಸ್ಪಂದಿಸಿದೆ, ಅವರ ಒತ್ತಡಕ್ಕೆ ಮಣಿದು ಕೇವಲ ೨೪ ಗಂಟೆಗಳಲ್ಲಿ ಪಹಣಿಯಲ್ಲಿನ ಹೆಸರು ತೆಗೆದು ಹಾಕುವ ಮೂಲಕ ತಮ್ಮ ಅಧಿಕಾರ ದುರುಪಯೋಗ ಪಡಿಸಿಕೊಳ್ಳುವ ಮೂಲಕ ಪಾರ್ವತಿ ಕಾಳೆಣ್ಣವರ್ ಕುಟುಂಬದ ಸದಸ್ಯರಿಗೆ ಅನ್ಯಾಯ ವೆಸಗಿದ್ದಾರೆ ಎಂದು ಧಾರವಾಡ ಜಿಲ್ಲಾಧಿಕಾರಿ ಗಳಿಗೆ ದೂರು ನೀಡಿದರು.

ಆ ಜಮೀನಿನಲ್ಲಿ ದಿ. ಫ್ರುಟ್ ಇರ್ಪಾನ್ ಸಹಚರರಿಂದ ದೊಡ್ಡ ಮೊತ್ತದ ಹಣ ಪಡೆದಿರುವ ಬಗ್ಗೆ ಅನುಮಾನವಿದೆ ಎಂದು ಜಿಲ್ಲಾಧಿಕಾರಿ ಗಳಿಗೆ ನೀಡಿದ ದೂರಿ ನಲ್ಲಿ ಆಪಾದಿಸಿದ್ದಾರೆ.

ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಮೂಲ ಮಾಲೀಕರಿಗೆ ಅನ್ಯಾಯ ವಾಗದಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದರು.

ಇದಲ್ಲದೆ, ಧಾರವಾಡ ತಹಸೀಲ್ದಾರ್ ಕಚೇರಿ ಸಂಪೂರ್ಣ ದಲ್ಲಾಳಿಗಳ ತಾಣವಾಗಿದ್ದು, ಇಂತಹ ಹತ್ತು ಹಲವು ಪ್ರಕರಣಗಳಲ್ಲಿ ತಹಸೀಲ್ದಾರ್ ಹಾಗೂ ಅವರ ಕಚೇರಿ ಸಿಬ್ಬಂದಿ ಶಾಮೀಲಾಗಿರುವ ದೂರುಗಳು ಬಂದಿವೆ.

ಈ ಬಗ್ಗೆ ಸಮಗ್ರ ತನಿಖೆ ನಡೆಸಲು ಎಸಿಬಿಗೂ ಕೂಡ ದೂರು ನೀಡಲಾಗುವುದು ಎಂದು ಜನಜಾಗೃತಿ ಸಂಘದ ಅಧ್ಯಕ್ಷರಾದ  ಬಸವರಾಜ ಕೊರವರ ಎಚ್ಚರಿಸಿದರು.

ಈ ಸಂದರ್ಭದಲ್ಲಿ ಪಾರ್ವತಿ ಕಾಳೆಣ್ಣವರ ಅವರ ಸೋದರಿಯಾದ ದಾಕ್ಷಾಯಣಿ, ಶಾಂತವ್ವ, ರತ್ನವ್ವ, ಬಸಲಿಂಗವ್ವ ಹಾಗೂ ಗಿರೀಶ್ ಕಾಳಣ್ಣವರ,  ಹನುಮಂತ ಮೊಕಾಶಿ, ಜನಜಾಗೃತಿ ಸಂಘದ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿ, ಸದಸ್ಯರಾದ ಆನಂದ ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *