ರಾಜ್ಯ

ಗಿಡಗಳಿಲ್ಲದೆ ಗಿಡಗಳಿವೆ ಎಂದು ರೈತರ ಹೆಸರಿನಲ್ಲಿ ಕೋಟ್ಯಾಂತರ ರೂಪಾಯಿ ವಂಚಿಸಿದ ಕೆ ಐ ಎ ಡಿ ಬಿ, ತೋಟಗಾರಿಕೆ ಅಧಿಕಾರಿಗಳು : 3 ಕೋಟಿ 67 ಲಕ್ಷ ಹಗರಣದ ದಾಖಲೆ ಬಿಡುಗಡೆಗೊಳಿಸಿದ ಬಸವರಾಜ ಕೊರವರ

ಕೆ ಐ ಎ ಡಿ ಬಿಯ 20 ಕೋಟಿ
ಹಗರಣ ಸಿಬಿಐ ತನಿಖೆಗೆ ವಹಿಸಲು ಬಸವರಾಜ ಕೊರವರ ಒತ್ತಾಯ

ವಿಶೇಷ ಭೂ ಸ್ವಾಧೀನ ಅಧಿಕಾರಿ ಮಮತಾ ಹೊಸಗೌಡರ ಅವಧಿಯಲ್ಲಿ ಅಕ್ರಮ

ಧಾರವಾಡ ಪ್ರಜಾಕಿರಣ.ಕಾಮ್ : ಧಾರವಾಡದ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ
(ಕೆ ಐ ಎ ಡಿ ಬಿ) ಯ 20 ಕೋಟಿ
ಹಗರಣ ಕುರಿತು ನಾವು ಮಾಧ್ಯಮಗಳಿಗೆ ನೀಡಿದ ಮಾಹಿತಿಯನ್ನು ಆಧರಿಸಿ ಮಾತ್ರ ಒಂಬತ್ತು ಜನ ಅಧಿಕಾರಿ ತಂಡ ವರದಿ ನೀಡಿ ಕೈ ತೊಳೆದುಕೊಂಡಿದೆ.

ಆದ್ದರಿಂದ ಕೇವಲ 14 ಜನರ ವಿರುದ್ಧ ಮಾತ್ರ ಪ್ರಕರಣ ದಾಖಲಾಗಿದೆ‌.
ಈ ಪ್ರಕರಣದಲ್ಲಿ ಆರ್ಥಿಕ ಅಪರಾಧ ಹಾಗೂ ಬ್ಯಾಂಕ್ ಸಿಬ್ಬಂದಿಗಳು ಶಾಮೀಲಾಗಿದ್ದರಿಂದ
ಇದನ್ನು ತಕ್ಷಣ ಸಿಬಿಐ ತನಿಖೆ ನಡೆಸಲು ರಾಜ್ಯದ ಘನ ಸರ್ಕಾರ ಮುಂದಾಗಬೇಕು ಎಂದು ಜನಜಾಗೃತಿ ಸಂಘದ ಅಧ್ಯಕ್ಷರಾದ ಬಸವರಾಜ ಕೊರವರ ಆಗ್ರಹಿಸಿದರು.

ಅವರು ಸೋಮವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಇದರಲ್ಲಿ ಇನ್ನೂ ನೂರಾರು ಕೋಟಿ ಅಕ್ರಮ, ಅವ್ಯವಹಾರ ನಡೆದಿರುವ ಮಾಹಿತಿ ಇದೆ. ಹೀಗಾಗಿ ಸರ್ಕಾರ ಅಧಿಕಾರಿ ವರ್ಗದವರನ್ನು ಹಾಗೂ ಕಾಣದ ಕೈಗಳನ್ನು ಯಾವುದೇ ಕಾರಣಕ್ಕೂ ರಕ್ಷಿಸಬಾರದು ಎಂದರು.

ಇದೇ ರೀತಿ ಧಾರವಾಡ ತಾಲೂಕಿನ ಬೇಲೂರು ಗ್ರಾಮದ ಸರ್ವೇ ನಂಬರ್ 317, 318, 319, ಆಸ್ತಿ ಮಾಲೀಕರು ಬಸವರಾಜ ಭರಮಪ್ಪ ಹುಲ್ಲಂಬಿ ಅವರ ಹೆಸರಿನಲ್ಲಿ 67 ಲಕ್ಷ 7016 ರೂಪಾಯಿ ಗಿಡಗಳಿಲ್ಲದೆ 290 ಗಿಡಗಳಿವೆ ಎಂದು ಹಣ ಪರಿಹಾರವನ್ನು 29-07-2022 ರಂದು ಬಿಡುಗಡೆ ಮಾಡಲಾಗಿದೆ ಎಂದು ದಾಖಲೆ ಬಿಡುಗಡೆಗೊಳಿಸಿದರು.

ಅದೇ ರೀತಿ ಬೇಲೂರು ಗ್ರಾಮದ ಸರ್ವೇ ನಂ 327,357 ವಿರೂಪಾಕ್ಷಪ್ಪ ಚನ್ನಪ್ಪ ಹೊಸೂರು ಅವರ ಹೆಸರಿನಲ್ಲಿ 3 ಕೋಟಿ 32 ಸಾವಿರ 234 ರೂಪಾಯಿ ಗಿಡಗಳಿಲ್ಲದೆ 493 ಗಿಡ ಗಳ ಪರಿಹಾರ ಹಣ ಬಿಡುಗಡೆ
ಸಪ್ಟೆಂಬರ್ ನಲ್ಲಿ ಆರ್ ಟಿ ಜಿ ಎಸ್ ಮಾಡಲಾಗಿದೆ ಎಂದು ಮಾಹಿತಿ ಹಕ್ಕಿನಲ್ಲಿ ಬಂದ ದಾಖಲೆ ತೋರಿಸಿದರು‌.

ಇದು ಈಗಿನ ಹಾಲಿ ವಿಶೇಷ ಭೂಸ್ವಾಧೀನ ಅಧಿಕಾರಿ ಶ್ರೀಮತಿ ಮಮತಾ ಹೊಸಗೌಡರ ಇವರ ಅವಧಿಯಲ್ಲಿ ನಡೆದ ಹಗರಣವಾಗಿದೆ.

ಇದರಲ್ಲಿ ಮ್ಯಾನೇಜರ್ ಶಂಕರ್ ತಳವಾರ,
ಕೇಸ್ ವರ್ಕರ್ ಅಮಿತ ಮುದ್ದಿ ಹಾಗೂ ಹಲವಾರು ಕೆ ಐ ಎ ಡಿ ಬಿಯ ಏಜೆಂಟರು ಶಾಮೀಲಾಗಿದ್ದಾರೆ‌ ಎಂದು ಆರೋಪಿಸಿದರು.

ಇದು ಒಟ್ಟು 3 ಕೋಟಿ 67 ಲಕ್ಷ 39 ಸಾವಿರ 250 ರೂಪಾಯಿ ಹಗರಣವಾಗಿದೆ.
ಈ ಬಗ್ಗೆ ಮಾಹಿತಿ ಸೋರಿಕೆ ಆದರೆ ತೊಂದರೆ ಆಗುತ್ತದೆ ಎಂದು ಅಧಿಕಾರಿ ವರ್ಗದವರು
ಫಾರ್ಮ್ ನಂಬರ್ ಡಿ ನಲ್ಲಿ ಹಲವು ನ್ಯೂನತೆಗಳನ್ನು ಎಸಗಿದ್ದಾರೆ ಎಂದು ವಿವರಿಸಿದರು.

ಅದರಲ್ಲಿ ಆರ್ ಟಿ ಜಿ ಎಸ್ ಸಂಖ್ಯೆ ನಮೂದಿಸಿಲ್ಲ. ರೈತರಿಗೆ ಪರಿಹಾರ ನೀಡುವಾಗ ಪೋಟೋ, ಸಹಿ ತೋಗಬೇಕು.

ಆದರೆ ಇವರು ಹೆಬ್ಬಟ್ಟು ಒತ್ತಾರ. ಇದು ಯಾರದು ಎಂಬುದು ಗೋತ್ತಿಲ್ಲ. ಸಾಕ್ಷಿಗಳ ಹೆಸರು ಇಲ್ಲ. ಸಹಿ ಸಹ ಇಲ್ಲ. ವಿಚಿತ್ರವೆಂದರೆ ಸರ್ಕಾರದ ಸಂಯುಕ್ತ ಮೋಜಣಿ ಪತ್ರಿಕೆಯಲ್ಲಿ ಗಿಡಗಳು ಇದ್ದ ಬಗ್ಗೆ ಮಾಹಿತಿ ನೀಡಿಲ್ಲ.

ಆದರೆ, ಗೆಜೆಟ್ ಆದ ಬಳಿಕ ನಕಲಿ ದಾಖಲೆಗಳನ್ನು ತಯಾರಿಸಿ ಹಣ ಹೊಡೆದಿದ್ದಾರೆ. ಸ್ಥಳದಲ್ಲಿ ಹೋಗಿ ನೋಡಿದಾಗ ಗಿಡಗಳು ಇಲ್ಲ.

ತೋಟಗಾರಿಕೆ ಇಲಾಖೆಯವರು ಸ್ಥಳ ಪರಿಶೀಲನೆ ನಡೆಸದೆ ಹಣ ಬಿಡುಗಡೆಗೆ ಸಹಕರಿಸಿದ್ದಾರೆ. ಹೀಗಾಗಿ ಇದರಲ್ಲಿ ತೋಟಗಾರಿಕೆ ಇಲಾಖೆಯ ಅಧಿಕಾರಿ ವರ್ಗದವರು ಶಾಮೀಲಾಗಿದ್ದಾರೆ ಎಂಬ ಸಂಶಯವಿದೆ.

ತೋಟಗಾರಿಕೆ ಇಲಾಖೆಯ ಅಧಿಕಾರಿ ವರ್ಗದವರು ಸ್ಥಳಕ್ಕೆ ತೆರಳಿ ಭೇಟಿ ನೀಡಿ ಗಿಡಗಳನ್ನು ಖುದ್ದಾಗಿ ಪರಿಶೀಲನೆ ನಡೆಸಿ ವರದಿ ನೀಡಬೇಕು. ಆದರೆ ಈ ಪ್ರಕರಣದಲ್ಲಿ ಅವರ ನಡೆ ಅನುಮಾನಸ್ಪದವಾಗಿದೆ ಎಂದು ದೂರಿದರು.

ಪತ್ರಿಕಾಗೋಷ್ಠಿಯಲ್ಲಿ ವಕೀಲರಾದ ಐ.ಕೆ. ಧರಣಗೌಡರ, ಜನಜಾಗೃತಿ ಸಂಘ ಉಪಾಧ್ಯಕ್ಷ ನಾಗರಾಜ ಕಿರಣಗಿ, ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿ, ಸದಸ್ಯರಾದ ಮಿಥುನ್ ಜಾಧವ, ರೈತ ಮುಖಂಡರಾದ ಗುರು ಅಂಗಡಿ, ಸುರೇಶ ಕೋರಿ, ಬಸವರಾಜ ನಾಯ್ಕ ಕೊತದೊಡ್ಡಿ ಉಪಸ್ಥಿತರಿದ್ದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *