ರಾಜ್ಯ

ಧಾರವಾಡ ಮಹಾನಗರ ಪಾಲಿಕೆ ಆವರಣದಲ್ಲಿ 14ನೇ ದಿನವೂ ಮುಂದುವರಿದ ಸರದಿ ಉಪವಾಸ ಸತ್ಯಾಗ್ರಹ

ಧಾರವಾಡ ಮಹಾನಗರ ಪಾಲಿಕೆ ಆವರಣದಲ್ಲಿ 14ನೇ ದಿನವೂ ಮುಂದುವರಿದ ಸರದಿ ಉಪವಾಸ ಸತ್ಯಾಗ್ರಹ

ಪ್ರತಿಭಟನಾ ಸ್ಥಳಕ್ಕೆ ಕೊನೆಗೂ
ಭೇಟಿ ನೀಡಿ ಮನವಿ ಸ್ವೀಕರಿಸಿದ ಶಾಸಕ ಅರವಿಂದ ಬೆಲ್ಲದ

ಈ ವೇಳೆ ಮಾತನಾಡಿದ ಅವರು, ನಿಮ್ಮ ನ್ತಾಯಯುತ ಬೇಡಿಕೆಗೆ ನಮ್ಮ ಸಹಮತವಿದೆ.

ಪಾಲಿಕೆ ಕಮಿಷನರ್ ಅವರಿಗೆ ಏಳು ತಿಂಗಳ ಸಂಬಳ ಬಿಡುಗಡೆ ಮಾಡುವಂತೆ ಸೂಚಿಸಲಾಗಿತ್ತು. ಆದರೆ 228 ಜನರಿಗೆ ಮಾತ್ರ ಸಂಬಳ ಆಗಿರುವುದು ಗೊತ್ತಿಲ್ಲ.

ಹೀಗಾಗಿ ಇನ್ನುಳಿದ 130 ಜನರಿಗೆ ತಕ್ಷಣ ಸಂಬಳ ನೀಡುವಂತೆ ಸೂಚಿಸಲಾಗುವುದು ಎಂದು ಭರವಸೆ ನೀಡಿದರು.

ಅಲ್ಲದೆ, 358 ನೀರು ಸರಬರಾಜು ನೌಕರರ ಮರು ಸೇರ್ಪಡೆ ಮಾಡಿಕೊಳ್ಳಲು ಮಾತನಾಡಲಾಗುವುದು.

ಮಹಾನಗರ ಪಾಲಿಕೆ ಕೆಲಸಕ್ಕೆ ಸೇರಿ, ಆನಂತರ ಬೇಕಿದ್ದರೆ ಹೋರಾಟ ನಡೆಸಿ ಎಂದು ಈ ಹಿಂದೆ ಹೇಳಿದ್ದೆ, ಈಗಲಾದರೂ ನಾವು ಸೇರಿಸಿಕೊಳ್ಳಿ ಎಂದು ಹೇಳುತ್ತೇನೆ ಹಂತ ಹಂತವಾಗಿ ಸೇರಿಸುವ ಪ್ರಯತ್ನ ಮಾಡುತ್ತೇನೆ.

ಜೊತೆಗೆ ಎಲ್ ಆಂಡ್ ಟಿ ಕಂಪನಿ ನೌಕರರಿಗೆ ಸಂಬಳ ಹೆಚ್ಚಿಸುವ ವಿಶ್ವಾಸವಿದೆ ಎಂದು ಅಭಯ ನೀಡಿದರು.

ಜನಜಾಗೃತಿ ಸಂಘ ಉಪಾಧ್ಯಕ್ಷ ನಾಗರಾಜ ಕಿರಣಗಿ ಮಾತನಾಡಿ,
ಹುಬ್ಬಳ್ಳಿ-ಧಾರವಾಡ ಅವಳಿನಗರಕ್ಕೆ ಕುಡಿಯುವ ನೀರಿನ ಸರಬರಾಜು ಮಾಡುವ 358 ನೌಕರರು ಕಳೆದ 14 ದಿನಗಳಿಂದ ಸರದಿ ಉಪವಾಸ ಸತ್ಯಾಗ್ರಹವನ್ನು ಮಾಡುತ್ತಿದ್ದರೂ ಈವರೆಗೂ ಯಾರೊಬ್ಬರೂ ಕೂಡ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ.

ಮಹಾನಗರ ಪಾಲಿಕೆ ಆಯುಕ್ತರು ರಾಜ್ಯ ಸರ್ಕಾರದ ಆದೇಶವನ್ನು ಗಾಳಿಗೆ ತೂರಿ, ಲಿಖಿತ ರೂಪದಲ್ಲಿ ಆದೇಶ ನೀಡದೆ, ಮೌಖಿಕವಾಗಿ ಕೆಲಸದಿಂದ ವಜಾಗೊಳಿಸಿರುವುದು ಕಾನೂನು ಬಾಹಿರ ಎಂದು ಗಮನ ಸೆಳೆದರು.

ಈ ಸಂದರ್ಭದಲ್ಲಿ ನೀರು ಸರಬರಾಜು ನೌಕರರ ಸಂಘದ ಪ್ರಮುಖರಾದ ಮಹಾಂತೇಶ ಗೌಡರ, ಉಪಸ್ಥಿತರಿದ್ದರು.

ಫೆ. 15ಕ್ಕೆ ಸವದತ್ತಿ ಜಾಕ ವೆಲ್ ಬಂದ್…

ಗರಗ ಮಡಿವಾಳೇಶ್ವರ ಮಠದ ಪೀಠಾಧಿಪತಿ ಶ್ರೀ ಚನ್ನಬಸವ ಮಹಾಸ್ವಾಮಿಗಳು ಲಿಂಗೈಕ್ಯರಾದ ಪ್ರಯುಕ್ತ ಅವರ ಅಂತ್ಯಕ್ರಿಯೆ ಯಲ್ಲಿ ಭಾಗವಹಿಸುವ
ಹಿನ್ನೆಲೆಯಲ್ಲಿ ಫೆ. 13 ರಂದು ಬಂದ್ ಮಾಡಲು ಉದ್ದೇಶಿಸಲಾಗಿದ್ದ ಸವದತ್ತಿ ಜಾಕ್ ಬೆಲ್ ಬಂದ್ ಫೆ. 15ರಂದು ಮುಂದೂಡಿಕೆ ಮಾಡಲಾಗಿದೆ.

ಸವದತ್ತಿ ಭಾಗದ ಜನತೆ ಹಾಗೂ ಹುಬ್ಬಳ್ಳಿ-ಧಾರವಾಡ ‌ಮಹಾನಗರ ಜನತೆ ಮತ್ತು
ಎಲ್ಲಾ ಹೋರಾಟಗಾರರು ಫೆ. 15ರ ಜಾಕ್ ವೆಲ್ ಬಂದ್ ಗೆ ತಮ್ಮ ಸಂಪೂರ್ಣ ಬೆಂಬಲ ನೀಡಬೇಕು ಎಂದು ಜನಜಾಗೃತಿ ಸಂಘದ ಅಧ್ಯಕ್ಷ   ಬಸವರಾಜ ಕೊರವರ ಹಾಗೂ ಸೌರಭ್ ಚೌಪ್ರಾ ಮನವಿ ಮಾಡಿದ್ದಾರೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *