ರಾಜ್ಯ

ಬೆಳಗಾವಿ ಜಿಲ್ಲೆಯ ಮಂತ್ರಿಗಳು ಕೇವಲ ಅಲಂಕಾರಿಕ ಗೊಂಬೆಗಳೆ? ಪತ್ರ ವೈರಲ್

ಬೆಳಗಾವಿ prajakiran.com : ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ
ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಅವರು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ
ಬರೆದ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಪತ್ರದಲ್ಲಿ ಚಿನ್ನ ಕದ್ದ ಹಗರಣದಲ್ಲಿ ಸಂಜೆಯೊಳಗೆ
ಪೋಲೀಸ್ ಅಧಿಕಾರಿಗಳ ಎತ್ತಂಗಡಿ
ಸಾಧ್ಯವಾಗುವದಾದರೆ ಜನರ
ಜೀವದೊಂದಿಗೆ ಚೆಲ್ಲಾಟವಾಡುವ
ವೈದ್ಯಾಧಿಕಾರಿಗಳ ಎತ್ತಂಗಡಿ ಏಕೆ
ಸಾಧ್ಯವಿಲ್ಲ? ಎಂದು ಪ್ರಶ್ನಿಸಿದ್ದಾರೆ.

ಗೃಹ ಸಚಿವರಿಗಿರುವ
ಅಧಿಕಾರ ನಮ್ಮ ಉಪಮುಖ್ಯಮಂತ್ರಿ
ದ್ವಯರಿಗೆ ಏಕಿಲ್ಲ? ಎಂದು ಗುಡುಗಿದ್ದಾರೆ.

ಪತ್ರದ ಸಾರಾಂಶ ಹೀಗಿದೆ.

ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳಕ್ರಿಯಾ ಸಮಿತಿ,ಬೆಳಗಾವಿ

ದಿ.30.5.2021

(ಮುಖ್ಯಮಂತ್ರಿಗಳಿಗೆ ಇ ಮೇಲ್
ಮೂಲಕ ಕಳಿಸಲಾಗಿದೆ)

ಬೆಳಗಾವಿ ಜಿಲ್ಲೆಯ ಮಂತ್ರಿಗಳು
ಕೇವಲ ಅಲಂಕಾರಿಕ ಗೊಂಬೆಗಳೆ?

ಚಿನ್ನ ಕದ್ದ ಹಗರಣದಲ್ಲಿ ಸಂಜೆಯೊಳಗೆ
ಪೋಲೀಸ್ ಅಧಿಕಾರಿಗಳ ಎತ್ತಂಗಡಿ
ಸಾಧ್ಯವಾಗುವದಾದರೆ ಜನರ
ಜೀವದೊಂದಿಗೆ ಚೆಲ್ಲಾಟವಾಡುವ
ವೈದ್ಯಾಧಿಕಾರಿಗಳ ಎತ್ತಂಗಡಿ ಏಕೆ
ಸಾಧ್ಯವಿಲ್ಲ? ಗೃಹ ಸಚಿವರಿಗಿರುವ
ಅಧಿಕಾರ ನಮ್ಮ ಉಪಮುಖ್ಯಮಂತ್ರಿ
ದ್ವಯರಿಗೆ ಏಕಿಲ್ಲ?

ಸನ್ಮಾನ್ಯ ಮುಖ್ಯಮಂತ್ರಿ
ಶ್ರೀ ಯಡಿಯೂರಪ್ಪನವರಿಗೆ,

ಕೋವಿಡ್ ಸೋಂಕಿತರಿಗೆ ಸಂಬಂಧ
ಬೆಳಗಾವಿಯ ಬಿಮ್ಸ ಪಡೆಯುತ್ತಿರುವ
ಕುಖ್ಯಾತಿಯ ಬಗ್ಗೆ ತಮಗೆ ವಿವರಿಸುವ
ಅವಶ್ಯಕತೆಯೇನಿಲ್ಲ.ಎಲ್ಲವೂ ತಮ್ಮ ಗಮನಕ್ಕೆ ಬಂದೇ ಇದೆ.ಮಾಧ್ಯಮದಲ್ಲಿ ವರದಿಯಾಗದ ಸಂಗತಿಗಳೇ ಉಳಿದೇ
ಇಲ್ಲ.

ತಮ್ಮ ಸರಕಾರದ ಇಬ್ಬರು ಉಪಮುಖ್ಯಮಂತ್ರಿಗಳು ಬೆಳಗಾವಿಗೆ ಬಂದು ಮೀಟಿಂಗ್ ಮೇಲೆ ಮೀಟಿಂಗ್ ಮಾಡುತ್ತಲೇ ಇದ್ದಾರೆ.ಒಬ್ಬರಂತೂ ಬಿಮ್ಸ ಒಳಗಡೆ ಹೋಗಿ ಎಲ್ಲವನ್ನೂ ಹೊರಜಗತ್ತಿಗೆ ತಿಳಿಸಿದ್ದಾರೆ.

ಅಲ್ಲಿಯ ಅವ್ಯವಸ್ಥೆ ನೋಡಿ ಒಬ್ಬ ಸರಕಾರದ ಉಪಮುಖ್ಯಮಂತ್ರಿಯಾಗಿ ಹೇಳಲಾಗದ ಶಬ್ದಗಳನ್ನು ಹೇಳಿದ್ದಾರೆ.ವಿರೋಧಿ ಪಕ್ಷದ ನಾಯಕರ ಪಾತ್ರವನ್ನೂ ಅವರೇ ಆಡಿದ್ದಾರೆ.ಆದರೆ ನಮಗೆ ಹೇಳಲಾಗದ ವಿಷಯವನ್ನು ತಮ್ಮೆದುರು ಹೇಳುತ್ತಾರಂತೆ!
ಬೆಳಗಾವಿ ಜಿಲ್ಲೆಯಲ್ಲಿ ಐವರು
ಮಂತ್ರಿಗಳಿದ್ದಾರೆ.ನೆರೆಯ ಜಿಲ್ಲೆಯ
ಉಪಮುಖ್ಯಮಂತ್ರಿಗಳನ್ನು ನಮ್ಮ ಜಿಲ್ಲೆಯ ಉಸ್ತುವಾರಿಯನ್ನಾಗಿ ನೇಮಿಸಿದ್ದೀರಿ.ಇವರಾರೂ ಇಲ್ಲಿ ಏನೂ ಮಾಡಲಾಗದೇ ಕೈ ಕೈ ಹಿಸುಕಿಕೊಳ್ಳುತ್ತಿದ್ದಾರೆ.ಒಬ್ಬ ರೋಗಿಗೆ ಬೆಡ್ ಕೊಡಿಸಲು,ಡ್ರಗ್ ಕೊಡಿಸಲು ಇವರುಗಳೇ ಖಾಸಗಿ ಆಸ್ಪತ್ರೆಗಳಿಗೆ ಫೋನ್ ಮಾಡುವ
ಪರಿಸ್ಥಿತಿ ಇದೆಯೆಂದರೆ ಇದಕ್ಕಿಂತಲೂ
ನಾಚಿಗೇಡಿನ ಸಂಗತಿ ಯಾವದಿದೆ?
ಬಿಮ್ಸ ಕೋವಿಡ್ ವಾರ್ಡಿನಲ್ಲಿಯೇ ಶವಗಳನ್ನು ಇರಿಸಿರುವದು ಇಲ್ಲಿಯ ಪರಿಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ.
ಇಷ್ಟೆಲ್ಲ ನಡೆದರೂ ಬಿಮ್ಸಗೆ ಪರಿಣಾಮಕಾರಿ ಚಿಕಿತ್ಸೆ ನೀಡಲು ತಮ್ಮ ಸರಕಾರ ಹಿಂದೇಟು ಹಾಕುತ್ತಿದೆ ಎಂಬ ಬಗ್ಗೆ ಸಾರ್ವಜನಿಕರಲ್ಲಿ ಸಂಶಯ ಉಂಟಾಗಿದೆ.ಈ ಸಂಬಂಧ ತಮ್ಮ ಕೈಗಳನ್ನು ಕಟ್ಟಿ ಹಾಕಿದ ಶಕ್ತಿಗಳು ಅದೆಷ್ಟು ಬಲಾಢ್ಯವಾಗಿರಬಹುದು?
ಇತ್ತೀಚೆಗೆ ನಮ್ಮ ಜಿಲ್ಲೆಯ ಪೋಲೀಸ್ ಅಧಿಕಾರಿಗಳು ಚಿನ್ನ “ಕದ್ದ”ಪ್ರಕರಣದಲ್ಲಿ ಸಿಕ್ಕಿಕೊಂಡಾಗ ಸಂಜೆಯೊಳಗೆ ಅತ್ಯುನ್ನತ ಮಟ್ಟದಿಂದ ಕೆಳಗಿನವರೆಗಿನ ಮೂವರು ಅಧಿಕಾರಿಗಳ ಎತ್ತಂಗಡಿಯಾಯಿತು.ರಾಜ್ಯದ ಗೃಹಸಚಿವರು ಈ ದಿಸೆಯತ್ತ ತಮಗಿರುವ ಅಧಿಕಾರವನ್ನು ಚಲಾಯಿಸಿದರು.ಈ ಸಚಿವರಿಗೆ ಇರುವ ಅಧಿಕಾರ ನಮ್ಮ ಡಿಸಿಎಮ್ ಗಳಿಗೆ ಏಕಿಲ್ಲ?ನಿಮ್ಮ ಸರಕಾರ
ಚಿನ್ನಕ್ಕೆ ನೀಡಿದ ಪ್ರಾಮುಖ್ಯತೆಯನ್ನು ಜನರ ಜೀವಕ್ಕೆ ನೀಡಲಿಲ್ಲವೆಂದು ನಾವು ಭಾವಿಸಿದರೆ ತಪ್ಪೇನು?
ಒಂದು ಸರಕಾರಿ ಆಸ್ಪತ್ರೆಯನ್ನು ಸುಧಾರಿಸಲು ತಾವೇ ಬೆಳಗಾವಿಗೆ
ಭೆಟ್ಟಿ ನೀಡುತ್ತಿದ್ದೀರೆಂದು ಗೊತ್ತಾಗಿದೆ.ಆದರೆ ತಾವೂ ಭೆಟ್ಟಿ ನೀಡಿದ ಮೇಲೂ ಸದ್ಯದ ಸ್ಥಿತಿಯೇ ಮುಂದುವರೆಯಬಾರದು.
ಒಂದು ವೇಳೆ ಮುಂದುವರೆದರೆ ಅದಕ್ಕಿಂತ ಬೇರೆ ದುರಂತ ಮತ್ತೊಂದಿಲ್ಲ.ಏನಾದರೂ ಒಂದು ಕಠಿಣ ಕ್ರಮದ ನಿರ್ಧಾರ
ಮಾಡಿಯೇ ತಾವು ಬೆಳಗಾವಿಗೆ
ಬರುತ್ತೀರೆಂದು ನಾನು ಭಾವಿಸಿದ್ದೇನೆ.
ಬನ್ನಿ,ತಮಗೆ ಬೆಳಗಾವಿಗೆ
ಸ್ವಾಗತ.
ವಂದನೆಗಳೊಂದಿಗೆ,
ಅಶೋಕ ಚಂದರಗಿ
ಅಧ್ಯಕ್ಷರು,ಬೆಳಗಾವಿ ಜಿಲ್ಲಾ
ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ
ಹಾಗೂ ಹಿರಿಯ ಪತ್ರಕರ್ತರು
ಮೊ:9620114466

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *