ಅಂತಾರಾಷ್ಟ್ರೀಯ

ಆಸ್ಟ್ರೇಲಿಯಾ ಸರಕಾರದಿಂದ ಅಜ್ಜ ಅಜ್ಜಿಯ ಮಡಿಲು ಸೇರಲಿರುವ ಕಂದಮ್ಮಗಳು…!

ಧಾರವಾಡ ಪ್ರಜಾಕಿರಣ.ಕಾಮ್ : ಕಳೆದ ವರ್ಷ ಸಹಕಾರ ರತ್ನ ಪ್ರೊ ಎಸ.ಎಸ.ದೇಸಾಯಿಯವರ ಪುತ್ರಿ ಪ್ರಿಯದರ್ಶಿನಿ ಆಸ್ಟ್ರೇಲಿಯಾದಲ್ಲಿ ನಡೆದ‌ ಘಟನೆಗಳನ್ವಯ ಮನನೊಂದು ಭಾರತಕ್ಕೆ ಆಗಮಿಸಿದ ಸಂದರ್ಭದಲ್ಲಿ ಸವದತ್ತಿಯಲ್ಲಿ ಆತ್ಮಹತ್ಯೆಮಾಡಿಕೊಂಡು ಸಾವನ್ನಪ್ಪಿದ್ದರು.

ಈ ಸಂದರ್ಭದಲ್ಲಿ ಅವರ ನಿವಾಸಕ್ಕೆ ಭೇಟಿ ಮಾಡಿದ್ದ, ಕೇಂದ್ರ ಸಚಿವರು ಪ್ರಲ್ಹಾದ ಜೋಶಿಯವರು, ಮೊಮ್ಮಕ್ಕಳನ್ನ ಆಸ್ಟ್ರೇಲಿಯಾದಿಂದ ಭಾರತಕ್ಕೆ ಕರೆಸಿಕೊಡುವುದಾಗಿ ಮಾತು ನೀಡಿದ್ದರು.

ಅದರನ್ವಯ ಕ್ಷೀಪ್ರವಾಗಿ ಕಾರ್ಯಗತರಾದ ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು ವಿದೇಶಾಂಗ ಸಚಿವ ಡಾ.ಎಸ ಜೈಶಂಕರ ಅವರ ಗಮನಕ್ಕೆ ವಿಷಯ ತಂದು ಆಸ್ಟ್ರೇಲಿಯಾ ಸರಕಾರದೊಂದಿಗೆ ಮಾತುಕತೆ ನಡೆಸಲಾಯಿತು.

ಇದರ ಫಲವಾಗಿ ಆಸ್ಟ್ರೇಲಿಯಾ ಸರಕಾರ ಪ್ರೊಎಸ‌.ಎಸ ದೇಸಾಯಿಯವರ ಮೊಮ್ಮಕ್ಕಳನ್ನ ಅವರ ಅಳಿಯನಿಗೆ ಹಸ್ತಾಂತರಿಸಿದ್ದು , ಜುಲೈ11ನೆ ತಾರೀಖು ಭಾರತಕ್ಕೆ ಆಗಮಿಸುವರು ಹಾಗೂ ಅಜ್ಜ ಅಜ್ಜಿಯ ಮಡಿಲನ್ನು ಸೇರಲಿದ್ದಾರೆ.

ಕೊಟ್ಟಮಾತಿನಂತೆ ಪ್ರೊ ಎಸ ಎಸ ದೇಸಾಯಿಯವರ ಮೊಮ್ಮಕ್ಕಳನ್ನ ಭಾರತಕ್ಕೆ ಕರೆತರಲು ಸತತ ಪ್ರಯತ್ನ ಮಾಡಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು ಡಾ ಎಸ ಜಯಶಂಕರ ಹಾಗೂ ಕೇಂದ್ರದ ಮೋದಿ ಸರ್ಕಾರಕ್ಕೆ ಧನ್ಯವಾದಗಳು ಎಂದು ಮಾಜಿಮಹಾಪೌರರಾದ ಈರೇಶ ಅಂಚಟಗೇರಿ ಅವರು ಸಮಸ್ತ ಧಾರವಾಡ ಜನತೆ ಪರವಾಗಿ ಕೇಂದ್ರ ಸಚಿವರು ಪ್ರಲ್ಹಾದ ಜೋಶಿಯವರಿಗೆ ಅಭಿನಂದನೆಗಳು ಸಲ್ಲಿಸಿದ್ದಾರೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *