ಅಂತಾರಾಷ್ಟ್ರೀಯ

ಧಾರವಾಡದ ಯುವತಿಯಿಂದ 9 ದಿನಗಳಲ್ಲಿ 65೦೦ ಕಿ.ಮೀ ಬೈಕ್ ಪ್ರಯಾಣ

ಧಾರವಾಡ ಪ್ರಜಾಕಿರಣ.ಕಾಮ್ : ನಗರದ ವಿದ್ಯಾರ್ಥಿನಿಯೊಬ್ಬಳು ಬೈಕ್ ಮೇಲೆ ಜಮ್ಮು-ಕಾಶ್ಮೀರಕ್ಕೆ ಏಕಾಂಗಿಯಾಗಿ ಸಂಚಾರ ಕೈಕೊಂಡು ಬುಧವಾರ ರಾತ್ರಿ‌ ವಾಪಸ್ಸಾಗಿದ್ದಾಳೆ.

ಇಲ್ಲಿನ ಡಾ.ಆರ್. ಎನ್.ಶೆಟ್ಟಿ ಕ್ರೀಡಾಂಗಣ ಬಳಿಯ ಕೆ.ಎಚ್.ಬಿ.ಕಾಲನಿ ನಿವಾಸಿ,18 ವರ್ಷದ ಪ್ರತೀಕ್ಷಾ ಹರವಿಶೆಟ್ಟರ್ ಸಾಧನೆಗೈದ ವಿದ್ಯಾರ್ಥಿನಿ.

ಸಂಚಾರ ನಿಯಮ ಪಾಲನೆ ಮತ್ತು
ಬೈಕ್ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸುವ ಬಗ್ಗೆ ಜನಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತೀಕ್ಷಾ ಸಂಚಾರ ಕೈಕೊಂಡಿದ್ದಳು.

ಕಳೆದ‌ ದಿ.13 ರಂದು ನಗರದಿಂದ ‌ಕೆಟಿಎಂ ಡ್ಯೂಕ್ -390 ಬೈಕ್ ಮೇಲೆ‌ ಹೊರಟ ಅವಳನ್ನು ಧಾರವಾಡ ಜಿಲ್ಲಾ ಸರಕಾರಿ‌ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ‌ಎಸ್.ಎಫ್.ಸಿದ್ದನಗೌಡರ, ಜಿಲ್ಲಾ ಶಿಕ್ಷಕರ‌ ಸಂಘದ ಪ್ರಧಾನ ಕಾರ್ಯದರ್ಶಿ ರಾಜಶೇಖರ ಹೊನ್ನಪ್ಪನವರ, ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಸದಾನಂದ ಅಮರಾಪೂರ, ಸಾರಿಗೆ ಅಧಿಕಾರಿ ಭೀಮಣ್ಣವರ, ನೌಕರರ ಸಂಘದ ಗಿರೀಶ ಚೌಡಕಿ ಮತ್ತಿತರರು ಸತ್ಕರಿಸಿ ಬೀಳ್ಕೊಟ್ಟಿದ್ದರು.

ನಂತರ ಧಾರವಾಡದಿಂದ ಲೋನಾವಾಲಾ, ವಡೋದರ, ಜೋಧಪುರ,ಅಮೃತಸರ ಮಾರ್ಗವಾಗಿ ಶ್ರೀನಗರ ತಲುಪಿದಳು.

ಅಲ್ಲಿ ಲಾಲಚೌಕ್ ನಲ್ಲಿ ಕರುನಾಡಿನ ಬಾವುಟ ಹಾರಿಸಿದ ಸಂದರ್ಭದಲ್ಲಿ ಬ್ರಿಗೇಡಿಯರ್ ಮನೋಜ ಜೋಶಿ ಇತರರು ಸನ್ಮಾನಿಸಿದರು.

ಮರುದಿನದ ಶ್ರೀನಗರದಿಂದ ಪ್ರಯಾಣ ಆರಂಭಿಸಿ ಜಲಂಧರ, ಅಜ್ಮೇರ, ಧುಲೆ ಮಾರ್ಗವಾಗಿ 9 ನೇ ದಿನಕ್ಕೆ ಧಾರವಾಡ ತಲುಪಿದಳು

ಸತತ ಒಂಬತ್ತು ದಿನಗಳ‌ ಕಾಲ ಬೈಕ್ ಮೇಲೆ ತೆರಳಿ ಬುಧವಾರ ರಾತ್ರಿ‌ನಗರಕ್ಕೆ ಆಗಮಿಸಿದ ಪ್ರತೀಕ್ಷಾಳನ್ನು ಹಿರಿಯ ನ್ಯಾಯವಾದಿ ಶೇಖರ ಕವಳಿ, ಅಶೋಕ ಶೆಟ್ಟರ್, ಸಂಗಮೇಶ ಹನಸಿ‌, ಮಂಜುನಾಥ ಹಿರೇಮಠ, ರಾಜಶೇಖರ ಉಪ್ಪಿನ ಇತರರು‌ ಬರಮಾಡಿಕೊಂಡರು.

ಶಿಕ್ಷಕ ಶಿವಯೋಗಿ ಹರವಿಶೆಟ್ಟರ್ ಅವರ ಪುತ್ರಿ‌ ಪ್ರತೀಕ್ಷಾ, ಹುಬ್ಬಳ್ಳಿಯ ಬಿ.ವಿ.ಬಿ. ಕಾಲೇಜಿನಲ್ಲಿ ಬಿ.ಸಿ.ಎ.‌ಎರಡನೇ ಸೆಮಿಸ್ಟರ್ ವಿದ್ಯಾರ್ಥಿನಿ.

ಸುಮಾರು 65೦೦ ಕಿ.ಮೀ. ದೂರವನ್ನು ನಿರಂತರ 9 ದಿನಗಳಲ್ಲಿ ‌ಕ್ರಮಿಸುವ ಮೂಲಕ ” ಎಂಗೆಸ್ಟ್ ಸೊಲೋ‌ ರೈಡರ್” ಎಂಬ ಹೆಗ್ಗಳಿಕೆಗೆ ಪ್ರತೀಕ್ಷಾ ಪಾತ್ರಳಾಗಿದ್ದಾಳೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *