5 ಗಂಟೆ 7 ನಿಮಿಷದಲ್ಲಿ 23.1 ಕಿಲೋವಮೀಟರ್ ರನ್ನಿಂಗ್, 90 ಕಿಮೀ ಸೈಕ್ಲಿಂಗ್ ಪೂರ್ಣಗೊಳಿಸಿದ ಖ್ಯಾತಿ
ಅಹಮದ್ ನಗರ (ಮಹಾರಾಷ್ಟ್ರ) prajakiran.com : ಕರ್ನಾಟಕ ಪೊಲೀಸ್ ಇಲಾಖೆಯ ಹಿರಿಯ ಇನ್ಸಪೆಕ್ಟರ್ ಹಾಗೂ ಸದ್ಯ ಹುಬ್ಬಳ್ಳಿಯ ಹೆಸ್ಕಾಂ ಜಾಗೃತಿ ದಳದಲ್ಲಿ ಕೆಲಸ ನಿರ್ವಹಿಸುತ್ತಿರುವ ಮುರುಗೇಶ ಚನ್ನಣ್ಣವರ ಮತ್ತೊಂದು ಐತಿಹಾಸಿಕ ದಾಖಲೆ ಬರೆದಿದ್ದಾರೆ.
ಇನ್ಸಪೆಕ್ಟರ್ ಮುರುಗೇಶ ಚನ್ಬಣ್ಣವರ ಈ ಹಿಂದೆ ನಡೆದ ಹಲವು ಸ್ಪರ್ಧೆಯಲ್ಲಿ ಭಾಗವಹಿಸಿ ಸಾಧನೆ ಮಾಡಿ, ಹತ್ತು ಹಲವು ಪ್ರಶಸ್ತಿಗಳನ್ನು ಗಳಿಸಿದ್ದರು.
ಆ ಮೂಲಕ ರಾಜ್ಯದ ಹಾಗೂ ದೇಶದ ಪೊಲೀಸರ ಗಮನ ಸೆಳೆದಿದ್ದರು.
ಈಗ ಅದಕ್ಕಿಂತ ದೊಡ್ಡ ಪ್ರಮಾಣದಲ್ಲಿ ಸಾಧನೆ ಮಾಡಿದ್ದು,
5 ಗಂಟೆ 7 ನಿಮಿಷದಲ್ಲಿ 23.1 ಕಿಲೋ ಮೀಟರ್ ರನ್ನಿಂಗ್, 90 ಕಿ.ಮೀ ಸೈಕ್ಲಿಂಗ್ ಪೂರ್ಣಗೊಳಿಸಿ ಎರಡನೇ ಸ್ಥಾನ ಗಳಿಸಿದ್ದಾರೆ.
ರಾಷ್ಟ್ರದ ವಿವಿಧ ಭಾಗಗಳಿಂದ ಆಗಮಿಸಿದ ವೃತ್ತಿ ಕ್ರೀಡಾಪಟುಗಳನ್ನು ಹಿಂದಿಕ್ಕಿ
ಎರಡನೇ ಸ್ಥಾನವನ್ನು ಮುಡಿಗೇರಿಸಿಕೊಂಡಿದ್ದರೆ,
ವಯಸ್ಸಿನ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಬಿಡುವಿಲ್ಲದ
ಕೆಲಸ ನಿರ್ವಹಿಸುತ್ತಲೇ ಈ ದಾಖಲೆ ಮಾಡುವ ಮೂಲಕ ಕರ್ನಾಟಕದ ಪೊಲೀಸ್ ಹಿರಿಮೆಯನ್ನ ಬಾನೆತ್ತರಕ್ಕೆ ಹೆಚ್ಚಿಸಿದ್ದಾರೆ.
ಅವರ ಸಾಧನೆಗೆ ನಮ್ಮ ಪ್ರಜಾಕಿರಣ.ಕಾಮ್ ದೊಂದು ಶುಭ ನಮನ.