prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
ಅಂತಾರಾಷ್ಟ್ರೀಯ

ಮಾತಿಗೆ ತಪ್ಪಿರುವ ಕಾಂಗ್ರೆಸ್, ಗ್ಯಾರೆಂಟಿಯಲ್ಲಿ ದೊಖಾ ಎಂದ ಮಾಜಿ ಸಿಎಂ

*ಕಾಂಗ್ರೆಸ್ ನಿಂದ ರಾಜ್ಯವನ್ನು ಆರ್ಥಿಕ ಸಂಕಷ್ಟಕ್ಕೆ ನೂಕುವ ಕೆಲಸ : ಮಾಜಿ ಸಿಎಂ ಬಸವರಾಜ ಬೊಮ್ಮಾಯಿ‌* ಬೆಂಗಳೂರು ಪ್ರಜಾಕಿರಣ.ಕಾಮ್ : ಉಚಿತ ಗ್ಯಾರೆಂಟಿ ಯೋಜನೆಗಳ ಜಾರಿಗೊಳಿಸುವ ವಿಚಾರದಲ್ಲಿ ಮಾತಿಗೆ ತಪ್ಪಿರುವ ಕಾಂಗ್ರೆಸ್ ನ ನಿಜ ಬಣ್ಣ ಬಯಲಾಗಿದ್ದು, ಗ್ಯಾರೆಂಟಿ ಯೋಜನೆ ಜಾರಿ ಮಾಡಲು ರಾಜ್ಯವನ್ನು ಆರ್ಥಿಕ ಸಂಕಷ್ಟಕ್ಕೆ ನೂಕುವ ಕೆಲಸ ಮಾಡಬಾರದು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಹೇಳಿದರು. ಇಂದು ಬೆಂಗಳೂರಿನ ಸರ್ಕಾರಿ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. ಕಾಂಗ್ರೆಸ್ ಚುನಾವಣೆ ಪೂರ್ವದಲ್ಲಿ ಜನರಿಗೆ ಬಹಳಷ್ಟು […]

ಅಂತಾರಾಷ್ಟ್ರೀಯ

ಐದು ಗ್ಯಾರಂಟಿ ಘೋಷಣೆ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು ಪ್ರಜಾಕಿರಣ.ಕಾಮ್ : ಶಾಲಾ ವಿದ್ಯಾರ್ಥಿನಿಯರು ಸೇರಿದಂತೆ ರಾಜ್ಯದ ಎಲ್ಲಾ ವರ್ಗದ ಮಹಿಳೆಯರಿಗೆ ಎಸಿ ಹಾಗೂ ಲಕ್ಷುರಿ ಬಸ್ ಗಳನ್ನು ಹೊರತುಪಡಿಸಿ ಇತರೆ ಎಲ್ಲಾ ಬಸ್ ಗಳಲ್ಲಿ ರಾಜ್ಯದೊಳಗೆ ಉಚಿತ ಪ್ರಯಾಣ ಸೌಲಭ್ಯ ನೀಡಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಅವರು ಶುಕ್ರವಾರ ಸಚಿವ ಸಂಪುಟ ಸಭೆ ಬಳಿಕ ಐದು ಗ್ಯಾರಂಟಿ ಕುರಿತು ವಿವರ ನೀಡಿದರು. ಜೂನ್ 11 ರಂದು “ಶಕ್ತಿ” ಯೋಜನೆಗೆ ಚಾಲನೆ ನೀಡಲಿದ್ದು, ಶೇ. 94 ರಷ್ಟು ಮಹಿಳಾ ಪ್ರಯಾಣಿಕರು ಯೋಜನೆಯ ಲಾಭ ಪಡೆಯಲಿದ್ದಾರೆ […]

ಅಂತಾರಾಷ್ಟ್ರೀಯ

ಚಾಮರಾಜನಗರದಲ್ಲಿ ಸಣ್ಣ ವಿಮಾನ ಪತನ : ತಪ್ಪಿದ ಅನಾಹುತ, ಪೈಲಟ್ ಗಳು ಪಾರು….!

ಚಾಮರಾಜನಗರ ಪ್ರಜಾಕಿರಣ.ಕಾಮ್ : ಚಾಮರಾಜನಗರ ತಾಲೂಕಿನ ಭೋಗಾಪುರ ಗ್ರಾಮದ ಬಳಿ ಸಣ್ಣ ವಿಮಾನವೊಂದು ಪತನಗೊಂಡಿರುವ ಘಟನೆ ನಡೆದಿದೆ. ಗುರುವಾರ ಮಧ್ಯಾಹ್ನ 12 ಗಂಟೆ ಸಮಯದಲ್ಲಿ ಈ ವಿಮಾನ ಪತನವಾಗಿದೆ. ವಿಮಾನದಲ್ಲಿ ಇಬ್ಬರು ಪೈಲಟ್ ಗಳು ಇದ್ದು ಅವರು ಪ್ಯಾರಾಚೂಟ್ ಮೂಲಕ ಪಾರಾಗಿದ್ದಾರೆ. ಪತನವಾದ ವಿಮಾನದ ಅವಶೇಷ ನೋಡಲು ಅಕ್ಕ ಪಕ್ಕದ ಗ್ರಾಮಸ್ಥರು ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದಾರೆ. ಇದು ಹೆಚ್ ಎ ಎಲ್ ಗೆ ಸೇರಿದ ಲಘು ಯುದ್ದ ವಿಮಾನ ಎಂದು ಗೊತ್ತಾಗಿದೆ ಎಲ್ಲಿಂದ ಎಲ್ಲಿಗೆ ಹೋಗುತ್ತಿತ್ತು? ಎಂಬ […]

ಜಿಲ್ಲೆ

ಹುಬ್ಬಳ್ಳಿಯ ಅದರಗುಂಚಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಲೋಕಾಯುಕ್ತರ ಬಲೆಗೆ

ಹುಬ್ಬಳ್ಳಿ ಪ್ರಜಾಕಿರಣ.ಕಾಮ್ ಗ್ರಾಮಸ್ಥರೊಬ್ಬರ ಕೆಲಸ ಮಾಡಿ ಕೊಡಲು ಹಣದ ಬೇಡಿಕೆಯಿಟ್ಟಿದ್ದ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಲೋಕಾಯುಕ್ತರ ಬಲೆಗೆ ಬಿದ್ದಿರುವ ಘಟನೆ ಹುಬ್ಬಳ್ಳಿ    ತಾಲೂಕಿನ ಅದರಗುಂಚಿಯಲ್ಲಿ ನಡೆದಿದೆ. ಪಿಡಿಓ ಮುಜಮ್ಮಿಲ್ ಕರಡಿಗುಡ್ಡ ಎಂಬುವವರೇ ಹತ್ತು ಸಾವಿರ ರೂಪಾಯಿ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಸಿಕ್ಕಿ ಬಿದ್ದಿದ್ದಾರೆ. ಗ್ರಾಮದಲ್ಲಿ ಇ ಸ್ವತ್ತು ಮಾಡಿಕೊಡಲು ಹಣದ ಬೇಡಿಕೆಯನ್ನ ಪಿಡಿಓ ಇಟ್ಟಿದ್ದ, ಗ್ರಾಮಸ್ಥ ಲೋಕಾಯುಕ್ತರ ಮೊರೆ ಹೋಗಿದ್ದ. ಈ ಕುರಿತು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿದೆ. ಪಿಡಿಓ ಮುಜಮ್ಮಿಲ್ […]

ಕ್ರೀಡೆ

ಬಿಜೆಪಿ ಸಂಸದ ಬೃಜಭೂಷಣ್ ಸಿಂಗ್ ಬಂಧಿಸಲು ಸಿಎಂ ಸಿದ್ದರಾಮಯ್ಯ ಆಗ್ರಹ

ಮಹಿಳಾ ಕುಸ್ತಿಪಟುಗಳ ಬಂಧಿಸಿ ದೌರ್ಜನ್ಯ ಎಸಗಿರುವುದಕ್ಕೆ ದೇಶ ವ್ಯಾಪ್ತಿ ಖಂಡನೆ ನವದೆಹಲಿ ಪ್ರಜಾಕಿರಣ.ಕಾಮ್ : ಲೈಂಗಿಕ ದೌರ್ಜನ್ಯ ಎಸಗಿರುವ ಭಾರತ ಕುಸ್ತಿಪಟುಗಳ ಒಕ್ಕೂಟದ ಅಧ್ಯಕ್ಷರ ವಿರುದ್ಧ ಕ್ರಮ ಕೈಗೊಳ್ಳುವಂತೆ ಹೋರಾಡುತ್ತಿರುವ ಮಹಿಳಾ ಕುಸ್ತಿಪಟುಗಳನ್ನು ಪೊಲೀಸರು ಬಂಧಿಸಿ ದೌರ್ಜನ್ಯ ಎಸಗಿರುವುದಕ್ಕೆ ದೇಶ ವ್ಯಾಪ್ತಿ ಖಂಡನೆ ವ್ಯಕ್ತವಾಗಿದೆ. ಇದು ಟ್ವಿಟರ್ ಟ್ರೇಂಡಿಗ್ ಆಗಿದ್ದು, ಬಿಜೆಪಿ ವಿರುದ್ದ ವಿಪಕ್ಷಗಳು ಮುಗಿಬಿದ್ದಿವೆ. ತಕ್ಷಣ ಬಂಧಿತ ಮಹಿಳಾ ಕುಸ್ತಿಪಟುಗಳನ್ನು ಬಿಡುಗಡೆಗೊಳಿಸಬೇಕು ಎಂದು ಆಗ್ರಹ ಕೇಳಿಬಂದಿದೆ. ನೂತನ ಸಂಸತ್ ಭವನದ ಉದ್ಘಾಟನೆಯನ್ನು ಪ್ರಜಾಪ್ರಭುತ್ವದ ಹಬ್ಬ ಎಂಬಂತೆ […]

ಜಿಲ್ಲೆ

ಧಾರವಾಡ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ನಾಗಪ್ಪ ತಿರ್ಲಾಪುರ ಇನ್ನಿಲ್ಲ….!

ಧಾರವಾಡ ಪ್ರಜಾಕಿರಣ.ಕಾಮ್ : ಧಾರವಾಡ ತಾಲೂಕಿನ ಗರಗ ಖಾದಿ ಗ್ರಾಮೋದ್ಯೋಗದ ಸಂಘದ ಮಾಜಿ ಅಧ್ಯಕ್ಷ ಹಾಗೂ ಧಾರವಾಡ ಗ್ರಾಮಾಂತರ ಜಿಲ್ಲೆಯ ಬಿಜೆಪಿ ಉಪಾಧ್ಯಕ್ಷ ನಾಗಪ್ಪ ತಿರ್ಲಾಪುರ ಅವರು ಸೋಮವಾರ ವಿಧಿವಶರಾದರು. ಅವರು ವಿಧಾನ ಸಭಾ ಚುನಾವಣೆ ಸಂದರ್ಭದಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದರು. ವಯೋಸಹಜ ಅನಾರೋಗ್ಯದಿಂದ ಇಂದು ಬೆಳಗಿನ ಜಾವ ಸರಕಾರಿ ಜಿಲ್ಲಾ ಆಸ್ಪತ್ರೆಯಲ್ಲಿ ನಿಧನರಾದರು ಎಂದು ಅವರ ಕುಟುಂಬದ ಸದಸ್ಯರು ತಿಳಿಸಿದ್ದಾರೆ. ಅವರ ಅಗಲಿಕೆಯಿಂದ ಖಾದಿ ಗ್ರಾಮೋದ್ಯೋಗ ಕ್ಷೇತ್ರಕ್ಕೆ ಹಾಗೂ ಬಿಜೆಪಿಗೆ ಗ್ರಾಮೀಣ ಭಾಗದಲ್ಲಿ ತುಂಬಲಾರದ ಹಾನಿಯಾಗಿದೆ. ಮೃತರ […]

ಅಂತಾರಾಷ್ಟ್ರೀಯ

ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದ ಸಚಿವರಿಗೆ ಕೊನೆಗೂ ಖಾತೆ ಹಂಚಿಕೆ

ಬೆಂಗಳೂರು ಪ್ರಜಾಕಿರಣ.ಕಾಮ್ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರದ ಸಂಪುಟ ಸಚಿವರಿಗೆ ಕೊನೆಗೂ ಖಾತೆ ಹಂಚಿಕೆಯಾಗಿದ್ದು, ಅವರ ವಿವರಗಳು ಇಂತಿವೆ. ಸಿದ್ದರಾಮಯ್ಯ ಅವರಿಗೆ ಹಣಕಾಸು, ಗುಪ್ತಚರ, ಐಟಿ, ಬಿಟಿ, ಆಡಳಿತ ಸುಧಾರಣೆ ಹಾಗೂ ಹಂಚಿಕೆ ಆಗದೆ ಉಳಿದ ಖಾತೆ, ಡಿ.ಕೆ. ಶಿವಕುಮಾರ್ ಅವರಿಗೆ ಬೃಹತ್‌ ಮತ್ತು ಮಧ್ಯಮ ನೀರಾವರಿ, ಬೆಂಗಳೂರು ನಗರಾಭಿವೃದ್ಧಿ, ಡಾ. ಜಿ. ಪರಮೇಶ್ವರ ಅವರಿಗೆ ಗೃಹ ಖಾತೆ, ಹೆಚ್.ಕೆ. ಪಾಟೀಲಗೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳು ಹಾಗೂ ಪ್ರವಾಸೋದ್ಯಮ ಖಾತೆ, ಕೆ.ಹೆಚ್. […]

ಅಪರಾಧ

ಧಾರವಾಡದ ರೌಡಿಶೀಟರ್ ಮಹ್ಮದ್ ಕುಡಚಿ ಕೊಂದ 6 ಆರೋಪಿಗಳ ಬಂಧನ

ಧಾರವಾಡದ ರೌಡಿಶೀಟರ್ ಮಹ್ಮದ್ ಕುಡಚಿ ಕೊಂದ 6 ಆರೋಪಿಗಳ ಬಂಧನ 36 ಗಂಟೆಗಳಲ್ಲಿ ಮಿಂಚಿನ ಕಾರ್ಯಾಚರಣೆ ಫ್ರೂಟ್ ಇರ್ಫಾನ್ ಮಗ. ಅರ್ಬಾಜ್ , ರಹೀಂ ಹಾಗೂ ನಾಲ್ಕು ಸಹಚರರ ಹೆಡೆಮುರಿ ಉಪನಗರ ಪೊಲೀಸರು ಧಾರವಾಡ ಪ್ರಜಾಕಿರಣ.ಕಾಮ್ : ಧಾರವಾಡದ ಕಮಲಾಪೂರದಲ್ಲಿ ಮೇ 25 ರಂದು ರಾತ್ರಿ ನಡೆದಿದ್ದ ರೌಡಿಶೀಟರ್ ಮಹ್ಮದ್ ಕುಡುಚಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 36 ಗಂಟೆಗಳಲ್ಲಿ ಕೊಲೆ ಪ್ರಕರಣದ ಎಲ್ಲಾ 6 ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಪ್ರಕರಣದ ತನಿಖೆಗಾಗಿ ಧಾರವಾಡ ಶಹರ ಉಪವಿಭಾಗದ […]

ರಾಜ್ಯ

ಪ್ರಮಾಣ ವಚನ ಸ್ವೀಕರಿಸಿದ 24 ನೂತನ ಸಚಿವರು

ಸಿದ್ದು, ಡಿ.ಕೆ ಕಾಲಿಗೆ ಬಿದ್ದ ಹಲವು ಸಚಿವರು…..!   ಬೆಂಗಳೂರು ಪ್ರಜಾಕಿರಣ.ಕಾಮ್ : ರಾಜ್ಯದ 24 ಜನ ಶಾಸಕರು ಶನಿವಾರ ರಾಜಭವನದಲ್ಲಿ ರಾಜ್ಯಪಾಲ ಥಾವರ್ ಚಂದ್ ಗ್ಲೆಹ್ಲೋಟ್ ಅವರಿಂದ ಪ್ರಮಾಣ ವಚನ ಸ್ವೀಕಾರ ಮಾಡಿದರು. ಗದಗನ ಹೆಚ್ ಕೆ ಪಾಟೀಲ್ , ಕಲಬುರಗಿಯ ಸೇಡಂ ಶಾಸಕ ಶರಣ ಪ್ರಕಾಶ್ ಪಾಟೀಲ್ , ಯಾದಗಿರಿ ಜಿಲ್ಲೆಯ ಶಹಪೂರ ಶಾಸಕ ಶರಣಬಸ್ಸಪ್ಪ ದರ್ಶನಾಪೂರ, ಬೀದರ ಜಿಲ್ಲೆಯ ಭಾಲ್ಕಿ ಶಾಸಕ ಈಶ್ವರ ಖಂಡ್ರೆ ಹಾಗೂ ಬೀದರ್ ಉತ್ತರ ಶಾಸಕ ರಹೀಂ‌ಖಾನ್ , […]

ರಾಜ್ಯ

24 ಶಾಸಕರಿಗೆ ಸಚಿವ ಸ್ಥಾನ ಹಂಚಿಕೆ ಮಾಡಿದ ಕಾಂಗ್ರೆಸ್ ಹೈ‌ಕಮಾಂಡ್

24 ಶಾಸಕರಿಗೆ ಸಚಿವ ಸ್ಥಾನ ಹಂಚಿಕೆ ಮಾಡಿದ ಕಾಂಗ್ರೆಸ್ ಹೈ‌ಕಮಾಂಡ್ ಒಕ್ಕಲಿಗ ನಾಲ್ಕು, ಲಿಂಗಾಯತ 6, ಮರಾಠ 1 ಸೇರಿ ಜಾತಿವಾರು ಹಂಚಿಕೆ ನವದೆಹಲಿ ಪ್ರಜಾಕಿರಣ.ಕಾಮ್ : ಕಳೆದ ಹಲವು ದಿನಗಳಿಂದ ಸಚಿವ ಸ್ಥಾನಕ್ಕಾಗಿ ತೀವ್ರ ಗೊಂದಲ ಹಾಗೂ ಪೈಪೋಟಿ ಏರ್ಪಟ್ಟಿದ್ದ ಸಚಿವ ಸಂಪುಟದ ಸದಸ್ಯರ ಪಟ್ಟಿಗೆ ಕಾಂಗ್ರೆಸ್ ಹೈಕಮಾಂಡ್ ಅಂತಿಮ‌ ಮುದ್ರೆ ಒತ್ತಿದೆ. ಸಿದ್ದರಾಮಯ್ಯ ದೆಹಲಿ ಪ್ರವಾಸದ ವೇಳೆ ಎ ಐಸಿಸಿ ಅಧಿನಾಯಕಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ವಾದ್ರಾ ಭೇಟಿಯಾದ […]