ಧಾರವಾಡ prajakiran. com : ರೆಸ್ಲಿಂಗ್ ಫೆಡರೇಷನ್ ಆಫ್ ಇಂಡಿಯಾ ಇತ್ತೀಚೆಗೆ ಜಾರ್ಖಂಡ್ ರಾಜ್ಯದ ರಾಂಚಿಯಲ್ಲಿ ನಡೆಸಿದ 2022ನೇ ಸಾಲಿನ ಫೆಡರೇಷನ್ ಕಪ್ (ಸೀನಿಯರ್) ಫ್ರೀಸ್ಟೈಲ್, ಗ್ರೀಕೊರೋಮನ್ ಚಾಂಪಿಯನ್ಶಿಪ್ನ ಧಾರವಾಡ ಮೊಹ್ಮದ್ ರಫೀಕ್ ಹೊಳಿ ಚಿನ್ನದ ಪದಕ ಗೆದ್ದಿದ್ದಾರೆ.
ಗ್ರೀಕೋ ರೋಮನ್ ವಿಭಾಗದಲ್ಲಿ ರಫೀಕ್, 77 ಕೆಜಿ ವರ್ಗದಲ್ಲಿ ಚಿನ್ನದ ಪದಕ ಗೆದ್ದರು.
ಈ ಸ್ಪರ್ಧೆಯ್ಲಿ ರಫೀಕ್ ಭಾರತೀಯ ಸೇನೆಯ ಎಸ್ಎಸ್ಬಿಸಿ ತಂಡವನ್ನು ಪ್ರತಿನಿಧಿಸಿದ್ದರು.
ಫೈನಲ್ನಲ್ಲಿ ಅವರು ಹರಿಯಾಣದ ಸೋನು ಅವರನ್ನು 7-3ರಿಂದ ಮಣಿಸಿ ಗೆಲುವಿನ ನಗೆ ಬೀರಿದರು.