ಧಾರವಾಡ prajakiran.com : ಸೃಜನಶೀಲ ಹಿಂದಿ ಲೇಖಕ ಕನ್ನಡ ಭಾಷಾ ವಿದ್ವಾಂಸ ಡಾ.ವಿ.ವಿ. ಹೆಬ್ಬಳ್ಳಿ (೮೬) ಸೋಮವಾರ ಬೆಳಗ್ಗೆ ನಿಧನರಾದರು.
ಅವರು ಪತ್ನಿ, ಲಂಡನ್ ನಲ್ಲಿ ಹಿರಿಯ ವೈದ್ಯರಾಗಿರುವ ಡಾ.ರವಿ ಹೆಬ್ಬಳ್ಳಿ ಸೇರಿದಂತೆ ಮೂವರು ಪುತ್ರರು ಹಾಗೂ ಅಪಾರ ಬಂಧು ಬಳಗ ವನ್ನು ಅಗಲಿದ್ದಾರೆ.
ಹಿಂದಿ-ಕನ್ನಡದ ಕೊಂಡಿ : ಡಾ.ವಿ.ವಿ. ಹೆಬ್ಬಳ್ಳಿ ಬಾಲ್ಯದಿಂದಲೂ ಸ್ವಾಭಿಮಾನಿಯಾಗಿ ಕಷ್ಟಪಟ್ಟು ಓದಿ ಮೇಲೆ ಬಂದವರು.
ಬೆಳಗಾವಿ ಲಿಂಗರಾಜ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಆರಂಭಗೊಂಡ ಅವರ ಸೇವೆ ಬೆಂಗಳೂರಿನ ಎಸ್.ನಿಜ ಲಿಂಗಪ್ಪ ಕಾಲೇಜು ಪ್ರಾಚಾರ್ಯರಾಗುವ ವರೆಗೂ ಸಾಗಿತು.
ಅವರ ಶಿಕ್ಷಣ ಸೇವೆ ನೋಡಿ ಕೆಎಲ್ಇ ಸೊಸೈಟಿ ಅವರನ್ನು ಆಜೀವ ಸದಸ್ಯತ್ವವನ್ನು ನೀಡಿ ಗೌರವಿಸಿತು.
ಕರ್ನಾಟಕ ವಿದ್ಯಾ ವರ್ಧಕ ಸಂಘದ ಕ್ರಿಯಾಶೀಲ ಚಟುವಟಿಕೆ ಗಳಿಗೆ ತೆರೆಯಲ್ಲಿಯೆ ಸಲಹೆ ಸೂಚನೆಗಳನ್ನು ನೀಡುತ್ತಿದ್ದ ಅವರು ಡಾ.ಪಾಪು ಅವರ ಒಡನಾಡಿಯಾಗಿದ್ದರು.
ಹಿಂದಿ ಯಿಂದ ಕನ್ನಡಕ್ಕೆ ಅನೇಕ ಲೇಖನಗಳನ್ನು ಅನುವಾದಿಸಿ ಪ್ರಕಟಿಸಿದ್ದರು.
ಕನ್ನಡ ಮತ್ತು ಹಿಂದಿ ಸಾಹಿತ್ಯ ಮತ್ತು ಸಾಹಿತಿಗಳ ಮಧ್ಯೆ ಸ್ನೇಹದ ಕೊಂಡಿಯಾಗಿ ಸೇವೆ ಸಲ್ಲಿಸಿದ್ದ ಅವರು ಲಂಡನ್, ಪ್ರಾನ್ಸ್, ಅಮೆರಿಕ ಸೇರಿದಂತೆ ಅನೇಕ ದೇಶಗಳಿಗೆ ಶೈಕ್ಷಣಿಕ ಪ್ರವಾಸ ಕೈಗೊಂಡಿದ್ದರು.